ಕಾಂಗ್ರೆಸ್‌ ಕೊಟ್ಟಮಾತು ಉಳಿಸಿಕೊಳ್ಳುತ್ತದೆ, ಮಾಧ್ಯಮದವರು ಕೆಲಸ ಮಾಡಲು ಬಿಡಿ: ಸಚಿವ ಮಲ್ಲಿಕಾರ್ಜುನ್

By Kannadaprabha News  |  First Published Jun 8, 2023, 1:36 PM IST

ನಿಮಗೆ 30 ಸಾವಿರ ರು. ಸಂಬಳ ಬಂದರೆ 60 ಸಾವಿರ ಹೇಗೆ ಖರ್ಚು ಮಾಡುತ್ತೀರಿ? ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಒಂದೇ ಸಲಕ್ಕೆ ಕೊಡಿಯೆಂದರೆ ಹೇಗೆ ಸಾಧ್ಯ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ.


ದಾವಣಗೆರೆ (ಜೂ.08): ನಿಮಗೆ 30 ಸಾವಿರ ರು. ಸಂಬಳ ಬಂದರೆ 60 ಸಾವಿರ ಹೇಗೆ ಖರ್ಚು ಮಾಡುತ್ತೀರಿ? ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಒಂದೇ ಸಲಕ್ಕೆ ಕೊಡಿಯೆಂದರೆ ಹೇಗೆ ಸಾಧ್ಯ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣ, ಮನೆಯ ಯಜಮಾನಿಗೆ 2 ಸಾವಿರ ರು. ಸೇರಿದಂತೆ ನಮ್ಮ ಪಕ್ಷದ ಐದೂ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿಗೆ ತರುವುದು ನಿಶ್ಚಿತ. ಆದರೆ, ಒಂದೇ ಸಲಕ್ಕೆ ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ ಸಾಧ್ಯವಾಗದು ಎಂದರು.

ಗ್ಯಾರಂಟಿ ಯೋಜನೆಯಲ್ಲೂ ಕೆಲವೊಂದು ನೂನ್ಯತೆ, ಪಾಸಿವಿಟ್‌, ನೆಗೆಟಿವ್‌ ಎಲ್ಲವೂ ಇದೆ. ಈ ಎಲ್ಲಾ ಯೋಜನೆಗಳ ಸಾದಕ-ಬಾಧಕಗಳನ್ನು ಗಮನಿಸಿ, ಪರಿಶೀಲಿಸಿ, ಸರ್ಕಾರವು ಐದೂ ಗ್ಯಾರಂಟಿ ಯೋಜನೆಗಳನ್ನು ತರುವುದು ನಿಶ್ಚಿತ. ಕೊಟ್ಟಮಾತನ್ನು ನಮ್ಮ ಕಾಂಗ್ರೆಸ್‌ ಸರ್ಕಾರವು ತಪ್ಪುವುದಿಲ್ಲ. ಜನರಿಗೆ ನೀಡಿದ ಆಶ್ವಾಸನೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ಖಂಡಿತಾ ಜಾರಿಗೆ ತರುತ್ತೇವೆ ಎಂದು ತಿಳಿಸಿದರು. ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳೆಲ್ಲವನ್ನೂ ಜಾರಿಗೊಳಿಸುತ್ತೇವೆ. ಒಂದೇ ಸಲಕ್ಕೆ ಅಲ್ಲದಿದ್ದರೂ ಹಂತ ಹಂತವಾಗಿ ಅಷ್ಟೂಯೋಜನೆ ಕಾರ್ಯರೂಪಕ್ಕೆ ತರುತ್ತೇವೆ. 

Latest Videos

undefined

ತಿಹಾರ್‌ ರೀತಿ ರಾಜ್ಯದ ಜೈಲುಗಳಿಗೆ ಕಠಿಣ ಜಾಮರ್‌: ಮೊಬೈಲ್‌ ಬಳಕೆ ತಡೆಯಲು ಹೊಸ ತಂತ್ರಜ್ಞಾನ

ಈಗಾಗಲೇ ಯೋಜನೆ ಜಾರಿ ಕುರಿತಂತೆ ಸಿಎಂ, ಡಿಸಿಎಂ, ಸಚಿವರು, ಅಧಿಕಾರಿಗಳು ಕುಳಿತು, ಸಭೆ ಮಾಡಿ, ಎಲ್ಲಾ ನೂನ್ಯತೆಗಳನ್ನು ಸರಿಪಡಿಸುತ್ತೇವೆ. ಯೋಜನೆ ಜಾರಿಗೊಳಿಸುವ ಮುನ್ನ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಪದವೀಧರ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯಾಗಿ 3 ಸಾವಿರ ನೀಡುತ್ತೇವೆಂದು ಹೇಳಿದ್ದೇವೆ. ಪದವಿ ಪೂರ್ಣಗೊಳಿಸಿದ 3 ತಿಂಗಳಲ್ಲಿ ಕೆಲಸ ಸಿಕ್ಕರೆ, ಅದು ನಮಗೆ ಹೇಗೆ ಗೊತ್ತಾಗಬೇಕು? ಎರಡೆರೆಡು ಕಡೆ ಹಣ ಜಮಾ ಆಗಬಾರದು. ಹೀಗೆ ಒಂದಿಷ್ಟುನೂನ್ಯತೆಗಳೂ ಇವೆ. ಇದಕ್ಕಾಗಿಯೇ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಒಂದಷ್ಟುಮಾರ್ಗಸೂಚಿಗಳನ್ನೂ ಸಿದ್ಧಪಡಿಸುತ್ತಿದ್ದೇವೆ. 

ಆದಷ್ಟು ಬೇಗನೆ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಅವರು ವಿವರಿಸಿದರು. ಉಚಿತ ವಿದ್ಯುತ್‌ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. 13 ತಿಂಗಳ ವಿದ್ಯುತ್‌ ಬಿಲ್‌ನ ಸರಾಸರಿ ಆಧರಿಸಿ ಅದರ ಮೇಲೆ ಶೇ. 10ರಷ್ಟು ಹೆಚ್ಚಿಗೆ ಕೊಡುತ್ತೇವೆಂದಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿಗೊಳಿಸುತ್ತೇವೆ. ಉಚಿತ ವಿದ್ಯುತ್‌ ಸೇರಿದಂತೆ ಯೋಜನೆಗಳ ಜಾರಿಗೆ ಇರುವ ಗೊಂದಲಗಳನ್ನು ಸರ್ಕಾರ ಸೆಟಲ್‌ ಮಾಡುತ್ತದೆ. ಮಾಧ್ಯಮದವರು ನಮಗೆ ಕೆಲಸ ಮಾಡುವುದಕ್ಕೆ ಬಿಡಿ. ಜನರಿಗೆ ನೀಡಿರುವ ಆಶ್ವಾಸನೆಯನ್ನು ನಾವು ಕಾರ್ಯ ರೂಪಕ್ಕೆ ತರುತ್ತೇವೆ ಎಂದು ತಿಳಿಸಿದರು.

ನಮ್ಮ ಕಾಂಗ್ರೆಸ್‌ ಪಕ್ಷವು ವಚನ ಭ್ರಷ್ಟಅಲ್ಲ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಮಾತನ್ನು ನಾವು ಖಂಡಿತಾ ಉಳಿಸಿಕೊಳ್ಳುತ್ತೇವೆ. ನಮ್ಮ ಪಕ್ಷವು ಜನರಿಗೆ ನೀಡಿರುವ ಐದೂ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರವು ಜನರಿಗೆ ನೀಡುತ್ತದೆ. ಕೊಟ್ಟಮಾತಿನಂತೆ ನಮ್ಮ ಸರ್ಕಾರ ನಡೆಯುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸದಾನಂದ ಗೌಡರ ವಿರುದ್ಧ ಅಪಪ್ರಚಾರ ತಪ್ಪು: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಸಚಿವರಾಗಿ ಅಧಿಕಾರ ವಹಿಸಿಕೊಂಡು ಬಂದ ನಂತರ ಸ್ವಲ್ಪ ಹೊತ್ತು ಬಿಡುವು ಸಹ ಇಲ್ಲದಂತೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರನ್ನು ಅಭಿನಂದಿಸಲು ನಗರ, ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳು, ಸಂಘಟನೆಗಳು, ವಿವಿಧ ಧರ್ಮೀಯ ಮುಖಂಡರು, ಉದ್ಯಮಿಗಳು, ವರ್ತಕರು, ರೈತರು, ಕಾರ್ಮಿಕರು, ಶ್ರಮಿಕರು, ಸರ್ಕಾರಿ, ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ನೌಕರರು ಅಭಿನಂದಿಸಲು ಸಚಿವರ ನಿವಾಸ ಶಿವಪಾರ್ವತಿಗೆ ದೌಡಾಯಿಸುತ್ತಿರುವುದು ನಿತ್ಯ ಸಾಮಾನ್ಯವಾಗಿದೆ.

click me!