ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯ ಕಪಿಚೇಷ್ಠೆ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಆರ್‌ಎಸ್‌ಎಸ್ ಕುರಿತು ಮಾಹಿತಿ ತಿಳಿದುಕೊಳ್ಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ (ಜ.07): ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯ ಕಪಿಚೇಷ್ಠೆ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಆರ್‌ಎಸ್‌ಎಸ್ ಕುರಿತು ಮಾಹಿತಿ ತಿಳಿದುಕೊಳ್ಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿರಬಹುದು. ಕಪಿಚೇಷ್ಟೆಮಾಡುವ ಸಿದ್ದರಾಮಯ್ಯ ಅವರ ವಿರುದ್ಧ ಕೇಸು ಹಾಕುವಷ್ಟುಅವರು ದೊಡ್ಡವರಲ್ಲ ಎಂದರು.
ಆರ್‌ಎಸ್‌ಎಸ್ ಟೀಕಿಸಿದರೆ ತಾವು ರಾಷ್ಟ್ರನಾಯಕರಾಗಬಹುದು, ಮುಸ್ಲಿಂರು ಓಟು ಕೊಡಬಹುದು ಎಂದುಕೊಂಡಿದ್ದಾರೆ. ಅದು ಅವರ ಭ್ರಮೆ. ಆರ್‌ಎಸ್‌ಎಸ್ ರಾಷ್ಟ್ರಭಕ್ತ ಸಂಘಟನೆ. ಇಂತಹ ಸಂಘಟನೆ ಬಗ್ಗೆ ಮಾತನಾಡುವುದರ ಬದಲು ಅದರ ಬಗ್ಗೆ ತಿಳಿದುಕೊಳ್ಳಲಿ. ಈ ದೇಶ ಮತ್ತು ಸಮಾಜಕ್ಕಾಗಿ ಆರ್‌ಎಸ್‌ಎಸ್ ಏನೇನು ಮಾಡಿದೆ ಎಂದು ಅರಿವು ಮೂಡಿಸಿಕೊಳ್ಳಲಿ ಎಂದು ಹೇಳಿದರು.
undefined
ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಈಶ್ವರಪ್ಪಗೆ ಇನ್ನೂ ಮುಗಿದಿಲ್ಲ ಸಂಕಷ್ಟ?
ಯತ್ನಾಳ್‌ಗೆ ಸೂಚನೆ: ಯಡಿಯೂರಪ್ಪ ಮತ್ತು ವಿಜಯೇಂದ್ರ ಕುರಿತು ಸುಖಾಸುಮ್ಮನೆ ಆರೋಪ ಮಾಡಬೇಡಿ. ಇದು ನನ್ನ ಪ್ರಾರ್ಥನೆ. ಮೀಸಲಾತಿ ಬಗ್ಗೆ ಯಡಿಯೂರಪ್ಪ ಅವರು ಅಡ್ಡ ಬರ್ತಿದ್ದಾರೆ. ಎಂಬ ಯತ್ನಾಳ್ ಹೇಳಿಕೆ ಸರಿಯಲ್ಲ. ಶಾಸಕ ಬಸವನಗೌಡ ಯತ್ನಾಳ್ ಅವರು ಪದೇಪದೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಕುರಿತು ಮಾತನಾಡುವುದನ್ನು ನಿಲ್ಲಿಸಬೇಕು. ಸುಮ್ಮನೆ ಆರೋಪ ಮಾಡಬೇಡಿ ಎಂಬುದು ನನ್ನ ಪ್ರಾರ್ಥನೆ. ಯಡಿಯೂರಪ್ಪ ಪಕ್ಷ ಕಟ್ಟಿದ ಹಿರಿಯರು. ಚುನಾವಣೆ ಸಂದರ್ಭದಲ್ಲಿ ಆಪಾದನೆ ಮಾಡಬೇಡಿ ಎಂದು ಅವರಿಗೆ ಕೂಡ ಹೇಳಿದ್ದೇನೆ ಎಂದ ಅವರು, ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಳ್ಳಲಿ ಎಂದರು.
ರಾಜ್ಯದ ಜನರ ಕ್ಷಮೆಯಾಚಿಸಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಾಯಿಗೆ ಹೋಲಿಸಿ ಮತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದವರು. ಒಬ್ಬ ಮುಖ್ಯಮಂತ್ರಿಗೆ ಹೇಗೆ ಸಂಬೋಧಿಸಬೇಕೆಂಬ ಕಲ್ಪನೆಯೂ ಇಲ್ಲ. ನಾಯಿಮರಿಗೆ ಹೋಲಿಸುತ್ತಾರೆ. ನಮಗೂ ಹೋಲಿಕೆ ಮಾಡಲು ಬೇಕಾದಷ್ಟುಪ್ರಾಣಿಗಳಿವೆ. ಕೇವಲ ನಾಯಿ ಅಲ್ಲ ಹಂದಿಯೂ ಇದೆ. ನಿಂದನೆ ಮಾಡಲು ನಮಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾವು ನಿಮಗೆ ನಾಯಿಮರಿ, ಕತ್ತೆ ಮರಿ, ಹಂದಿ ಮರಿ ಹೀಗೆ ಎಲ್ಲವನ್ನು ಕರೆಯಬಹುದಾಗಿತ್ತು. ಆದರೆ, ನಾವು ಹಾಗೆ ಮಾಡಿಲ್ಲ. ಈಗ ನೋಡಿದ್ರೆ ಹಳ್ಳಿ ಭಾಷೆ ಅಂತ ಹೇಳುತ್ತಾರೆ. ನಾವು ಹಾಗೆ ಹೇಳಿ ಹಳ್ಳಿ ಭಾಷೆ ಅಂತ ಹೇಳಬಹುದಲ್ಲವೇ ಎಂದು ಹರಿಹಾಯ್ದರು.
ಧರ್ಮ ಸಂರಕ್ಷಣೆಯೂ ಅಭಿವೃದ್ಧಿಯೇ: ಅಭಿವೃದ್ಧಿ ಎಂದರೆ ಕೇವಲ ಚರಂಡಿ, ರಸ್ತೆ ಅಭಿವೃದ್ಧಿ ಮಾತ್ರವಲ್ಲ. ಈ ದೇಶದ ಧರ್ಮವನ್ನು ಕಾಪಾಡುವುದೂ ಅಭಿವೃದ್ಧಿಯೇ. ಹಾಗಾಗಿಯೇ ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತಿದೆ. ಬ್ರಿಟಿಷರ ಕಾಲದಲ್ಲಿ ಚರಂಡಿ, ರಸ್ತೆಗಳು ಆಗಿರಲಿಲ್ಲವೇ? ನಮ್ಮ ಶ್ರದ್ಧಾ ಕೇಂದ್ರಗಳು ಧ್ವಂಸವಾದವು. ದೇವಾಲಯಗಳು ನಾಶಗೊಂಡವು. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ನಮ್ಮ ಹಿರಿಯರ ಬಲಿದಾನವಾಗಿದೆ. ನಮ್ಮ ಗೋಮಾತೆ ನಮಗೆ ಉಳಿಯಬೇಕು. ಧ್ವಂಸಗೊಂಡ ದೇವಾಲಯಗಳು ಮರುನಿರ್ಮಾಣಗೊಳ್ಳಬೇಕು. ಅಯೋಧ್ಯೆ, ಮಥುರಾ, ಕಾಶಿ, ಮುಂತಾದ ಸ್ಥಳಗಳು ಮತ್ತೆ ಶ್ರದ್ಧಾಕೇಂದ್ರಗಳಾಗಬೇಕು. ದೇಶ, ಧರ್ಮ ಅಭಿವೃದ್ಧಿಯೇ ಬಿಜೆಪಿಯ ಮಂತ್ರ ಎಂದರು.
ಸಿದ್ದರಾಮಯ್ಯ ವಿರುದ್ಧ ಸಾಮಾನ್ಯ ಕಾರ‍್ಯಕರ್ತನ ನಿಲ್ಸಿ ಗೆಲ್ಲಿಸುತ್ತೇವೆ: ಕೆ.ಎಸ್.ಈಶ್ವರಪ್ಪ
ಅಭಿವೃದ್ಧಿ, ಸಂಘಟನೆಯ ಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ. ನಿಮ್ಮ ಪಕ್ಷದ ಸಂಘಟನೆ ಎಲ್ಲಿ ಇದೆ. ನಿಮ್ಮ ಚುನಾವಣಾ ನೇತೃತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ. ಕಾಂಗ್ರೆಸ್‌ನಲ್ಲಿ ನೇತೃತ್ವ, ಸಂಘಟನೆ ಯಾವುದು ಇಲ್ಲ. ಸಾಮಾನ್ಯ ಜನರನ್ನು ಮರಳು ಮಾಡುವಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಿಸ್ಸೀಮರು. ಕಾಂಗ್ರೆಸ್ ಸಮೀಕ್ಷೆಯನ್ನು ಕಾಂಗ್ರೆಸ್‌ನವರೇ ನಂಬುವುದಿಲ್ಲ. ಈ ತಂತ್ರಗಳು ಕುಮಾರಸ್ವಾಮಿಗೆ ಹಾಗೂ ಕಾಂಗ್ರೆಸ್‌ನವರಿಗೆ ಗೊತ್ತಿದೆ. ನಮಗೆ ಯಾವುದೇ ತಂತ್ರಗಾರಿಕೆ ಗೊತ್ತಿಲ್ಲ ಎಂದರು.