ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಯೋಜನೆಗಳನ್ನು ಸಿದ್ದರಾಮಯ್ಯ ಮಾಡಿದ್ದಾರೆ: ಕಾಗೋಡು ತಿಮ್ಮಪ್ಪ

By Kannadaprabha News  |  First Published Sep 7, 2023, 5:41 PM IST

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಾರ್ಯಕರ್ತರು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಸವಾಲನ್ನು ಸ್ವೀಕರಿಸುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು. 


ಶಿಕಾರಿಪುರ (ಸೆ.07): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಯಾವುದೇ ಸರ್ಕಾರದಿಂದ ಅಸಾಧ್ಯವಾದ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಾರ್ಯಕರ್ತರು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಧಿಸುವ ಸವಾಲನ್ನು ಸ್ವೀಕರಿಸುವಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು. ಪಟ್ಟಣದ ಶಿಶು ವಿಹಾರ ರಸ್ತೆಯಲ್ಲಿನ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಪಕ್ಷದ ಕಚೇರಿ ಉದ್ಘಾಟನೆ ಅತ್ಯಂತ ಸಂತೋಷದಾಯಕವಾಗಿದ್ದು, ಈ ಮೂಲಕ ಕಾರ್ಯಕರ್ತರು ಮುಖಂಡರಲ್ಲಿ ಬರಲಿರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಛಲ, ಸಂಕಲ್ಪ,ಇಚ್ಛಾಶಕ್ತಿ ಎದ್ದು ಕಾಣುತ್ತಿದೆ. 

ಎಲ್ಲೆಡೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಒಗ್ಗಟ್ಟು ಕಂಡುಬರಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಕಾರಣವಾಗಿದೆ ಎಂದು ತಿಳಿಸಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಕಾರ್ಯಕರ್ತರು ಕೆಲಸ ಕಾರ್ಯ ಬದಿಗಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದ ಅವರು ರಾಜ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಅಸಾದ್ಯವಾದ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ್ದು ಸರ್ಕಾರದ ಯೋಜನೆ ಬಳಸಿಕೊಂಡು ತಾಲೂಕಿನಲ್ಲಿ ಪಕ್ಷವನ್ನು ಸದೃಡವಾಗಿ ಕಟ್ಟುವಂತೆ ತಿಳಿಸಿ ಈ ದಿಸೆಯಲ್ಲಿ ಕಾರ್ಯಕರ್ತರ ಪಾದಗಳಿಗೆ ನಮಸ್ಕರಿಸುವುದಾಗಿ ತಿಳಿಸಿದರು.

Latest Videos

undefined

ಕ್ಷೀರಭಾಗ್ಯ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ: ಮಕ್ಕಳಿಗೆ ಹಾಲು ಕುಡಿಸಿದ ಸಿಎಂ ಸಿದ್ದರಾಮಯ್ಯ!

ಸಂಸದ, ಶಾಸಕರು ತಾಲೂಕಿನವರಾಗಿದ್ದು,ಇದುವರೆಗೂ ಎಷ್ಟು ಜನರಿಗೆ ಹಕ್ಕುಪತ್ರ ನೀಡಿದ್ದಾರೆ. ಟೋಪಿ ಹಾಕುವ ಕೆಲಸ ಮಾಡುತ್ತಿರುವ ಅವರು ಲೂಟಿ ಹೊಡೆಯುತ್ತಿದ್ದಾರೆ. ಮಣಿಸಲು ೩-೪ ತಿಂಗಳು ಹಗಲು ರಾತ್ರಿ ಸೈನಿಕರ ರೀತಿ ಶ್ರಮಿಸು ವಂತೆ ತಿಳಿಸಿದ ಅವರು ಈ ಬಾರಿಯ ಚುನಾವಣೆ ಸವಾಲಾಗಿದ್ದು ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಮೂಲಕ ಜನಸಾಮಾನ್ಯರ ಜೀವನ ಶೈಲಿಯನ್ನು ಬದಲಾಯಿಸಬೇಕಾಗಿದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕ್ಷೇತ್ರವನ್ನು ಶತಾಯಗತಾಯ ಗೆಲ್ಲಬೇಕಾಗಿದ್ದು ಈ ದಿಸೆಯಲ್ಲಿ ಕಾರ್ಯಕರ್ತರಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು. ತಾಲೂಕಿನಲ್ಲಿ ಪಕ್ಷದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ಎಲ್ಲ ವರ್ಗದ ಜನತೆಯ ಸಮಸ್ಯೆ ಆಲಿಸಿ ಪ್ರೀತಿ ಗಳಿಸಿದ್ದು ಇದರಿಂದಾಗಿ ಪಕ್ಷ ಬಲಿಷ್ಠವಾಗಿದೆ. ರಾಜ್ಯದಲ್ಲಿ ಹಲವು ವಿರೋಧಿ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಪ್ರಧಾನಿ ಮೋದಿ ಕಂಗೆಟ್ಟಿದ್ದಾರೆ. ಪರಾಜಿತ ಅಭ್ಯರ್ಥಿ ನಾಗರಾಜಗೌಡ ಸಹ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ ತತ್ವ ಸಿದ್ಧಾತಕ್ಕೆ ತಲೆಬಾಗಿ ನಡೆಯುವ ಎಲ್ಲರನ್ನು ಸೇರ್ಪಡೆಗೊಳಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಪಕ್ಷ ನಿಷ್ಠರಿಗೆ ತೊಂದರೆ ವಿಪರೀತವಾಗಿದ್ದು, ಸಂಸದ, ಶಾಸಕರ ಪ್ರಭಾವಕ್ಕೆ ಹಲವರನ್ನು ರೌಡಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಕೂಡಲೇ ಸರ್ಕಾರ ಕೇಸ್ ವಾಪಾಸ್ ಪಡೆದು ಕಾರ್ಯಕರ್ತರ ನೈತಿಕ ಶಕ್ತಿ ಹೆಚ್ಚಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇವರಾಜ್ ಅರಸ್ ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿದರು. ವೇದಿಕೆಯಲ್ಲಿ ಭದ್ರಾವತಿ ನಗರಸಭಾ ಸದಸ್ಯ ಬಿ.ಕೆ ಮೋಹನ್,ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಶಿವಕುಮಾರ್,ಪಲ್ಲವಿ,ವೀಣಾ ಹಿರೇಮಠ್,ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ,ಮುಖಂಡ ಭಂಡಾರಿ ಮಾಲತೇಶ್,ಚಂದ್ರಕಾಂತ್ ಪಾಟೀಲ್ವೇಣುಗೋಪಾಲ್,ಶ್ರೀಧರ ಕರ್ಕಿ,ಪುರಸಭಾ ಸದಸ್ಯ ಉಳ್ಳಿ ದರ್ಶನ್,ರೋಷನ್,ಜಯಶ್ರೀ, ಕಮಲಮ್ಮ ಮತ್ತಿತರರು ಉಪಸ್ಥಿತರಿದ್ದರು.

ಮಧು ಬಂಗಾರಪ್ಪ ಕಾರ್ಯಕರ್ತರ ಅಸಮಾಧಾನ: ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪನವರನ್ನು ಹಲವು ಬಾರಿ ಆಹ್ವಾನಿಸಿದ್ದು ಸಮಯಕ್ಕೆ ಸರಿಯಾಗಿ ಸಮೀಪದಲ್ಲಿಯೇ ತೆರಳುತ್ತಿದ್ದ ಅವರನ್ನು ಹಲವು ಬಾರಿ ಗೋಗರೆದರೂ ಆಗಮಿಸದ ಸಚಿವರ ವರ್ತನೆ ನೋವಾಗಿದೆ ಪಕ್ಷಕ್ಕೆ ನಿಷ್ಠರಾಗಿರುವುದು ತಪ್ಪೇ ? ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಹೇಶ್ ಹುಲ್ಮಾರ್ ಬಾವುಕರಾದರು. ಕೂಡಲೇ ಹಲವು ಕಾರ್ಯಕರ್ತರು ವೇದಿಕೆ ಬಳಿ ದಾವಿಸಿ ಸಚಿವರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಪಡಿಸಿದಾಗ ಕೆಲಕಾಲ ಸಭೆಯಲ್ಲಿ ಗೊಂದಲ ಉಂಟಾಯಿತು.

ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಕೊಡುಗೆ ಏನು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ಗೇಣಿದಾರರಿಗೆ ಭೂಮಿ ಹಕ್ಕು ದೊರೆಯಲು ಕಾಗೋಡು ಕಾರಣ: 1978ರಲ್ಲಿ ದೇವರಾಜ್ ಅರಸ್ ಮೀಸಲಾತಿಯನ್ನು ಜಾರಿಗೊಳಿಸಿದ್ದು ತಪ್ಪಿದಲ್ಲಿ ಇಂದು ದಲಿತರನ್ನು ಅಧಿಕಾರಿಯಾಗಿ ಕಾಣಲು ಸಾದ್ಯವಿರಲಿಲ್ಲ. ಗೇಣಿದಾರರಿಗೆ ಭೂಮಿಯ ಹಕ್ಕು ದೊರೆಯಲು ಕಾಗೋಡು ತಿಮ್ಮಪ್ಪನವರ ಹೋರಾಟ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಮನುಷ್ಯನ ನೆಮ್ಮದಿಯ ಬದುಕಿಗೆ ಬೇಕಾದ ಸೌಲಭ್ಯ ರಕಿಸದೆ ಕೇವಲ ಜಾತಿ, ಧರ್ಮದ ಆಧಾರದಲ್ಲಿ ಬ್ರಿಟಿಷರ ಮಾದರಿಯಲ್ಲಿ ಬಿಜೆಪಿ ದೇಶ ಒಡೆಯುತ್ತಿದೆ. ಜಾತಿ ಧರ್ಮದ ಮದ್ಯೆ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು.

click me!