ನಾನು ಒಬ್ಬ ಬಡಪಾಯಿ, ಬೆನ್ನು ಹಿಂದೆ ಏಕೆ ಬಿದ್ದಿದ್ದೀರಿ?: ಜಗದೀಶ್‌ ಶೆಟ್ಟರ್‌

By Kannadaprabha News  |  First Published Aug 16, 2023, 1:57 PM IST

ನಾನು ಒಬ್ಬ ಬಡಪಾಯಿ, ಈ ಬಡಪಾಯಿಗೆ ಯಾಕೆ ಬೆನ್ನು ಬಿದ್ದಿದ್ದೀರಿ? ಬಿಜೆಪಿಯವರು ಶೆಟ್ಟರನ್ನು ಬಿಡ್ತಾನೆ ಇಲ್ಲ. ಉತ್ತರ ಕರ್ನಾಟಕದಲ್ಲಿ 20 ರಿಂದ 30 ಸ್ಥಾನಗಳು ಕಳೆದುಕೊಂಡೆವು ಎಂದು ಯೋಚನೆ ಮಾಡುತ್ತಾರೆ. 


ಧಾರವಾಡ (ಆ.16): ನಾನು ಒಬ್ಬ ಬಡಪಾಯಿ, ಈ ಬಡಪಾಯಿಗೆ ಯಾಕೆ ಬೆನ್ನು ಬಿದ್ದಿದ್ದೀರಿ? ಬಿಜೆಪಿಯವರು ಶೆಟ್ಟರನ್ನು ಬಿಡ್ತಾನೆ ಇಲ್ಲ. ಉತ್ತರ ಕರ್ನಾಟಕದಲ್ಲಿ 20 ರಿಂದ 30 ಸ್ಥಾನಗಳು ಕಳೆದುಕೊಂಡೆವು ಎಂದು ಯೋಚನೆ ಮಾಡುತ್ತಾರೆ. ಶೆಟ್ಟರ್‌ ಮನೆಯಲ್ಲಿಯೇ ಸುಮ್ಮನೆ ಕೂಡುತ್ತಾರೆ, ಏನೂ ಆಗಲ್ಲ, ಪಕ್ಷ ಬಿಡುವುದಿಲ್ಲ ಅಂತ ತಿಳಿದಿದ್ರು. ನಾನು ಪಕ್ಷದಿಂದ ಹೊರಬಂದ ಮೇಲೆ ಏನು ಪರಿಣಾಮ ಆಗಿದೆ ಅಂತ ಈಗ ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ತಿರುಗೇಟು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಿ.ಟಿ. ರವಿ ಭ್ರಷ್ಟಾಚಾರ ಮತ್ತು ಕಾಂಗ್ರೆಸ್‌ ಒಂದು ನಾಣ್ಯದ ಎರಡು ಮುಖ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್‌, ಅವರು ಹೇಳಿದ್ದೆಲ್ಲ ನಿಜವೇನು? ಸಿ.ಟಿ.ರವಿ ಏನು ಸತ್ಯ ಹರಿಶ್ಚಂದ್ರನಾ? ಅವರು ಈ ಹಿಂದೆ ಆಪರೇಷನ್‌ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ದರು. ಈ ಬಾರಿ ಈ ರೀತಿಯ ಯಾವುದೇ ಸ್ಥಿತಿ ನಮಗಿಲ್ಲ. ಕಾಂಗ್ರೆಸ್‌ ಸರ್ಕಾರ 5 ವರ್ಷ ಇರುತ್ತೆ, ಇದನ್ನು ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಒತ್ತಾಯ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಹೆಸರನ್ನು ನಾಮಕರಣ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಲಾಗಿದೆ. ಈ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಆದಷ್ಟುಬೇಗನೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ್‌ ಹೇಳಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ಧಾರವಾಡ ಜಿಲ್ಲಾ ಸಂಗೊಳ್ಳಿ ರಾಯಣ್ಣ ಹಿತ ರಕ್ಷಣಾ ಸಮಿತಿ ವತಿಯಿಂದ ರಾಯಣ್ಣನ 229ನೇ ಜಯಂತಿ ಅಂಗವಾಗಿ ಮಂಗಳವಾರ ನಡೆದ ವಿವಿಧ ಕ್ಷೇತ್ರದ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ರಾಯಣ್ಣನ ಹೆಸರಿಡುವ ಕುರಿತು ಸಚಿವ ಎಂ.ಬಿ. ಪಾಟೀಲ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನು ಪತ್ರ ಬರೆದಿದ್ದೇನೆ. ಶೀಘ್ರವೇ ನಾಮಕರಣಕ್ಕೆ ಅನುಮತಿ ಸಿಗುವ ವಿಶ್ವಾಸವಿದೆ ಎಂದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮಳ ದೇಶಾಭಿಮಾನ ಮತ್ತು ಶೌರ್ಯ-ಸಾಹಸಗಳು ಅಜರಾಮರವಾಗಿವೆ. ಹುಬ್ಬಳ್ಳಿಯಲ್ಲಿ ಕಿತ್ತೂರು ಚೆನ್ನಮ್ಮಳ ವೃತ್ತದಲ್ಲಿ ಚೆನ್ನಮ್ಮಳ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ ನಂತರ, ರಾಯಣ್ಣನ ಅಭಿಮಾನಿಗಳ ಆಶಯದಂತೆ ಈ ವೃತ್ತದ ಸನೀಹದಲ್ಲೇ ಸಂಗೊಳ್ಳಿ ರಾಯಣ್ಣನ ಪುತ್ತಳಿ ಸ್ಥಾಪಿಸಲಾಗಿದೆ. ಅದಕ್ಕೆ ನಾನು ಸೇರಿದಂತೆ ಅನೇಕ ಮುಖಂಡರ ಶ್ರಮವಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ಸಾವಿರಾರು ಕಿ.ಮೀ ಮುಂದೆ ಹೋಗಿದೆ: ಸಚಿವ ರಾಮ​ಲಿಂಗಾರೆಡ್ಡಿ

ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಮಾತನಾಡಿದರು. ಮನಸೂರು ರೇವಣಸಿದ್ದೇಶ್ವರ ಮಹಾ ಮಠದ ಬಸವರಾಜ ದೇವರು ಸಾನಿಧ್ಯ ವಹಿಸಿದ್ದರು. ಹಾಸ್ಯನಟ ವೈಜ್ಯನಾಥ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಗೋವಿಂದ ಜೋಶಿ, ಅನಿಲಕುಮಾರ ಪಾಟೀಲ, ಲಿಂಗರಾಜ ಪಾಟೀಲ, ವಿಜಯಕುಮಾರ ಅಪ್ಪಾಜಿ, ಪ್ರಭು ನವಲಗುಂದಮಠ, ಶಿವಾನಂದ ಜೋಗಿನ, ಭೀರಪ್ಪಾ ಕಂಡೇಕಾರ, ರಾಜಗುರು ಮೇಲೋಡಿ ಸೇರಿದಂತೆ ಹಲವರಿದ್ದರು.

click me!