ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ಸಾವಿರಾರು ಕಿ.ಮೀ ಮುಂದೆ ಹೋಗಿದೆ: ಸಚಿವ ರಾಮ​ಲಿಂಗಾರೆಡ್ಡಿ

Published : Aug 16, 2023, 01:23 PM IST
ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ಸಾವಿರಾರು ಕಿ.ಮೀ ಮುಂದೆ ಹೋಗಿದೆ: ಸಚಿವ ರಾಮ​ಲಿಂಗಾರೆಡ್ಡಿ

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ಈಗಾಗಲೇ ಸಾವಿರಾರು ಕಿ.ಮೀ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದವರ ಕೆಲಸವೇ ಅದು ಎಂದು ಸಾರಿಗೆ ಸಚಿವ ರಾಮ​ಲಿಂಗಾರೆಡ್ಡಿ ಪ್ರತಿ​ಕ್ರಿ​ಯಿ​ಸಿ​ದರು.

ರಾಮ​ನ​ಗ​ರ (ಆ.16): ಕಾಂಗ್ರೆಸ್‌ ಸರ್ಕಾರ ಟೇಕಾಫ್‌ ಆಗಿ ಈಗಾಗಲೇ ಸಾವಿರಾರು ಕಿ.ಮೀ ಮುಂದೆ ಹೋಗಿದೆ. ಟೀಕೆ ಮಾಡುವವರು ಮಾಡಲಿ ಬಿಡಿ. ವಿರೋಧ ಪಕ್ಷದವರ ಕೆಲಸವೇ ಅದು ಎಂದು ಸಾರಿಗೆ ಸಚಿವ ರಾಮ​ಲಿಂಗಾರೆಡ್ಡಿ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಮಾಜಿ ಉಪ​ಮು​ಖ್ಯ​ಮಂತ್ರಿ ಅಶ್ವತ್ಥ ನಾರಾ​ಯಣರವರ ಮಾತಿಗೆ ಅವರ ಪಕ್ಷದಲ್ಲೇ ಕಿಮ್ಮತ್ತಿಲ್ಲ. ಇನ್ನು ಕಾಂಗ್ರೆಸ್‌ ಪಕ್ಷದ ಬಗ್ಗೆ ಮಾತ​ನಾ​ಡುವ ಯಾವ ನೈತಿ​ಕತೆ ಉಳಿ​ಸಿ​ಕೊಂಡಿ​ದ್ದಾರೆ. ಚುನಾ​ವಣಾ ಪೂರ್ವ​ದಲ್ಲಿ ಬಿಜೆಪಿ ನೀಡಿದ್ದ 610 ಭರವಸೆಯಲ್ಲಿ ಕೇವಲ 60 ಭರವಸೆಗಳನ್ನಷ್ಟೆ ಈಡೇರಿಸಿದೆ. 

ಬಿಜೆಪಿ ಕೊಟ್ಟಮಾತಿನಂತೆ ನಡೆದುಕೊಂಡಿಲ್ಲ. ಆದರೆ, ಕಾಂಗ್ರೆಸ್‌ ಸರ್ಕಾರ 2013ರಲ್ಲಿ ನೀಡಿದ್ದ 165ರಲ್ಲಿ 158 ಭರವಸೆ ಈಡೇರಿಸಿತು. ಬಿಜೆಪಿಯವರ ಮಾತಿಗೆ ಮಹತ್ವ ಕೊಡಬೇಕಿಲ್ಲ. ನಮ್ಮ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿದ್ದರು. ಜನರಿಗೆ ಯಾಮಾರಿಸುವ ಕೆಲಸ ಮಾಡಿದ್ದರು. ಆದರೆ, ಜನ ನಮ್ಮ ಮೇಲೆ ವಿಶ್ವಾಸ ಇಟ್ಟು ಅಧಿಕಾರ ನೀಡಿದ್ದಾರೆ. ಪ್ರತಿನಿತ್ಯ 60 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಸಾರಿಗೆ ಬಸ್ಸು​ಗ​ಳಲ್ಲಿ ಓಡಾಡುತ್ತಿದ್ದಾರೆ. ಗ್ಯಾರಂಟಿಗಳ ಮೂಲಕ ನಾವು ಜನರನ್ನು ತಲುಪುತ್ತಿದ್ದೇವೆ. ಮಾಜಿ ಸಿಎಂ ಕುಮಾ​ರ​ಸ್ವಾಮಿ ವಿರೋಧ ಪಕ್ಷ​ದ​ಲ್ಲಿ​ರುವ ಕಾರಣ ನಮ್ಮನ್ನು ಹೊಗ​ಳಲು ಸಾಧ್ಯ​ವಿಲ್ಲ ಎಂದು ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು.

ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ಡಿ.ಕೆ.​ಶಿ​ವ​ಕು​ಮಾರ್‌ ಅವರು ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ಬಿಜೆಪಿಯವರು ಮೊದಲು ಅವರ ಮನೆ ದೇವರ ಮೇಲೆ ಆಣೆ ಮಾಡಲಿ. ನಾವು 40 ಪರ್ಸೆಂಟ್‌ ಕಮಿಷನ್‌ ತೆಗೆದುಕೊಂಡಿಲ್ಲ, ವರ್ಗಾವಣೆ ದಂಧೆ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ ಅಂತ ಆಣೆ ಮಾಡಲಿ. ಆರೋಪ ಮಾಡುವುದಕ್ಕೂ ನೈತಿಕತೆ ​ಇ​ರಬೇಕು ಎಂದು ತಿರುಗೇಟು ನೀಡಿ​ದ​ರು.

ಎರಡು ವರ್ಷದ ಬಳಿಕ ಕಿರಿಯರಿಗೆ ಅವಕಾಶ ನೀಡಬೇಕೆಂಬುದು ಸಚಿವ ಮುನಿಯಪ್ಪನವರ ವೈಯ​ಕ್ತಿಕ ಹೇಳಿಕೆ. ಎಲ್ಲರಿಗೂ ಅವಕಾಶ ಸಿಗಬೇಕಲ್ವಾ. ಇನ್ನು ಎರಡೂವರೆ ವರ್ಷ ಆದಮೇಲೆ ನೀಡೋಣ. ಆ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ಉತ್ತ​ರಿ​ಸಿದರು. ಮೇಕೆದಾಟು ಯೋಜನೆಯಿಂದ ಯಾರಿಗೂ ಸಮಸ್ಯೆ ಇಲ್ಲ. ಯಾವುದೇ ಸರ್ಕಾರ ಇದ್ದರೂ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಇದೆ. ಈಗ ತಮಿಳುನಾಡು ಕೋರ್ಚ್‌ಗೆ ಹೋಗಿದೆ. ನಾವು ಕೋರ್ಚ್‌ ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದು ರಾಮ​ಲಿಂಗಾ​ರೆಡ್ಡಿ ಹೇಳಿ​ದ​ರು.

ರಾಮನಗರದ ಅಭಿವೃದ್ಧಿಗೆ ಆದ್ಯತೆ: ರಾಮನಗರ ಅತ್ಯಂತ ಸುಶಿಕ್ಷಿತವಾದ, ಸಂಪನ್ನವಾದ, ಸುಭಿಕ್ಷವಾದ ಮತ್ತು ಶ್ರೀಮಂತವಾದ ಜಿಲ್ಲೆಯಾಗಿ ರೂಪುಗೊಳ್ಳುವ ಸನಿಹದಲ್ಲಿದೆ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಹೇಳಿ​ದರು. ನಗ​ರದ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ಜಿಲ್ಲಾ​ಡ​ಳಿತ ಆಯೋ​ಜಿ​ಸಿದ್ದ 77ನೇ ಸ್ವಾತಂತ್ರ್ಯೋ​ತ್ಸವ ಸಮಾ​ರಂಭ​ದಲ್ಲಿ ಧ್ವಜಾ​ರೋ​ಹಣ ನೆರ​ವೇ​ರಿಸಿ ಮಾತ​ನಾ​ಡಿದ ಅವರು, ರಾಮನಗರ ಜಿಲ್ಲೆಯಾಗಿ ದಶಕ ಕಳೆದಿದೆ. ಈ ಅವಧಿಯಲ್ಲಿ ನಾವು ಸಾಧಿಸಿರುವುದು ಬಹಳ, ಸಾ​ಧಿಸಬೇಕಾಗಿರುವುದು ಇನ್ನೂ ಹೆಚ್ಚಿದೆ. ರಾಮನಗರ ಜಿಲ್ಲೆಗೆ ಐತಿಹಾಸಿಕ ಹಿನ್ನೆಲೆ ಇದೆ. ದೇಗುಲಗಳು, ಕೋಟೆ ಕೊತ್ತಲಗಳ ದೊಡ್ಡದೊಂದು ಭಂಡಾರವೇ ಇದೆ. 

ಹೊಸ ಉದ್ದಿಮೆಗಳ ಮಹಾಪೂರ, ರಾಮನಗರದತ್ತ ಹರಿದುಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಬಹುದೊಡ್ಡ ಸಂಸ್ಕೃತಿಯ ಇಲ್ಲಿದೆ ಎಂದರು. ಸಾಮರಸ್ಯ, ಸಹಬಾಳ್ವೆಗೆ ರಾಮನಗರ ಉತ್ತಮ ಉದಾಹರಣೆ. ಅದ್ಭುತ ಎನಿಸುವ ಮಾನವ ಸಂಪನ್ಮೂಲವಿದೆ. ಸಾಹಸ ಕ್ರೀಡೆಗೆ, ಉದ್ಯಮಗಳ ಸ್ವಾಪನೆಗೆ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಕೃಷಿಯ ಅಭ್ಯುದಯಕ್ಕೆ ಪರಿಸರದ ಸಿರಿ ಹೆಚ್ಚಿಸಲು ಬೇಕಾದ ಎಲ್ಲ ಅವಕಾಶಗಳೂ ರಾಮನಗರದ ಮಡಿಲಿನಲ್ಲಿ ತುಂಬಿಕೊಂಡಿದೆ. ಹೀಗಾಗಿ ರಾಮನಗರ ಅತ್ಯಂತ ಸುಶಿಕ್ಷಿತವಾದ, ಸಂಪನ್ನವಾದ, ಸುಭಿಕ್ಷವಾದ ಮತ್ತು ಶ್ರೀಮಂತವಾದ ಜಿಲ್ಲೆಯಾಗಿ ರೂಪುಗೊಳ್ಳುವ ಸನಿಹದಲ್ಲಿದೆ ಎಂದು ತಿಳಿ​ಸಿ​ದರು.

ಪ್ರಸ್ತುತ ಈ ಜಿಲ್ಲೆಯ ಅಭಿವೃದ್ಧಿಗೆ ನಾನು ಮತ್ತು ಇದೇ ಜಿಲ್ಲೆಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ನಾವು ಭರವಸೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳಿಗೆ ಚಾಲನೆ ದೊರಕಿದೆ. ಉಳಿದಿರುವ ಯುವನಿಧಿ ಯೋಜನೆಯ ಕುರಿತು ಸರ್ಕಾರಿ ಆದೇಶ ಹೊರಡಿಸಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಡಿಪ್ಲೊಮಾ ಪಡೆದ ಯುವ ಜನರಿಗೆ ಆರು ತಿಂಗಳು ಕಳೆದರೂ ಉದ್ಯೋಗ ದೊರೆಯದ ಸಂದರ್ಭದಲ್ಲಿ ಈ ಯೋಜನೆ ಸೌಲಭ್ಯ ಪಡೆಯಬಹುದು ಎಂದು ರಾಮ​ಲಿಂಗಾ​ರೆಡ್ಡಿ ತಿಳಿ​ಸಿ​ದರು.

ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್‌ ಜಾರಕಿಹೊಳಿ

ಪೊಲೀ​ಸರು ಹಾಗೂ ವಿದ್ಯಾ​ರ್ಥಿ​ಗಳು ಪಥ​ಸಂಚ​ಲನ ನಡೆ​ಸಿ​ದರು. ರಾಜ್ಯ ರಸ್ತೆ ಸಾರಿಗೆ ನಿಗ​ಮ​ದಲ್ಲಿ ಗಣ​ನೀಯ ಸೇವೆ ಸಲ್ಲಿ​ಸಿ​ರುವ 27 ಮತ್ತು ಇಲಾಖಾ ವಾಹನ ಚಾಲ​ಕರು 2 ಸೇರಿ 29 ಮಂದಿ ಚಾಲ​ಕ​ರಿಗೆ ಬೆಳ್ಳಿ ಪದಕ ಹಾಗೂ ನಗದು ಪುರ​ಸ್ಕಾರ ನೀಡಿ ಗೌರ​ವಿ​ಸ​ಲಾ​ಯಿ​ತು. ಶಾಲಾ ಮಕ್ಕಳ ಸಾಂಸ್ಕೃ​ತಿಕ ಕಾರ್ಯ​ಕ್ರಮ ಆಕ​ರ್ಷ​ಕ​ವಾ​ಗಿತ್ತು. ಶಾಸಕ ಇಕ್ಬಾಲ್‌ ಹುಸೇನ್‌ ಅಧ್ಯ​ಕ್ಷತೆ ವಹಿ​ಸಿ​ದ್ದರು. ನಗ​ರ​ಸಭೆ ಪ್ರಭಾರ ಅಧ್ಯಕ್ಷ ಸೋಮ​ಶೇ​ಖರ್‌, ಜಿಲ್ಲಾ​ಧಿ​ಕಾರಿ ಅವಿ​ನಾಶ್‌, ಜಿಪಂ ಸಿಇಒ ದಿಗ್ವಿ​ಜಯ್‌ ಬೋಡ್ಕೆ, ಅಪರ ಜಿಲ್ಲಾ​ಧಿ​ಕಾರಿ ಶಿವಾ​ನಂದ​ಮೂರ್ತಿ, ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ಕಾರ್ತಿಕ್‌ರೆಡ್ಡಿ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್