ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಗಿಮಿಕ್‌: ಸಚಿವ ಸಂತೋಷ್ ಲಾಡ್‌

By Kannadaprabha News  |  First Published Aug 16, 2023, 1:39 PM IST

ಬಿಜೆಪಿಯು 65 ಸೀಟ್‌ ಮಾತ್ರ ಪಡೆದು ಹತಾಶೆಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಸರ್ಕಾರ ಬೀಳಲಿದೆ ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡರು ಗಿಮಿಕ್‌ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಚಿವ ಸಂತೋಷ್ ಲಾಡ್‌ ತಿರುಗೇಟು ನೀಡಿದರು. 


ಧಾರವಾಡ (ಆ.16): ಬಿಜೆಪಿಯು 65 ಸೀಟ್‌ ಮಾತ್ರ ಪಡೆದು ಹತಾಶೆಗೊಂಡಿದೆ. ಇನ್ನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಸರ್ಕಾರ ಬೀಳಲಿದೆ ಎಂಬ ಹೇಳಿಕೆ ನೀಡುವ ಮೂಲಕ ಬಿಜೆಪಿ ಮುಖಂಡರು ಗಿಮಿಕ್‌ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಸಚಿವ ಸಂತೋಷ್ ಲಾಡ್‌ ತಿರುಗೇಟು ನೀಡಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಆಡಳಿತ ನಡೆಸಲು ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ, ಸರ್ಕಾರ ಸಂಪೂರ್ಣ ಐದು ವರ್ಷ ಉತ್ತಮ ಆಡಳಿತ ನೀಡಲಿದೆ. 

ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಮಾತನಾಡಲು ಮುಂದಾಗುತ್ತಿಲ್ಲ. ಬಿಜೆಪಿ ವಿವಾದಗಳನ್ನು ಹುಟ್ಟು ಹಾಕುವ ಮೂಲಕ ನಮ್ಮ ಸರ್ಕಾರದ ಅಭಿಪ್ರಾಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲೂ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಐಎಎಸ್‌ ಅಧಿಕಾರಿಗಳ ಬೆಂಗಳೂರು ವರ್ಗಕ್ಕೆ ಲಂಚ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಆರೋಪ ಮಾಡಿದ್ದಾರೆ, ಯಾರು ಕೊಟ್ಟಿದ್ದಾರೆ ಅವರನ್ನೇ ಕೇಳಬೇಕು. ಕಳೆದ ಒಂದು ತಿಂಗಳಿನಿಂದ ವರ್ಗಾವಣೆಯಲ್ಲಿ ದುಡ್ಡು, ದುಡ್ಡು ಎನ್ನುತ್ತಿದ್ದಾರೆ. ಇದು ಬರೀ ಬಿಜೆಪಿಯವರ ಆರೋಪವಾಗಿದೆ. 

Tap to resize

Latest Videos

ಬೆಳಗಾವಿ ವಿಭಜಿಸಿ ಮೂರು ಜಿಲ್ಲೆ ಮಾಡಲು ಕೋರಿದ್ದೇವೆ: ಸಚಿವ ಸತೀಶ್‌ ಜಾರಕಿಹೊಳಿ

ಈ ಬಗ್ಗೆ ಅವರನ್ನೇ ಕೇಳಬೇಕು. ಈ ರೀತಿ ಮಾತನಾಡುವುದರಿಂದ ಸಾರ್ವಜನಿಕರಿಗೆ ಏನು ಉಪಯೋಗ? ಜನರಿಗೆ ಉಪಯೋಗ ಆಗುವಂತಹ ಕಾರ್ಯ ಮಾಡಬೇಕು. ಸರ್ಕಾರದ ಐದು ಗ್ಯಾರಂಟಿ ಯಶಸ್ವಿಯಾಗಿವೆ.. ಬಡವರಿಗೆ ಯೋಜನೆ ತಲುಪುತ್ತಿವೆ. ಇದರಿಂದಾಗಿ ಅವರಿಗೆ ನೋವಾಗಿ ಸರ್ಕಾರದ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಲಾಡ್‌ ಕಿಡಿಕಾರಿದರು. ಮುನಿರತ್ನ ಪುನಃ ಕಾಂಗ್ರೆಸ್‌ ಸೇರ್ಪಡೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಡ್‌, ನಮ್ಮದು ಡಬಲ್‌ ಡೆಕ್ಕರ್‌ ಬಸ್‌ ಇದ್ದಂತೆ. ಎಲ್ಲಿ ಬೇಕಾದರೂ ಹತ್ತಬಹುದು. ಎಲ್ಲಿ ಬೇಕಾದಲ್ಲಿ ಇಳಿಯಬಹುದು. 

ಎದೆಯ ಮೇಲೆ ಪೋಷಕರು, ಸುದೀಪ್ ಹಚ್ಚೆ: ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ!

ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಇದೆ. ಆದರೆ, ಮುನಿರತ್ನ ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ. ಇರಬಹುದು, ಆದರೆ ಹೆಚ್ಚಿಗೆ ಗೊತ್ತಿಲ್ಲ. ನಾವು ಯಾರನ್ನೂ ಸೆಳೆಯುತ್ತಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಬಿಜೆಪಿಯ ಮುನೇನಕೊಪ್ಪ ಕಾಂಗ್ರೆಸ್‌ ಸೇರುವುದು ಹಾಗೂ ಅವರು ಎಂಪಿ ಅಭ್ಯರ್ಥಿ ಆಗುವ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇಲ್ಲ. ಅವರು ಬಂದರೆ ಸೇರಿಸಿಕೊಳ್ಳಲು ಸ್ವಾಗತ ಇದೆ. ಯಾರಿಗೆ ಎಂಪಿ ಟಿಕೆಟ್‌ ಎನ್ನುವುದು ಹೈಕಮಾಂಡ್‌ ಫೈನಲ್‌ ಮಾಡುತ್ತದೆ. ಮಾಜಿ ಶಾಸಕ ಚಿಕ್ಕನಗೌಡರ ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾಹಿತಿ ನನಗೂ ಬಂದಿದೆ. ಆದರೆ ಅವರು ಯಾವ ಷರತ್ತು ವಿಧಿಸಿದ್ದಾರೆ ಎಂಬ ಮಾಹಿತಿ ಇಲ್ಲ ಎಂದರು.

click me!