ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 2.45 ಲಕ್ಷ ಕೋಟಿ ರು. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬೆಂಗಳೂರು (ನ.14): ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ದಿವಾಳಿ ಮಾಡಿದ್ದಾರೆ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 2.45 ಲಕ್ಷ ಕೋಟಿ ರು. ಸಾಲ ಮಾಡಿದ್ದರು. ಸಾಲದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ 20 ತಿಂಗಳ ಅವಧಿಯಲ್ಲಿ 3,500 ಕೋಟಿ ರು. ಸಾಲ ಮಾಡಲಾಗಿತ್ತು. ಹಿಂದೆ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ 2,45,000 ಕೋಟಿ ರು. ಸಾಲ ಮಾಡಿದ್ದರು.
ಈಗ 85,815 ಕೋಟಿ ರು. ಸಾಲ ಮಾಡಲು ಹೊರಟಿದ್ದಾರೆ. ಹಾಲಿ ರಾಜ್ಯದ ಸಾಲ ಪ್ರಮಾಣ 5,71,600 ಕೋಟಿ ರು. ಇದೆ. ಪ್ರತಿ ವರ್ಷ 56,000 ಕೋಟಿ ರು. ಬಡ್ಡಿ ಕಟ್ಟಬೇಕು ಎಂದು ಸಿಎಂ ಹೇಳಿದ್ದಾರೆ. ಸಾಲದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಉಚಿತ ಯೋಜನೆಗಳಿಂದ ಕರ್ನಾಟಕದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಯಾಗಿ, ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಮೋದಿ ಸರ್ಕಾರವೇ ದೇಶವನ್ನು ದಿವಾಳಿ ಮಾಡಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.
ರೈತರ ಹೊಸ ವಿದ್ಯುತ್ ಸಂಪರ್ಕಕ್ಕೆ ಸಬ್ಸಿಡಿ ಕಟ್: ಎಚ್‌ಡಿಕೆ ಆಕ್ರೋಶ
ಏನು ಗ್ರೇಟರ್ ಬೆಂಗಳೂರು ಮಾಡ್ತಾರೋ ಮಾಡಲಿ: ನನ್ನ ಜಿಲ್ಲೆಯ ಅಭಿವೃದ್ಧಿ ಕುರಿತು ಯಾವುದೇ ತಕರಾರು ಇಲ್ಲ. ಬಿಡದಿ ಗ್ರೇಟರ್ ಬೆಂಗಳೂರು ಸೇರ್ಪಡೆ ಸೇರಿದಂತೆ ಇಂತಹ ಇನ್ನೂ ಇಪ್ಪತ್ತು ಘೋಷಣೆ ಮಾಡಲಿ. ಏನು ಗ್ರೇಟರ್ ಬೆಂಗಳೂರು ಮಾಡುತ್ತಾರೋ ಮಾಡಲಿ. ಈಗ ನಾವು ಬೆಂಗಳೂರನ್ನೇ ನೋಡುತ್ತಿಲ್ಲವಾ? ಮಳೆ ಬಂದಾಗ ಬೆಂಗಳೂರು ಏನಾಗುತ್ತಿದೆ ಗೊತ್ತಿಲ್ಲವಾ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಿಡದಿ ಗ್ರೇಟರ್ ಬೆಂಗಳೂರು ಸೇರ್ಪಡೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2004ರಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಅಂದಿದ್ರು. ಮಳೆ ಆದಾಗ ಏನಾಯ್ತು ಅಂತ ನೀವೆ ತೋರಿಸಿದ್ದೀರಾ. ಕಂದಾಯ ಸಚಿವರ ಕ್ಷೇತ್ರದಲ್ಲೇ ಏನಾಯಿತು ಅಂತ ನೋಡಿದ್ದೀವಿ. ಇದೇ ಗ್ರೇಟರ್ ಬೆಂಗಳೂರು. ನಾನ್ ಕಾಣದೇ ಇರೋದಾ ಇದೆಲ್ಲಾ ಎಂದು ವ್ಯಂಗ್ಯವಾಡಿದರು. ಎಚ್‌ಡಿಕೆ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಸರ್ಕಾರದಲ್ಲೂ ಅಧಿಕಾರಿಗಳ ಮಟ್ಟದಲ್ಲಿ ಇದೆಲ್ಲ ನಡೆಯುತ್ತೆ. ಫೋನ್ ಕದ್ದಾಲಿಕೆ ಮಾಡಿ ಏನು ಪ್ರಯೋಜನ. ಅವರಿಗೆ ಅನುಕೂಲ ಆಗುತ್ತೆ ಅಂದರೆ ಮಾಡಲಿ ಬಿಡಿ ಎಂದರು.
ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ಬಿಜೆಪಿ-ಜೆಡಿಎಸ್ ಮೈತ್ರಿ ಆದ್ಯತೆ: ಎಚ್‌ಡಿಕೆ
ಶೀಘ್ರದಲ್ಲೇ ರಾಮನಗರಕ್ಕೆ ಮರುನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರು ದಕ್ಷಿಣ ಅಲ್ಲದಿದ್ರೆ ದೆಹಲಿ ಅಂತ ಮಾಡಲಿ. ದೆಹಲಿ ಅಂತ ಮಾಡಿದರೆ ಪ್ರಪಂಚದ ಮೂಲೆಮೂಲೆಯಿಂದ ಎಲ್ಲಾ ಬರ್ತಾರೆ. ರಾಮನಗರವನ್ನ ಬೆಂಗಳೂರು ಮಾಡೋದು ಬೇಡ, ದೆಹಲಿ ಅಥವಾ ದುಬೈ ಅಂತಾನೆ ಮಾಡಿ. ಹೆಸರು ಬದಲಾವಣೆ ಮಾಡೋದ್ರಿಂದ ಯಾರೂ ಬರಲ್ಲ. ನೀವೇನು ಮೂಲ ಸೌಕರ್ಯ ಕೊಡುತ್ತೀರಾ? ಅಭಿವೃದ್ಧಿ ಮಾಡುತ್ತೀರಾ ಅದರ ಮೇಲೆ ಜನಬರೋದು. ಅವರಿಗೆ ಬೇರೆ ಕೆಲಸ ಇಲ್ಲ, ಜನರ ಕೆಲಸ ಮಾಡಲ್ಲ. ಜನರ ಗಮನಸೆಳೆಯೋಕೆ ಹೀಗೆ ಮಾತನಾಡುತ್ತಾರೆ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು.