ಮೀನು ತಿನ್ನೋದಾದ್ರೆ ತಿನ್ನಿ, ವಿಡಿಯೋ ಏಕೆ?: ತೇಜಸ್ವಿಗೆ ರಾಜನಾಥ್ ಟಾಂಗ್‌

By Kannadaprabha NewsFirst Published Apr 15, 2024, 12:08 PM IST
Highlights

ಮಾಂಸಹಾರಿ ಆಹಾರವನ್ನು ತಿನ್ನುವುದಾದರೆ ನೀವು ತಿನ್ನಿ. ಆದರೆ ಅದನ್ನು ಜನತೆಗೆ ತೋರಿಸುವುದು ಅವಶ್ಯಕತೆಯಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರ್‌ಜೆಡಿ ನಾಯಕ ಲಾಲು ಯಾದವ್‌ ಅವರ ಪುತ್ರ ತೇಜಸ್ವಿ ಯಾದವ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಪಟನಾ: ಮಾಂಸಹಾರಿ ಆಹಾರವನ್ನು ತಿನ್ನುವುದಾದರೆ ನೀವು ತಿನ್ನಿ. ಆದರೆ ಅದನ್ನು ಜನತೆಗೆ ತೋರಿಸುವುದು ಅವಶ್ಯಕತೆಯಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರ್‌ಜೆಡಿ ನಾಯಕ ಲಾಲು ಯಾದವ್‌ ಅವರ ಪುತ್ರ ತೇಜಸ್ವಿ ಯಾದವ್‌ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚೆಗಷ್ಟೇ ತೇಜಸ್ವಿ ಯಾದವ್‌ ನವರಾತ್ರಿಯ ಸಮಯದಲ್ಲಿ ಮೀನು ತಿನ್ನುವ ದೃಶ್ಯಗಳನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಬಿಜೆಪಿ ಸಭೆಯಲ್ಲಿ ಪ್ರತ್ರಿಕ್ರಿಯೆ ನೀಡಿದ ರಾಜನಾಥ್‌, ‘ನೀವು ತಿನ್ನುವುದಾದರೆ ಮೀನನ್ನಾದರೂ ತಿನ್ನಿ, ಇಲ್ಲ ಹಂದಿ, ಪಾರಿವಾಳ, ಆನೆ, ಕುದುರೆ ಏನು ಬೇಕಾದರೂ ತಿನ್ನಿ. ಆದರೆ ಅದನ್ನು ಜನರಿಗೆ ತೋರಿಸುವುದೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಯಿ ಅಂತ್ಯಸಂಸ್ಕಾರಕ್ಕೆ ನನಗೆ ಪರೋಲ್ ನೀಡಲಿಲ್ಲ, ಸರ್ವಾಧಿಕಾರಿ ಯಾರು? ಭಾವುಕರಾದ ರಾಜನಾಥ್!

ಕೆಲವು ನಾಯಕರು ಮತದಾರರನ್ನು ಸಮಾಧಾನಪಡಿಸಲು ನವರಾತ್ರಿಯ ಸಮಯದಲ್ಲಿ ಮಾಂಸಾಹಾರಿ ಆಹಾರದ ದೃಶ್ಯಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ, 'ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿಯವರನ್ನ ಜೈಲಿಗೆ ಹಾಕುತ್ತೇವೆ' ಎಂಬ ಆರ್‌ಜೆಡಿ ಸಂಸದ ಮತ್ತು ಲಾಲು ಯಾದವ್ ಪುತ್ರಿ ಮಿಶಾ ಭಾರ್ತಿಯವರ ಹೇಳಿಕೆ ಪ್ರಸ್ತಾಪಿಸಿ, ಜೈಲಿನಲ್ಲಿರುವವರು ಮತ್ತು ಜಾಮೀನಿನ ಮೇಲೆ ಹೊರಗಿರುವವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

click me!