ಉತ್ತರ ಕರ್ನಾಟಕದಲ್ಲಿ 35 ಕ್ಷೇತ್ರ ಗೆಲ್ಲುವ ಸಂಕಲ್ಪ: ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ

By Govindaraj S  |  First Published Jan 13, 2023, 2:40 AM IST

ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಕನಿಷ್ಠ 35 ಸ್ಥಾನಗಳಲ್ಲಿ ಜಯ ಗಳಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್‌ ಬರೀ ಮಂಡ್ಯ, ಹಾಸನಕ್ಕೆ ಸೀಮಿತ ಅನ್ನುವವರಿಗೆ ನಾವು ಈ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.


ಕಲಬುರಗಿ (ಜ.13): ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಕನಿಷ್ಠ 35 ಸ್ಥಾನಗಳಲ್ಲಿ ಜಯ ಗಳಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಜೆಡಿಎಸ್‌ ಬರೀ ಮಂಡ್ಯ, ಹಾಸನಕ್ಕೆ ಸೀಮಿತ ಅನ್ನುವವರಿಗೆ ನಾವು ಈ ಚುನಾವಣೆಯಲ್ಲಿ ಉತ್ತರ ನೀಡುತ್ತೇವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಅಫಜಲ್ಪುರ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ತಿಳಗೂಳ ಬಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಕಲ್ಯಾಣ, ಕಿತ್ತೂರು ಎಂದು ಹೆಸರಿಟ್ಟರಾಗದು. 

ಪ್ರಗತಿ ಎಲ್ಲಿದೆ? ಜನರನ್ನು ಭಾವನೆಗಳ ಮೂಲಕ ಕೆರಳಿಸುವವವರಿಂದ ಪ್ರಗತಿ ಸಾಧ್ಯವಿಲ್ಲವೆಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಈ ಭಾಗದ ಶಾಸಕರು ತಾವು ಸಿಎಂ ಆಗಿದ್ದಾಗ ಬಂದು ಹೆಸರು ಬದಲಾವಣೆಗೆ ಆಗ್ರಹಿಸಿದ್ದನ್ನು ಮೆಲಕು ಹಾಕಿದ ಅವರು ಪ್ರಗತಿಯಾಗದ ಹೊರತು ಹೆಸರು ಬದಲಾವಣೆಯೊಂದೇ ಬೇಡವೆಂದು ಹೇಳಿದ್ದೆ. ಬಿಜೆಪಿಯವ್ರು ಹೆಸರಷ್ಟೇ ಬದಲಾವಣೆ ಮಾಡಿದ್ದಾರೆ. ಜನ ಇಂತಹದ್ದಕ್ಕೆಲ್ಲ ಮರಳಾಗಬಾರದು ಎಂದರು.

Latest Videos

undefined

ಜೆಡಿಎಸ್‌ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್‌.ಡಿ.ಕುಮಾರಸ್ವಾಮಿ

ಜ.17ರಿಂದ ಪಂಚರತ್ನ 3ನೇ ಹಂತ: ವಿಜಯಪುರ, ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲೂ ಪಂಚರತ್ನ ರಥಯಾತ್ರೆ ನಡೆಸಲಾಗುತ್ತದೆ. ಸಂಕ್ರಾಂತಿ ನಂತರದ ಜ.17ರಿಂದ ಸಿಂದಗಿಯಿಂದಲೇ ಕಥಯಾತ್ರೆ 3ನೇ ಹಂತ ಶುರುವಾಗಲಿದೆ, ಮಾರ್ಚ್‌ 20ರವರೆಗೆ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ರಾಜ್ಯಕ್ಕೆ ಜೆಡಿಎಸ್‌ ಅನಿವಾರ್ಯ ಅನ್ನೋದು ರಥಯಾತ್ರೆಯಿಂದ ಗೊತ್ತಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಹೆಚ್ಡಿಕೆ ಅಧಿಕಾರಕ್ಕೆ ಬಂದರೆ ನಮ್ಮ ಸಮಸ್ಯೆ ಬಗೆಹರಿಯುತ್ತೆ, ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಭಾವನೆ ವ್ಯಕ್ತವಾಗ್ತಿದೆ, ಕಲ್ಯಾಣ ಕರ್ನಾಟಕ ಹೆಸರಿಟ್ಟಮಾತ್ರಕ್ಕೆ ಅಭಿವೃದ್ಧಿ ಆಗಲ್ಲ. ಇಲ್ಲಿನ ರಸ್ತೆಗಳ ಸ್ಥಿತಿ ನೋಡಿದ್ರೆ ದೇವರೇ ಕಾಪಾಡಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡುವ ಹಣ ಎಲ್ಲಿಗೆ ಹೋಗುತ್ತೆ? ಶೌಚಾಲಯ ಇಲ್ಲದೇ ಮಹಿಳೆಯರು ತಮ್ಮ ಅಳಲು ತೋಡಿಕೊಳ್ತಿದ್ದಾರೆ. ಒಂದು ಕಡೆ ಸ್ವಚ್ಛ ಭಾರತ್‌ ಅಂತಾರೆ, ಎಲ್ಲಿದೆ ಸ್ವಚ್ಛ ಭಾರತ್‌? ಎಂದು ಪ್ರಶ್ನಿಸಿದರು.

ಯಾವ ಮುಖದೊಂದಿಗೆ ರಾಜ್ಯಕ್ಕೆ ಮೋದಿ ಬರ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಖರ್ಚು ವೆಚ್ಚ ಯಾರು ಕೊಡ್ತಿದ್ದಾರೆ, ಜನಗಳ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ, ಜನರ ದುಡ್ಡು ಈ ರೀತಿ ಹಣ ಖರ್ಚು ಮಾಡುತ್ತಿದ್ದಾರೆ, ಲಂಚದ ದುಡ್ಡಲ್ಲಿ ಜನರನ್ನು ಕರೆದುಕೊಂಡು ಬನ್ನಿ ಅಂತ ಅಂತಿದ್ದಾರೆ. 5 ಲಕ್ಷ ಜನ ಸೇರಿಸಿ ಹಕ್ಕು ಪತ್ರ ಕೊಡುತ್ತಾರಂತೆ ಎಂದು ಮೋದಿ ಸಮಾರಂಭ ಟೀಕಿಸಿದ ಅವರು ಬೆಳೆ ಹಾಳಾಗಿ ರೈತರು ಅಳುತ್ತಿರೋವಾಗ ಮೋದಿ ಅದ್ಯಾವ ಮುಖದೊಂದಿಗೆ ಇಲ್ಲಿಗೆ ಬರ್ತಾರೆ ಎಂದು ಪ್ರಶ್ನಿಸಿದರು.

ಯಾವ ಪುರುಷಾರ್ಥಕ್ಕೆ ಕಾರ್ಯಕ್ರಮವನ್ನು ಮಾಡುತ್ತಿದ್ದೀರಾ, ನೆಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದೆ. ಯಾವ ಮುಖ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತೀರಾ? ಭಾಯಿ ಔರ್‌ ಬೆಹೆನೋ ಅಂತಾ ಹೇಳ್ತೀರಾ, ಭಾಯಿ ಔರ್‌ ಬೆಹೆನೋ ಅವರ ಪರಿಸ್ಥಿತಿ ನೋಡಿ. ಸರ್ಕಾರದ ದುಡ್ಡು ಯಲ್ಲಮ್ಮನ ಜಾತ್ರೆ ಬಿಜೆಪಿ ಜಾತ್ರೆ. ಈ ರೀತಿ ಸ್ವೇಚ್ಚಾಚಾರವಾಗಿ ಖರ್ಚು ಮಾಡುತ್ತಿದ್ದಾರೆಂದು ಬಿಜೆಪಿ ವಿರುದ್ಧ ಮುಗಿ ಬಿದ್ದರು.

ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ

ಪಂಚರತ್ನವನ್ನೇ ಕಾಂಗ್ರೆಸ್‌ ಕಾಪಿ ಮಾಡ್ತಿದೆ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ 200 ಯೂನಿಟ್‌ ಫ್ರೀ ವಿದ್ಯುತ್‌ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ 800 ರು. ರಿಯಾಯಿತಿ ಸಿಗುತ್ತೆ ಅದು ದೊಡ್ಡ ಕಾರ್ಯಕ್ರಮನಾ? ನಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಯಾವುದೇ ಸರಿಸಾಟಿ ಇಲ್ಲ, ನಮ್ಮ ಕಾರ್ಯಕ್ರಮವನ್ನು ಹೈಜಾಕ್‌ ಮಾಡುತ್ತಿದ್ದಾರೆಂದರು. ಕಾಲೇಜುಗಳ ಮುಂದೆ ಡ್ರಗ್ಸ್‌ ದಂಧೆ ಮಾಡಲಾಗ್ತಿದೆ ಆದ್ರೆ ಈಗ ಯುವ ಜನೋತ್ಸವ ಅಂತ ಮಾಡ್ತಿದ್ದಾರೆ. ಇದೆಲ್ಲಾ ದಂಧೆ ಮಾಡಿ ಈಗ ಬಿಜೆಪಿ ಈ ರೀತಿ ಮಾಡ್ತಿದೆ ಎಂದು ಟೀಕಿಸಿದರು.

click me!