ಯಾರ ವೈಯುಕ್ತಿಕ ಹಠನೋ, ಚಟನೋ ಗೊತ್ತಿಲ್ಲ. ನನಗೆ ಟಿಕೆಟ್ ಮಿಸ್ ಆಗಿದೆ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ವಾಸು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು (ಏ.15) : ಯಾರ ವೈಯುಕ್ತಿಕ ಹಠನೋ, ಚಟನೋ ಗೊತ್ತಿಲ್ಲ. ನನಗೆ ಟಿಕೆಟ್ ಮಿಸ್ ಆಗಿದೆ ಎಂದು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ವಾಸು ಅಸಮಾಧಾನ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಮಿಸ್ ಆಗಿದ್ದಕ್ಕೆ ನನಗೆ ಬೇಸರ ಇಲ್ಲ. ಸೋತಾಗಲೂ ನಾನು ಕುಗ್ಗಿಲ್ಲ.
ನನಗಿದ್ದ ವಿಷ್ಹನ್ ಈಡೇರಿಸಲು ಆಗಲಿಲ್ಲ ಅನೋ ಬೇಸರ ಇದೆ. ಹಲವು ದಿನಗಳಿಂದ ಟಿಕೆಟ್ ಬಗ್ಗೆ ವಾದವಿವಾದಗಳು ನಡಿತಾ ಇವೆ. 45 ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇದ್ರೆ ನಾನು ರಾಜಕೀಯದಿಂದಲೇ ನಿವೃತ್ತಿಯಾಗಲು ರೆಡಿ, ದಂಡ ಕಟ್ಟಲು ರೆಡಿ. ನಾನು ಇದುವರೆಗೂ ಕುಟುಂಬಕ್ಕಾಗಲಿ, ಪ್ರತ್ಯಕ್ಷ, ಪರೋಕ್ಷವಾಗಿಯಾಗಲಿ ಸಾರ್ವಜನಿಕ, ಸರ್ಕಾರದ ಪ್ರಾಪರ್ಟಿಯನ್ನ ಅನಧಿಕೃತ ತೆಗೆದುಕೊಂಡಿದ್ರೆ ನಾನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದು ನನ್ನ ವಿರುದ್ಧದ ಒಂದೇ ಒಂದು ತಪ್ಪು ತೋರಿಸಿ ಎಂದು ಸವಾಲು ಹಾಕಿದರು.
undefined
‘ಬಿಜೆಪಿ ಪ್ರಾಯೋಜಕತ್ವದಲ್ಲೇ ಸಹಕಾರಿ ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದ್ದಾ?’
ನನ್ನ ಹೆಸರನ್ನು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಸೂಚಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಮೇಯರ್, ಸಹಕಾರ ಮಹಾಮಂಡಲ, ಶಾಸಕ, ಸಿಎಂ ಕಾರ್ಯದರ್ಶಿ ಹೀಗೆ ಎಲ್ಲ ಹಂತದಲ್ಲೂ ಪಕ್ಷದ ಸಾಮರ್ಥ್ಯ ಹೆಚ್ಚಿಸಿದ್ದೇನೆ. 1999, 2008, 2018ರಲ್ಲಿ ಸೋತಾಗಲೂ ಪಕ್ಷಕ್ಕೆ ಬಲ ತಂದು ಕೊಟ್ಟಿದ್ದೇನೆ. 2013ರಲ್ಲಿ ಶಾಸಕನಾಗಿ ಆಸ್ಪತ್ರೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಐದು ಜಿಲ್ಲೆಗೆ ಅನುಕೂಲ ಆಗುವ ಅಭಿವೃದ್ಧಿ ಮಾಡಿದ್ದೇನೆ. ನಾನು ಒಂದು ವರ್ಗಾವಣೆ ಕೇಳಿಲ್ಲ. ಇದು ಗಿನ್ನಿಸ್ ರೆಕಾರ್ಡ್ ಬುಕ್ಗೆ ಬೇಕಾದರೂ ಸೇರಿಸಬಹುದು. ಮೂಲಸೌಕರ್ಯದ ಬಗ್ಗೆ ಮಾತ್ರ ಕೇಳಿದ್ದೇನೆ. ಮೈಸೂರಿನಲ್ಲಿ ಮಾಜಿ ಶಾಸಕ ವಾಸು ಹೇಳಿಕೆ.
ಅಭಿವೃದ್ಧಿ ಕೆಲಸ ಮಾಡಿದ ತೃಪ್ತಿ ಇದೆ:
ನನಗೆ ತೃಪ್ತಿ ಇದೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ತಪ್ಪಿಸಿದವರಿಗೆ ದೇವರು ಸನ್ಮಾರ್ಗ ಕೊಡಲಿ. ನನಗೆ ಈ ವರೆಗೆ ಅವಕಾಶ ಕೊಟ್ಟ ಪಕ್ಷವನ್ನು ನಾನೂ ದೂರೋದಿಲ್ಲ. ನನಗೆ ಬಹಳ ಒತ್ತಡ ನಮ್ಮ ಪಕ್ಷಕ್ಕೆ ಬನ್ನಿ ಅಂತ ಹಲವರು ಕರೆಯುತ್ತಿದ್ದಾರೆ. ಈ ಕುರಿತು ನಾನು ಮುಂದಿನ ಎರಡು ದಿನಗಳಲ್ಲಿ ತಿರ್ಮಾನ ಮಾಡ್ತೀನಿ. ಪಕ್ಷ ಬಿಡೋದ್ರಿಂದ ನನ್ನನ್ನು ನಂಬಿ ಬಂದವರಿಗೆ ಅನ್ಯಾಯ ಮಾಡಿದಂತಾಗುತ್ತೆ.. ಪಕ್ಷದಲ್ಲಿ ನನಗೆ ಸಪೋರ್ಟ್ ಮಾಡಿದವ್ರಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾನು ಪಕ್ಷ ಬಿಡೋದಿಲ್ಲ. ಆದರೆ ಪಕ್ಷದಲ್ಲಿ ಇದ್ದುಕೊಂಡು ನನಗೆ ಅನ್ಯಾಯ ಮಾಡಿದವ್ರನ್ನ ಖಂಡಿಸೋದು ದ್ವೇಷಿಸೋದು ಮಾತ್ರ ನಿಜ.
ನನಗೆ ಟಿಕೆಟ್ ತಪ್ಪಿಸೋದ್ರಿಂದ ನನ್ನ ವಾಯ್ಸ್ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಪಕ್ಷದಲ್ಲೂ ಜೀತದಾಳು ಪದ್ಧತಿ ಇದೆ:
ನಾನು ನೇರ, ನಿಷ್ಠೂರವಾಗಿ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಕೆಲವ್ರು ನಿಂತಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದಲ್ಲೂ ಜೀತದಾಳು ಪದ್ದತಿ ಇದೆ. ನೀನು ಮಾಡಿದ್ದೇ ಸರಿ ಅಣ್ಣ, ನಿನ್ನ ಕುದುರೆ ಓಡುತ್ತೆ ಅಣ್ಣ ಅಂತಾರೆ. ಕೆಲವರಿಗೆ ಗೆಲ್ಲಿಸುವ ಶಕ್ತಿ ಇರುತ್ತೆ. ಅವರ ಬಗ್ಗೆ ಪಕ್ಷದಲ್ಲಿ ಗೌರವ ಇರುತ್ತೆ. ಆದರೆ ಕೆಲವರಿಗೆ ಸೋಲಿಸುವ ಶಕ್ತಿ ಇರುತ್ತೆ. ಅಂಥವರನ್ನು ಕಂಡರೆ ಪಕ್ಷಗಳಿಗೆ ಭಯ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಕುಟುಕಿದರು.
ಸಿದ್ದರಾಮಯ್ಯ ನಿವಾಸಕ್ಕೆ ಟಿಕೆಟ್ ಆಕಾಂಕ್ಷಿಗಳ ಪರೇಡ್
ಸಿದ್ದರಾಮಯ್ಯ ಸೋಲಿಸುವ ನಾಯಕ:
ನಾನು ಪಕ್ಷದಲ್ಲೇ ಇರ್ತಿನಿ. ಪಕ್ಷಬಿಟ್ಟು ಹೋಗಲ್ಲ. ಎರಡು ದಿನಗಳಲ್ಲಿ ತಿರ್ಮಾನ ಮಾಡ್ತೀನಿ. 2013 ರಲ್ಲಿ ಏನೂ ಸಮಸ್ಯೆ ಇಲ್ದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ರು. 2014 ರಲ್ಲಿ ಎಂಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತೆವು. 2018 ರಲ್ಲಿ ನಾವು ಸೋತೆವು. ಆದ್ರೆ ಈ ಹೊಣೆಯನ್ನು ಅಂದಿನ ಮುಖ್ಯಮಂತ್ರಿಗಳು ಹೊಣೆ ಹೊರಬೇಕಿತ್ತು ಹೊರಲಿಲ್ಲ. ನನಗೆ ಟಿಕೆಟ್ ತಪ್ಪಿಸಿದ್ದೇ ಸಿದ್ದರಾಮಯ್ಯ ಅವ್ರು. ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೇರ ಹೊಣೆ ಎಂದ ಮಾಜಿ ಶಾಸಕ ವಾಸು.