ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ, ದಿ.ಎಸ್.ಎಸ್.ಮಲಘಾಣ ಸಾಹೇಬರು ಕೊನೆಯ ಚುನಾವಣೆವರಿಗೂ ನನ್ನ ಜತೆ ಇರಬೇಕಾಗಿತ್ತು. ಅವರು ನನ್ನನ್ನು ಕ್ಷೇತ್ರಕ್ಕೆ ಪರಿಚಯ ಮಾಡಿದವರು ಎಂದ ಕಾರಜೋಳ
ಬಾಗಲಕೋಟೆ(ಏ.16): 29 ವರ್ಷಗಳ ಕಾಲವೂ ಮತಕ್ಷೇತ್ರದ ಮತದಾರರು ನನ್ನ ಸೇವೆಯನ್ನು ಗುರುತಿಸಿ ಗೆಲ್ಲಿಸುತ್ತಾ ಬಂದಿದ್ದಾರೆ. ಅವರ ಮನೆ ಸದಸ್ಯನನ್ನಾಗಿ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು, ಅವರ ಋುಣ ತೀರಿಸುವ ಕೆಲಸ ಮಾಡುವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಮುಧೋಳ ನಗರದದಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳಾದ ರಾಮಕೃಷ್ಣ ಹೆಗಡೆ, ದಿ.ಎಸ್.ಎಸ್.ಮಲಘಾಣ ಸಾಹೇಬರು ಕೊನೆಯ ಚುನಾವಣೆವರಿಗೂ ನನ್ನ ಜತೆ ಇರಬೇಕಾಗಿತ್ತು. ಅವರು ನನ್ನನ್ನು ಕ್ಷೇತ್ರಕ್ಕೆ ಪರಿಚಯ ಮಾಡಿದವರು ಎಂದು ಹೇಳಿದರು.
undefined
ನಾನು ಮಾಡಿದ ಅಭಿವೃದ್ಧಿ ಮುಂದಿಟ್ಟು ಮತ ಕೇಳುವೆ: ಶಾಸಕ ವೀರಣ್ಣ ಚರಂತಿಮಠ
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿರುವೆ. ನನ್ನ ಕ್ಷೇತ್ರದ ಜನರು 1994ರಿಂದಲೂ ಸತತವಾಗಿ ಐದು ಬಾರಿ ಆರಿಸಿ ಕಳುಹಿಸಿದ್ದಾರೆ. 1999ರಲ್ಲಿ 437 ಅಂತರದಿಂದ ಸೋತಿರುವೆ. ಅಂದಿನಿಂದಿ ಇಂದಿನವರೆಗೂ ಮತದಾರರ ಋುಣ ತೀರಿಸಲು ಸಾಧ್ಯವಿಲ್ಲ. ಐದು ವರ್ಷಗಳ ಸೇವೆ ಸಲ್ಲಿಸಿ ರಾಜಕೀಯ ನಿವೃತ್ತಿಯನ್ನು ಘೋಷಿಸುತ್ತೇನೆ. ಮುಂದೆ ಬರುವ ಅಭ್ಯರ್ಥಿಗಳು ಇದನ್ನು ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಇನ್ನು ಐವತ್ತು ವರ್ಷಗಳ ಕಾಲ ಜೋಪಾನು ಮಾಡಿಕೊಂಡು ಹೋಗಬೇಕಾಗಿದೆ ಎಂದರು. ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ, ಆರೋಗ್ಯ, ಕಾರ್ಖಾನೆಗಳ ಸ್ಥಾಪನೆ ಸೇರಿದಂತೆ ನಾನಾ ಕಾರ್ಯಗಳನ್ನು ಮಾಡಿರುವೆ ಎಂದರು.
ಕಾಂಗ್ರೆಸ್‌ದಿಂದ ಅನ್ಯಾಯ:
ರಾಜ್ಯ, ರಾಷ್ಟ್ರದಲ್ಲಿಯೂ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ನೀಡಿಲ್ಲ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಿಲ್ಲ. ಅಹಿಂದ ವರ್ಗಕ್ಕೆ ಶಿಕ್ಷಣ ನೀಡಲಿಲ್ಲ. ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗಿಲ್ಲ. ಆದರೆ, ನಮ್ಮ ಸರ್ಕಾರ ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸದಂತೆ ಮಾಡುತ್ತಿದೆ. ಸಿದ್ದರಾಮಯ್ಯ, ಖರ್ಗೆ, ಡಿಕೆಶಿ, ಪರಮೇಶ್ವರ ಅವರನ್ನು ಸಿಎಂ ಎಂದು ಹೆಸರು ಹೇಳುತ್ತಿವೆ ಎಂದು ಲೇವಡಿ ಮಾಡಿದರು. ಬಿಜೆಪಿಗೆ ತತ್ವ ಸಿದ್ಧಾಂತವಿದೆ. ಕಾರ್ಯಕರ್ತರ ಪಡೆ ಸಂಘದ ಕಾರ್ಯಗಳಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸುಭದ್ರ ಆಡಳಿತ, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರದ ಸಾಧನೆಗಳು ಮತದಾರರಿಗೆ ಪ್ರೇರಣೆಯಾಗಿವೆ. ನಮ್ಮದೇ ಆಡಳಿತ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ತಳೇವಾಡ, ಡಾ.ರವಿ ನಂದಗಾಂವ, ಭೀಮನಗೌಡ ಪಾಟೀಲ, ಕೆ.ಆರ್.ಮಾಚಪ್ಪನ್ನವರ, ಇತರರು ಇದ್ದರು.
ಬಿಜೆಪಿಯಲ್ಲಿ ಬಂಡಾಯವಿಲ್ಲ
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು 30 ಸಾವಿರ ಮತಗಳಿಂದ ಗೆಲ್ಲುತ್ತಾರೆ. ಜಿಲ್ಲೆಯ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಜಯಸಾಧಿಸಲಿದ್ದಾರೆ ಎಂದರು. ಎಲ್ಲವೂ ಸರಿಯಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾರಜೋಳರಲ್ಲಿ ಇಲ್ಲ ಒಂದೂ ವಾಹನ, 1.23 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಚಿವ, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಯಾವುದೇ ವಾಹನ ಹೊಂದಿಲ್ಲ. ಪತ್ನಿ ಹೆಸರಿನಲ್ಲೂ ವಾಹನ ಹೊಂದದೇ ಇರುವುದು ಅಚ್ಚರಿ ಮೂಡಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಆಸ್ತಿ ಘೋಷಣೆ ವಿವರದಲ್ಲಿ ಸಚಿವರು ಇದನ್ನು ಉಲ್ಲೇಖಿಸಿದ್ದು, ಇಬ್ಬರ ಹೆಸರಿನಲ್ಲೂ ಯಾವುದೇ ವಾಹನಗಳಿಲ್ಲವೆಂದು ಘೋಷಿಸಿಕೊಂಡಿದ್ದಾರೆ. ಹಾಗೆಯೇ ಸಾಲವೂ ಇಲ್ಲವಾಗಿದೆ. ಅಲ್ಲದೇ, ಕಾರಜೋಳ ಬಂಗಾರದ ಆಭರಣವನ್ನೂ ಹೊಂದಿಲ್ಲದಿರುವುದು ವಿಶೇಷವಾಗಿದೆ.
ಕಾರಜೋಳ ಆಸ್ತಿ ವಿವರ:
ಕಾರಜೋಳ 5 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 2.28 ಕೋಟಿ ಹೊಂದಿದ್ದಾರೆ. 1.23 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಾದೇವಿ 2 ಲಕ್ಷ ನಗದು ಹೊಂದಿದ್ದು, 101 ತೊಲೆ ಬಂಗಾರದ ಆಭರಣ, 5 ಕೆಜಿ ಬೆಳ್ಳಿ ಹೊಂದಿದ್ದಾರೆ. 26 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆ: ಸಚಿವ ಮುರುಗೇಶ್‌ನಿರಾಣಿ
2018ರಲ್ಲಿ ಗೋವಿಂದ ಕಾರಜೋಳ 5 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಖಾತೆಗಳಲ್ಲಿ .47.51 ಲಕ್ಷ ಹಾಗೂ .96 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, ಪತ್ನಿ ಶಾಂತಾದೇವಿ .2 ಲಕ್ಷ ನಗದು, 101 ತೊಲೆ ಬಂಗಾರದ ಆಭರಣ, 5 ಕೆಜಿ ಬೆಳ್ಳಿ ಹೊಂದಿದ್ದರು. 18 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.