ದೆಹಲಿ ಚುನಾವಣೆಗೆ ಜೈಲಿನಲ್ಲಿರೋ ಆರೋಪಿಗೆ ಬಿ ಫಾರಂ ನೀಡಿದ ಓವೈಸಿ ಪಕ್ಷ: ಯಾರು ಈ ಅಭ್ಯರ್ಥಿ? ಈತನ ಮೇಲಿರುವ ಆರೋಪವೇನು? 

By Mahmad Rafik  |  First Published Jan 8, 2025, 12:50 PM IST

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಓವೈಸಿ ಪಕ್ಷವು ದೆಹಲಿ ದಂಗೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ ಶಿಫಾ ಉರ್ ರೆಹಮಾನ್‌ಗೆ ಟಿಕೆಟ್ ನೀಡಿದೆ. ಓಕ್ಲಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ರೆಹಮಾನ್ ಜೈಲಿನಲ್ಲಿದ್ದುಕೊಂಡೇ ಚುನಾವಣೆ ಎದುರಿಸಲಿದ್ದಾರೆ.


ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ  ಮುಹೂರ್ತ ನಿಗದಿಯಾಗಿದೆ. ಫೆಬ್ರವರಿ 5ರಂದು ಮತದಾನ ನಡೆಯಲಿದ್ದು,  ಫೆಬ್ರವರಿ 8ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆಡಳಿತರೂಢ ಎಎಪಿ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿ, ಚುನಾವಣಾ ನೀತಿ ಸಂಹಿತೆಗೂ ಮುನ್ನ ಹಲವು ಯೋಜನೆಗಳಿಗೆ ಚಾಲನೆ ನೀಡಿದೆ. ಮತ್ತೊಂದೆಡೆ ಬಿ ಫಾರಂ ದೊರೆಯುವ ಮೊದಲೇ  ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಚುನಾವಣೆ ಪ್ರಚಾರ ಆರಂಭಿಸಿದೆ. ಎಐಎಂಐಎಂ ಸಂಸದ ಅಸಾದುದ್ದನ್ ಓವೈಸಿ, ದೆಹಲಿ ದಂಗೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿಗೆ ಟಿಕೆಟ್ ನೀಡಿದೆ. 

ದೆಹಲಿ ದಂಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಫಾ ಉರ್ ರೆಹಮಾನ್‌ಗೆ ಓವೈಸಿ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ರೆಹಮಾನ್ ಸ್ಪರ್ಧೆ ಮಾಡಲಿದ್ದು, ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.  ಓಕ್ಲಾ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ತಾಹಿರ್ ಹುಸೈನ್‌ಗೆ ಮುಸ್ತಾಫಾಬಾದ್ ಕ್ಷೇತ್ರದ ಟಿಕೆಟ್‌ನ್ನು ಎಎಪಿ ನೀಡಿದೆ. ಎಎಪಿಯ ಈ ನಿರ್ಧಾರದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. 

Tap to resize

Latest Videos

ದೆಹಲಿಯಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧನ ನಡೆದ ಪ್ರದರ್ಶನಲ್ಲಿ ರೆಹಮಾನ್ ಪ್ರಮುಖ ಪಾತ್ರವಹಿಸಿದ್ದನು. ಈ ವೇಳೆ ಜಾಮೀಯಾ ಎಲುಮನೈ ಅಸೋಸಿಯೇಷನ್ ಅಧ್ಯಕ್ಷ ಸ್ಥಾನದಲ್ಲಿದ್ದ ರೆಹಮಾನ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ದೆಹಲಿ  ದಂಗೆ ಪ್ರಕರಣದಲ್ಲಿರುವ ಮತ್ತೋರ್ವ ಆರೋಪಿ  ಶಾರೂಖ್ ಪಠಾನ್ ಎಂಬಾತನಿಗೆ ಸೀಲಂಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವ ಕುರಿಯು ಓವೈಸಿ ಪಕ್ಷದೊಳಗೆ ಚಿಂತನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪ್ರಮಾಣವಚನ ಸ್ವೀಕಾರದ ವೇಳೆ 'ಜೈ ಪ್ಯಾಲೆಸ್ತೇನ್‌..' ಘೋಷಣೆ ಕೂಗಿದ ಅಸಾದುದ್ದೀನ್‌ ಓವೈಸಿ!

ಎಎಪಿ ಪಕ್ಷದ ಮುಖಂಡ ಅಮಾನುಲ್ಲಾಹ ಖಾನ್ ದೆಹಲಿಯ ಅಲ್ಪಸಂಖ್ಯಾತರ ಮುಖವಾಣಿಯಾಗಿದ್ದಾರೆ.  ಆರೋಪಿ ರೆಹಮಾನ್‌ಗೆ ಟಿಕೆಟ್ ನೀಡುವ ಮೂಲಕ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವ ಪ್ಲಾನ್ ಓವೈಸಿ ಮಾಡಿಕೊಂಡಿದ್ದಾರೆ. ಇದು ಎಎಪಿ ಮೇಲೆ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. 

ಎಐಎಂಐಎಂ ಪ್ರದರ್ಶನ
2020ರಲ್ಲಿ ಈಶಾನ್ಯ ದೆಹಲಿಯ ಪ್ರದೇಶದಲ್ಲಿ ದಂಗೆಯ ಪ್ರಮಾಣ ಅಧಿಕವಾಗಿತ್ತು. ದೆಹಲಿಯ ಈಶಾನ್ಯ ಭಾಗದಲ್ಲಿನ  10 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಸ್ಥಾನದಲ್ಲಿವೆ. ಈ ಹಿನ್ನೆಲೆ ಅಸಾದುದ್ದೀನ್ ಓವೈಸಿ ಈಶಾನ್ಯ ದೆಹಲಿ ಸೇರಿದಂತೆ ಸುಮಾರು 10 ರಿಂದ 12 ಕ್ಷೇತ್ರಗಳಿಗೆ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಫೆಬ್ರವರಿ 8ರಂದು ದಹೆಲಿಯ 70 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: 'ಅಜ್ಮೇರ್‌ ದರ್ಗಾ ಮೂಲತಃ ಶಿವ ದೇವಸ್ಥಾನ'ಕೋರ್ಟ್ ಅರ್ಜಿ ಪುರಸ್ಕರಿಸಿದ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಡ ಓವೈಸಿ ಕಿಡಿ!

click me!