ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದೆ.
ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬೀದಿ ಜಗಳ ಕಾಂಪ್ರಮೈಸ್ ಮಾಡೋಕೆ ಖರ್ಗೆ ದೆಹಲಿಗೆ ಕರೆದಿದ್ದಾರೆ
ಕಾಂಗ್ರೆಸ್‌ನಿಂದ 10 ಜನ ಶಾಸಕರು ಬಿಜೆಪಿಗೆ ಬರುತ್ತಾರೆ
ಬೆಂಗಳೂರು (ಡಿ.12): ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದೆ. ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬೀದಿ ಜಗಳ ಆಡುತ್ತಿದ್ದರು. ಈ ಇಬ್ಬರ ಜಗಳ ಕಾಂಪ್ರಮೈಸ್ ಮಾಡೋಕೆ ಖರ್ಗೆ ದೆಹಲಿಗೆ ಕರೆದಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಟೀಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ 10 ಜನ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಅವರು, ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯಕ್ಕೆ ಬರ್ತಾರೆ ಹುಷಾರಾಗಿರಿ ಎಂದು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಸಿಗರಿಗೆ ಭೀತಿ ಶುರುವಾಗಿದೆ. ಬಿಜೆಪಿ ಪ್ರಚಂಡ ಬಹುಮತದಿಂದ ಗೆಲ್ಲುತ್ತದೆ. ಇನ್ನು ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿರುವ ಪಕ್ಷವಾಗಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಒಮ್ಮಿಂದೊಮ್ಮಿಗೇ 77 ಸ್ಥಾನಕ್ಕೆ ಕುಸಿಯಿತು. ಕಾಂಗ್ರೆಸ್ಸಿನ 15 ಜನ ಪಕ್ಷವನ್ನೆ ಬಿಟ್ಟು ಹೋದರು. ಆಗ ಅವರ ಪಕ್ಷದಲ್ಲಿನ ಶಾಸಕರನ್ನೇ ಉಳಿಸಿಕೊಳ್ಳೋಕೆ ಯೋಗ್ಯತೆ ಇಲ್ಲದವರು. ಅಅಂಥವರು ಇನ್ನೂ ರಾಜ್ಯದಲ್ಲಿ ಅಧಿಕಾರಕ್ಕೆ ಬರ್ತಾರಾ? ಈಗ ಗೋವಾದ ರೀತಿಯಲ್ಲಿ ಇಲ್ಲೂ ಕೂಡ ಆಣೆ, ಪ್ರಮಾಣ ಮಾಡಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
undefined
ಪ್ರಧಾನಿ ಮೋದಿ ಇನ್ನು 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ: ಸಚಿವ ಅಶೋಕ್
10 ಜನ ಕಾಂಗ್ರೆಸ್ ಶಾಸಕರ ಪಟ್ಟಿ ಇದೆ: ಇನ್ನು ಬಿಜೆಪಿಗೆ ಬರುವವರ ಲಿಸ್ಟ್ ಯಾರ ಬಳಿಯಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್ ಅಶೋಕ್, ನಾನು ಯಾರ ಬಗ್ಗೆ ಮಾತನಾಡಿದ್ದೇನೋ ಅವರ ಬಳಿ ಲಿಸ್ಟ್ ಇದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ನಂತರ ಅವರ ಪಟ್ಟಿಯ ಲೆಕ್ಕಾಚಾರ ತಿಳಿಯುತ್ತದೆ. ಅವರೆಲ್ಲರೂ ಪಕ್ಷ ಸೇರ್ಪಡೆಯಾದಗ ಗೊತ್ತಾಗುತ್ತದೆ ಎಂದು ಉತ್ತರಿಸಿದರು.
ಡಿಕೆ ಶಿವಕುಮಾರ್ ತಿರುಗೇಟು: ಸಚಿವ ಆರ್. ಅಶೋಕ್ ಅವರು ಹೇಳಿರುವ ಕಾಂಗ್ರೆಸ್ ನವರು ಬಿಜೆಪಿಗೆ ಬರ್ತಾರೆ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಅಶೋಕ್ ಲೇಟ್ ಮಾಡಬರದು. ಇವತ್ತೋ ಅಥವಾ ನಾಳೆಯೋ ಯಾರ್ಯಾರು ಬರುತ್ತಾರೋ ಅವರನ್ನು ಕರೆದುಕೊಳ್ಳುವ ಕಾರ್ಯ ಮುಗಿಸಿಬಿಡಲಿ. ಅವನು ಖಾಲಿಯಾದರೆ, ಇವನು ಪಾರ್ಟಿಗೆ ಬರ್ತಾನೆ ಎಂದು ಅಶೋಕನ ತರ ನಾನು ಹೇಳುವುದಿಲ್ಲ. ಮುಂದೆ ಸರ್ಪ್ರೈಸ್ ಕೊಡ್ತೀವಿ ನೋಡ್ತಾ ಇರಿ ಎಂದು ತಿರುಗೇಟು ನೀಡಿದ್ದರು.
ಕಾಂಗ್ರೆಸ್ 10 ಶಾಸಕರು ಬಿಜೆಪಿ ಸೇರುತ್ತಾರೆ ಎಂದ ಆರ್. ಅಶೋಕ್‌ಗೆ ಡಿಕೆಶಿ ತಿರುಗೇಟು
ಲಾಠಿ ಜಾರ್ಜ್ ಮಾಡಬಾರದಿತ್ತು: ರಾಜ್ಯ ಸರ್ಕಾದರಿಂದ ಎಸ್‌ಸಿ ಪಂಗಡಗಳ ಒಳ ಮೀಸಲಾತಿ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಆದರೆ, ಹೋರಾಟಗಾರರ ಮೇಲೆ ಲಾಠಿ ಜಾರ್ಜ್ ಮಾಡಬಾರದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖಂಡರನ್ನು ಕರೆದು ಮಾತನಾಡಬೇಕಿತ್ತು. ಇಲ್ಲ ಅಲ್ಲಿಗೆ ತೆರಳಿ ಮನವಿ ಪಡೆಯಬೇಕಿತ್ತು. ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಹೋರಾಟ ತೀವ್ರಗೊಂಡಿದೆ. ಹೋರಾಟಗಾರರ ಮೇಲೆ ಹಲ್ಲೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ನಾವು ಅಧಿಕಾರಕ್ಕೆ ಬಂದ್ರೆ ಸದಾಶಿವ ಆಯೋಗ ಶಿಫಾರಸು ಮಾಡುವುದಾಗಿ ಬಿಜೆಪಿ ನಾಯಕರೇ ಭರವಸೆ ನೀಡಿದ್ದರು. ಈಗ ಆ ಮಾತನ್ನು ಈಡೇರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.