ಗುಜರಾತ್ ಮಾದರಿಯಲ್ಲೇ ಟಿಕೆಟ್ ಹಂಚಿಕೆ ಮಾಡಬೇಕು ಹೊಸ ಹೊಸ ಜನರಿಗೆ ಅವಕಾಶ ನೀಡಬೇಕು. ಈ ಸಾರಿ ಗುಜರಾತ್ ಮಾದರಿಯಲ್ಲೇ ಮಾಡ್ತಾರೆ. ಬಹಳಷ್ಟು ಬದಲಾವಣೆ ಮಾಡ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ(ಡಿ.12): ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್ ಹಂಚಿಕೆ ಮಾಡ್ತಾರೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದು, ಗುಜರಾತ್ ಮಾದರಿಯಲ್ಲೇ ಟಿಕೆಟ್ ಹಂಚಿಕೆ ಮಾಡಬೇಕು ಹೊಸ ಹೊಸ ಜನರಿಗೆ ಅವಕಾಶ ನೀಡಬೇಕು. ಈ ಸಾರಿ ಗುಜರಾತ್ ಮಾದರಿಯಲ್ಲೇ ಮಾಡ್ತಾರೆ. ಬಹಳಷ್ಟು ಬದಲಾವಣೆ ಮಾಡ್ತಾರೆ. ಯಾರ ಮೇಲೆ ಆರೋಪ ಇದೆ ಅಂತವರನ್ನ ತೆಗೆಯುವುದು. ಒಂದೇ ಕುಟುಂಬದಲ್ಲಿ ಎರಡು ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಸಿಕೊಂಡು ಕುಳಿತಿದ್ದಾರೆ. ಅಪ್ಪ, ಮಕ್ಕಳು, ಅಣ್ಣ ತಮ್ಮ ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸಿಗುತ್ತದೆ. ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳುತ್ತೆ. ಸಂಪುಟ ವಿಸ್ತರಣೆ ಯಾರಿಗೆ ಬೇಕು ಎಲ್ಲವನ್ನೂ ಬೊಮ್ಮಾಯಿ ಅವರೇ ಇಟ್ಟುಕೊಂಡು ಕೂಡಲಿ. ಹತ್ತು ಬೇಡಾ ಎಲ್ಲ ಅವರು ಇಟ್ಟುಕೊಂಡಿರಲಿ. ಮೂರ್ನಾಲ್ಕು ತಿಂಗಳು ಉಳಿದಿದೆ ಅಷ್ಟರಲ್ಲಿ ಎನೂ ಅಭಿವೃದ್ಧಿ ಮಾಡೋಕೆ ಆಗುತ್ತೆ?ಮುಂದಿನ ಚುನಾವಣೆಯಲ್ಲಿ ಎಲ್ಲರೂ ಮಂತ್ರಿ ಆಗಬೇಕು ಅಂತಾ ಸುಮ್ಮನಿದ್ದಾರೆ ಎಂದಿದ್ದಾರೆ.
ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗ್ತಿದೆಯಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ, ಗುಜರಾತ್ ನಲ್ಲಿ, ಉತ್ತರ ಪ್ರದೇಶದಲ್ಲಿ ಹಾಗೇ ಹೇಳಿಕೊಂಡಿದ್ರೂ ಕೂಡ ಬಿಜೆಪಿ ಅಧಿಕಾರಕ್ಕೆ ಬಂತು. ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ ಎಂದು ಯಡಿಯೂರಪ್ಪ ಅವರ ವಿಚಾರದಲ್ಲಿ ಯತ್ನಾಳ ಸಾಪ್ಟ್ ಕಾರ್ನರ್ ತೋರಿಸಿದ್ದಾರೆ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರು ಕ್ಷೇತ್ರ ಸಂಚಾರ ಮಾಡಬೇಕು. ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ನಾನು ಕ್ಷೇತ್ರದಲ್ಲಿ ಸಂಚಾರ ಮಾಡುವ ಅಗತ್ಯವಿಲ್ಲ ರಾಜ್ಯಾದ್ಯಂತ ಸಂಚಾರ ಮಾಡ್ತೇನಿ ಎಂದಿದ್ದಾರೆ.
Assembly election: ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ತಯಾರಾದ ವಿಶೇಷ ಬಸ್‌ಗಳು
ಮಹಾರಾಷ್ಟ್ರ ಡಿಸಿಎಂ ಭೇಟಿಯಾದ ಮನ್ನೋಳಕರ
ಬೆಳಗಾವಿ : ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿರುವ ನಾಗೇಶ ಮನ್ನೋಳಕರ ಅವರು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ನಾಗಪೂರಕ್ಕೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ತೆಗಿಯಲು ಯಾರಿಂದಲೂ ಆಗಲ್ಲ: ಡಿಕೆಶಿ
ಮರಾಠಾ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ ಮನ್ನೋಳಕರ ಅವರು ಬೆಂಗಳೂರು ಮತ್ತು ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಇದೀಗÜ ನಾಗಪೂರಕ್ಕೂ ಪ್ರಯಾಣ ಬೆಳೆಸಿ ಬಿಜೆಪಿ ಮುಖಂಡರನ್ನು ಭೇಟಿ ಆಗಿದ್ದಾರೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಪಾರ್ಲಿಮೇಂಟ್ರಿ ಬೋರ್ಡನ ಸದಸ್ಯ ದೇವೇಂದ್ರ ಫಡ್ನವೀಸ್ ಅವರನ್ನು ರಮೇಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಭೇಟಿ ಮಾಡಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ಹೆಚ್ಚಿದ್ದು ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯವೇ ನಿರ್ಣಾಯಕ. ಆದ್ದರಿಂದ ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಮರಾಠಾ ಸಮುದಾಯಕ್ಕೆ ಕೊಡಬೇಕೆಂದು ವಿನಂತಿಸಿದ್ದಾರೆ . ಬಿಜೆಪಿ ಮುಖಂಡ ಕಿರಣ ಜಾಧವ ಅವರು ಈ ಸಂಧರ್ಭದಲ್ಲಿಉಪಸ್ಥಿತರಿದ್ದರು. ಈ ಹಿಂದೆ ಬಿಜೆಪಿಯ ಹಿರಿಯ ನಾಯಕ ಸಂತೋಷ, ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಮಾಜಿ ಸಿಎಂ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.