ಬಿಜೆಪಿಯಲ್ಲಿ ಓಲೈಕೆ ರಾಜಕೀಯವಿಲ್ಲ, ಭಾರತೀಯರು ಅಂದ್ರೆ ಎಲ್ಲರೂ ಒಂದೇ: ಅಶ್ವತ್ಥ್‌ ನಾರಾಯಣ್‌!

By Santosh NaikFirst Published Jan 19, 2023, 3:41 PM IST
Highlights

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ನಾಯಕರಿಗೆ ನೀಡಿರುವ ಸೂಚನೆಗಳ ಬಗ್ಗೆ ಸಚಿವ ಸಿಎನ್‌ ಅಶ್ವಥ್‌ ನಾರಾಯಣ್‌ ಮಾತನಾಡಿದ್ದಾರೆ. ಓಲೈಕೆ ರಾಜಕಾರಣ ಮಾಡೋ ಬಗ್ಗೆ ಮೋದಿ ಹೇಳಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದಿದ್ದಾಗಿ ತಿಳಿಸಿದ್ದಾರೆ.
 

ಬೆಂಗಳೂರು (ಜ.19): ಮುಸ್ಲಿಂ ಓಲೈಕೆ ಹಾಗೂ ಮುಸ್ಲಿಂರನ್ನು ಗಣನೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಸಿಎನ್‌ ಅಶ್ವಥ್‌ ನಾರಾಯಣ್‌ ಮಾತನಾಡಿದ್ದಾರೆ. ದೆಹಲಿಯ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವರಿಷ್ಠರು ಕೊಟ್ಟ ಸೂಚನೆಗಳು, ಚರ್ಚೆಯಾದ ವಿಷಯಗಳ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲಿ ಓಲೈಕೆ ಅಂತ ಯಾವುದೇ ವಿಚಾರವಿಲ್ಲ. ಭಾರತೀಯರು ನಮಗೆ ಎಲ್ಲರೂ ಒಂದೇ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಮತಕ್ಕಾಗಿ ಕಾರ್ಯ ಅಲ್ಲ,ಸಮಾಜದ ದೃಷ್ಟಿಯಿಂದ ಒಂದಾಗಿ ಹೋಗಬೇಕು ತಿಳಿಸಿದ್ದಾರೆ. ತುಷ್ಟೀಕರಣದ ರಾಜಕೀಯ ಬಿಜೆಪಿಯಲ್ಲಿಲ್ಲ. ಮತಕ್ಕಾಗಿ ಯಾವುದೇ ಸಮುದಾಯದ ಓಲೈಕೆ ಮಾಡೋದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿ.ಟಿ ರವಿ ನಡುವಿನ ಹೇಳಿಕೆ ಗೊಂದಲ ವಿಚಾರದಲ್ಲಿ ಮಾತನಾಡಿದ ಅವರು, ಟಿಪ್ಪು ಮೊದಲೇ ನರಹಂತಕ ಆಗಿದ್ದ. ಮತಾಂತರ ಮಾಡಿ, ಬಲಾತ್ಕಾರ ಮಾಡುತ್ತಿದ್ದ. ಅವನನ್ನ ವಿರೋಧಿಸ್ತೀವಿ, ಹಾಗಂತ ಎಲ್ಲಾ ಮುಸ್ಲಿಮರನ್ನ ವಿರೋಧ ಮಾಡಲ್ಲ. ಟಿಪ್ಪು ತಂದೆ ಹೈದರಾಲಿಯನ್ನೂ ನಾವು ವಿರೋಧ ಮಾಡ್ತಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕಾರಿ ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.  ಪ್ರಧಾನಿಗಳ ನಾಯಕತ್ವಕ್ಕೆ ಮನ್ನಣೆ ಸಿಕ್ಕಿದೆ. ದೇಶದ ಜನ ಬಿಜೆಪಿಯನ್ನು ಹಲವು ರಾಜ್ಯಗಳಲ್ಲಿ ಗೆಲ್ಲಿಸಿದ್ದಾರೆ. ನಮ್ಮದು ಸ್ಥಿರವಾದ ಸರ್ಕಾರ, ನಮ್ಮ ಸರ್ಕಾರದಿಂದ ದೇಶದಲ್ಲಿ ಸ್ಥಿರತೆ ಬಂದಿದೆ ನಮ್ಮ ಸರ್ಕಾರ ತುಷ್ಟೀಕರಣದ ಭಾವನೆ ದೂರ ಮಾಡಿದೆ ಎಂದರು.

ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ

ಜನರ ಆಶೋತ್ತರಗಳಿಗೆ ತಕ್ಕ ಹಾಗೆ ಆಡಳಿತ ಮಾಡುತ್ತಿದ್ದೇವೆ. ಎರಡೂ ಸರ್ಕಾರಗಳೂ ಸಮಾನತೆಯ, ಸರ್ವರಿಗೂ ಸಲ್ಲುವ ಕಾರ್ಯಕ್ರಮಗಳನ್ನು ಕೊಟ್ಟಿವೆ. ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲೂ ಬಿಜೆಪಿ ಮಹತ್ಸಾಧನೆ ಮಾಡಿದೆ. ಪ್ರತಿ ದಿನ ದೇಶದಲ್ಲಿ 30 km ಹೆದ್ದಾರಿ ನಿರ್ಮಾಣ ಆಗುತ್ತಿದೆ.

ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಪ್ರಾಮಾಣಿಕ ಮಾತುಕತೆ ನಡೆಸಬೇಕು ಎಂದ ಪಾಕ್‌ ಪಿಎಂ ಶೆಹಬಾಜ್‌..!

ರೈಲ್ವೆ ತನ್ನ ಮೂಲಭೂತ ಸೇವೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ ರೈಲ್ವೆಯಲ್ಲಿ ಸಂಪೂರ್ಣ ಸುರಕ್ಷತೆಗೆ ಆಧ್ಯತೆ ಕೊಡಲಾಗುತ್ತಿದೆ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯ ಸರ್ಕಾರಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಿದೆ. ರಾಜ್ಯವಾರು ಪಕ್ಷದ ಸಂಘಟನೆ ಬಗ್ಗೆ ವರಿಷ್ಠರು ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
 

click me!