ಹೋರಿ ಜೊತೆ ಎಚ್ಚರ, ಏನಾದರೂ ಅಪಾಯವಾದರೆ ಏನು ಕತೆ? ರೇಣುಗೆ ಸಿಎಂ ಸೂಚನೆ!| ಆನೆ ನಡೆದದ್ದೇ ದಾರಿ ಎಂಬಂತೆ ನನಗೆ ನನ್ನ ಕ್ಷೇತ್ರದ ಮತದಾರರೇ ಮುಖ್ಯ: ರೇಣುಕಾಚಾರ್ಯ
ಬೆಂಗಳೂರು[ನ.20]: ನನ್ನ ಮತ ಕ್ಷೇತ್ರದ ಮತದಾರರ ಪ್ರೀತಿ ಎಲ್ಲಿವರೆಗೆ ಇರುತ್ತದೆಯೊ ಯಾವ ದೋಷ, ಕಂಟಕ ನನಗೆ ತಾಗುವುದಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ರೇಣುಕಾಗೆ ಮತ್ತೆ ಗುಮ್ಮಿದ ಹೋರಿ...ಈ ಬಾರಿಯೂ ಜಸ್ಟ್ ಮಿಸ್- ವಿಡಿಯೋ
ಮಂಗಳವಾರ ನಗರದಲ್ಲಿ ಮುಖ್ಯಮಂತ್ರಿಗಳ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಮುಖ್ಯಮಂತ್ರಿಗಳು ಅದರ ಬಗ್ಗೆ ಪ್ರಸ್ತಾಪಿಸಿ ಹುಷಾರಾಗಿರುವಂತೆ ಹೇಳಿದರು. ಏನಾದರೂ ಅಪಾಯವಾದರೆ ಏನು ಕತೆ ಎಂದು ಪ್ರಶ್ನಿಸಿದರು. ಹೋರಿ ಇರಿಯಲು ಬಂದಿದ್ದ ಘಟನೆ ಹಿನ್ನೆಲೆಯಲ್ಲಿ ಕೆಲವರು ನನಗೆ ದೋಷವಿದೆ, ಕಂಟಕವಿದೆ ಎನ್ನುತ್ತಾರೆ. ನನಗೆ ಅದ್ಯಾವುದೂ ಇಲ್ಲ. ಆನೆ ನಡೆದದ್ದೇ ದಾರಿ ಎಂಬಂತೆ ನನಗೆ ನನ್ನ ಕ್ಷೇತ್ರದ ಮತದಾರರೇ ಮುಖ್ಯ. ಅವರ ಪ್ರೀತಿ ಇರುವವರೆಗೆ ಯಾವ ದೋಷ, ಕಂಟಕವೂ ತಟ್ಟುವುದಿಲ್ಲ ಎಂದರು.
ಹೋರಿಯಿಂದ ಗುದ್ದಿಸ್ಕೊಂಡ ರೇಣುಕಾಚಾರ್ಯಗೆ ತಿವಿದ ಬಿಎಸ್‌ವೈ!
‘ಹೊನ್ನಾಳಿ ಹುಲಿ’ಗೆ ತಿವಿದ ಹೋರಿ; ಶಾಸಕ ರೇಣುಕಾಚಾರ್ಯ ಗಲಿಬಿಲಿ!
ಕೆಲವರು ಮಣ್ಣಿನ ಮಕ್ಕಳು ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಾರೆ. ಆದರೆ, ನಾನು ಹಾಗೆ ಹೇಳುವುದಿಲ್ಲ. ನಮ್ಮದು ಕೃಷಿ ಕುಟುಂಬ. ನಾನು ಚಿಕ್ಕ ವಯಸ್ಸಿನಿಂದಲೂ ಕೃಷಿ ಕಾರ್ಮಿಕ. ಸಲಕೆ, ರಂಟೆ ಹಿಡಿದು ಕೆಲಸ ಮಾಡಿದ್ದೇನೆ. ನೇಗಿಲು ಹೊಡೆದಿದ್ದೇನೆ. ಮನೆಯಲ್ಲಿ ಎತ್ತು ಎಮ್ಮೆ ಸಾಕಿದ ಅನುಭವವಿದೆ. ಹಾಲು ಕರೆದಿದ್ದೇನೆ. ಹೊನ್ನಾಳಿ ತಾಲೂಕಿನ ಸುಮಾರು 15-20 ಹಳ್ಳಿಗಳಲ್ಲಿ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯುತ್ತದೆ. ನಾನು ರಾಜಕಾರಣಕ್ಕೆ ಬಂದಾಗಿನಿಂದಲೂ ನನ್ನನ್ನು ಆಹ್ವಾನ ಮಾಡುತ್ತಾರೆ. ಸೋತಾಗಲೂ ನನ್ನನ್ನು ಕರೆದಿದ್ದಾರೆ. ಬಹುಮಾನ ವಿತರಿಸಲು ಕರೆಯುತ್ತಾರೆ. ಒಬ್ಬ ಕಾರ್ಯಕರ್ತ ಬಂದು ತನ್ನ ಹೋರಿಯನ್ನು ಮುಟ್ಟಿಹೋಗುವಂತೆ ಕೋರಿದ. ಅದಕ್ಕೆ ಹೋಗಿದ್ದೆ. ಆ ವೇಳೆ ಒಬ್ಬ ಸಮೀಪ ಬಂದಿದ್ದ ರೈತನ ಕೈ ಹೋರಿಯ ಕಣ್ಣಿಗೆ ಬಡಿದಿದೆ. ಇದರಿಂದ ಆ ಹೋರಿ ಬೆದರಿತು ಎಂದರು.