ಶಾಸಕರ ಬೇಟೆಯಲ್ಲಿ ಪರಿಣಿತ ಬಿ.ಎಲ್‌. ಸಂತೋಷ್‌ ಬೇಕಾಗಿದ್ದಾರೆ: ಪೋಸ್ಟರ್‌ಗೆ ಬಿಜೆಪಿ ಕಿಡಿಕಿಡಿ

Published : Mar 17, 2023, 12:28 PM ISTUpdated : Mar 17, 2023, 12:42 PM IST
ಶಾಸಕರ ಬೇಟೆಯಲ್ಲಿ ಪರಿಣಿತ ಬಿ.ಎಲ್‌. ಸಂತೋಷ್‌ ಬೇಕಾಗಿದ್ದಾರೆ: ಪೋಸ್ಟರ್‌ಗೆ ಬಿಜೆಪಿ ಕಿಡಿಕಿಡಿ

ಸಾರಾಂಶ

ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರ ಭಾವಚಿತ್ರವನ್ನು ಅಂಟಿಸಿ ಕಾಣೆಯಾಗಿದ್ದಾರೆ, ಬೇಕಾಗಿದ್ದಾರೆ ಎಂಎಲ್‌ಎ ಬೇಟೆಗಾರ ಎಂಬ ಪೋಸ್ಟರ್‌ನ್ನು ಹೈದರಾಬಾದ್ ನಗರದಲ್ಲಿ ಅಂಟಿಸಲಾಗಿದ್ದು, ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

ಹೈದರಾಬಾದ್‌: ದೆಹಲಿಯ ಅಬಕಾರಿ ಹಗರಣದಲ್ಲಿ ಇ.ಡಿ. (ಜಾರಿ ನಿರ್ದೇಶನಾಲಯ) ನಿಗದಿಪಡಿಸಿದ ವಿಚಾರಣೆಗೆ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಗೈರು ಹಾಜರಾಗಿದ್ದ ದಿನದಂದೇ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರ ಭಾವಚಿತ್ರವನ್ನು ‘ಬೇಕಾಗಿದ್ದಾರೆ’, ‘ಕಾಣೆಯಾಗಿದ್ದಾರೆ’ ಹಾಗೂ ‘ಪ್ರತಿಭಾವಂತ ಎಂಎಲ್‌ಎ ಬೇಟೆಗಾರ’ ಎಂಬ ಬರಹಗಳಿರುವ ಪೋಸ್ಟರ್‌ನೊಂದಿಗೆ ಗುರುವಾರ ಹೈದರಾಬಾದ್‌ ನಗರದಲ್ಲಿ ಅಂಟಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ತೆಲಂಗಾಣದ (Telangana) ಆಡಳಿತಾರೂಢ ಬಿಆರ್‌ಎಸ್‌ (BRS) ಪಕ್ಷದ ಕೈವಾಡ ಎಂದು ಆರೋಪಿಸಿದೆ. ಕಳೆದ ವರ್ಷ ಬಿಆರ್‌ಎಸ್‌ ಪಕ್ಷದ ಶಾಸಕರನ್ನು ಬಿಜೆಪಿಯೆಡೆಗೆ ಸೆಳೆಯಲು ಯತ್ನಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಸಂತೋಷ್‌ರನ್ನು ಟೀಕಿಸಿ ಮೋದಿ ಭರವಸೆಯ 15,00,000 ರು. ಬಿಡುಗಡೆ ಎಂದೆಲ್ಲ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಪ್ರಕರಣದಲ್ಲಿ ಸಂತೋಷ್‌ರನ್ನು ಆರೋಪಿ ಎಂದು ಹೆಸರಿಸಲು ಪೊಲೀಸ್‌ ಕೋರಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಪ್ರಕರಣವನ್ನು ನ್ಯಾಯಾಲಯ ಸಿಬಿಐಗೆ ವರ್ಗಾವಣೆ ಮಾಡಿತ್ತು. ಪ್ರಸ್ತುತ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ.

ವಿರೋಧಿಗಳ ಟೀಕೆಗೆ ಕೆಲಸದ ಮೂಲಕ ಉತ್ತರ ಕೊಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ: ಬಿಎಲ್ ಸಂತೋಷ್

 ಅಬಕಾರಿ ಹಗರಣ ವಿಚಾರಣೆಗೆ ಕವಿತಾ ಗೈರು: ಮಾ.20ಕ್ಕೆ ಇ.ಡಿ. ಹೊಸ ಸಮನ್ಸ್‌

ದೆಹಲಿಯ ಅಬಕಾರಿ ಹಗರಣದಲ್ಲಿ ಇ.ಡಿ. (ಜಾರಿ ನಿರ್ದೇಶನಾಲಯ) ನಿಗದಿಪಡಿಸಿದ ವಿಚಾರಣೆಗೆ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಗೈರು ಹಾಜರಾಗಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಯನ್ನು ಮಾ.20ಕ್ಕೆ ನಿಗದಿಪಡಿಸಿ ಇ.ಡಿ. ಹೊಸ ಸಮನ್ಸ್‌ ಜಾರಿ ಮಾಡಿದೆ. ಗುರುವಾರ ಇ.ಡಿ. ಎದುರು ಕವಿತಾ ವೈಯಕ್ತಿಕವಾಗಿ ಹಾಜರಾಗದೆ, ತಮ್ಮ ಪಕ್ಷದ ಓರ್ವ ವ್ಯಕ್ತಿಯನ್ನು ತಮ್ಮ ಪ್ರತಿನಿಧಿಯಾಗಿ ಕಳಿಸಿದ್ದರು. ಅವರ ಜೊತೆ ತಮ್ಮ ಬ್ಯಾಂಕ್‌ ಮಾಹಿತಿ, ವೈಯಕ್ತಿಕ ಹಾಗೂ ವ್ಯವಹಾರದ ಮಾಹಿತಿಯನ್ನು ಕಳಿಸಿದ್ದರು.

ಕಳೆದ ಬಾರಿ ಇ.ಡಿ. ಮಾ.11 ಹಾಗೂ ಮಾ.16ರಂದು ವಿಚಾರಣೆಗೆ ನಿಗದಿಪಡಿಸಿತ್ತು. ಆದರೆ ಕವಿತಾ ಅವರು ಮಾ.11ರಂದು ವಿಚಾರಣೆಗೆ ಹಾಜರಾಗಲಿಲ್ಲ. ಈ ನಡುವೆ, ಸುಪ್ರೀಂ ಕೋರ್ಚ್‌ನಲ್ಲಿ ಕವಿತಾ ಅವರು ಇ.ಡಿ.ಯಿಂದ ಬಂಧನ ಹಾಗೂ ಸಮನ್ಸ್‌ ರದ್ದು ಮಾಡುವಂತೆ ಮನವಿ ಮಾಡಿದ್ದರು. ಅದರ ವಿಚಾರಣೆ ಮಾ.24ಕ್ಕೆ ನಿಗದಿಯಾಗಿದೆ.

Karnataka Assembly Election 2023: ಟಿಕೆಟ್ ಹಂಚಿಕೆಯಲ್ಲಿ ಬಿಎಲ್ ಸಂತೋಷ್ ಪಾತ್ರ ಎಷ್ಟಿರಲಿದೆ?!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌