ಕೆಂಪಣ್ಣನ ಆರೋಪದ ಹಿಂದೆ ‘ಕೈ’ ವಾಡ ಇದೆ: ಸಚಿವ ಸಿ.ಸಿ. ಪಾಟೀಲ

By Kannadaprabha News  |  First Published Mar 17, 2023, 12:27 PM IST

ಶೇ.40ರಷ್ಟುಕಮಿಷನ್‌ನ ಆರೋಪ ಮಾಡುವ ಕಾಂಗ್ರೆಸ್ಸಿಗರು, ಸದನದಲ್ಲೇಕೆ ಈ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೂ ಮೊದಲೇ ನಾವು ಶೇ.80ರಷ್ಟುಕೆಲಸವನ್ನು ಗುತ್ತಿಗೆ ನೀಡಿ ಆಗಿತ್ತು. ಕೆಂಪಣ್ಣ ಆರೋಪದ ಹಿಂದೆ ಕಾಂಗ್ರೆಸ್‌ನವರಿದ್ದಾರೆ ಎಂದು ಆರೋಪಿಸಿದರು.


ನವಲಗುಂದ (ಮಾ.17) : ಶೇ.40ರಷ್ಟುಕಮಿಷನ್‌ನ ಆರೋಪ ಮಾಡುವ ಕಾಂಗ್ರೆಸ್ಸಿಗರು, ಸದನದಲ್ಲೇಕೆ ಈ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿರುವ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಕ್ಕೂ ಮೊದಲೇ ನಾವು ಶೇ.80ರಷ್ಟುಕೆಲಸವನ್ನು ಗುತ್ತಿಗೆ ನೀಡಿ ಆಗಿತ್ತು. ಕೆಂಪಣ್ಣ(Kempanna) ಆರೋಪದ ಹಿಂದೆ ಕಾಂಗ್ರೆಸ್‌ನವರಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪಣ್ಣ ನನ್ನ ಕಚೇರಿಗೆ ಬಿಳಿ ಹಾಳೆಯ ಮೇಲೆ ದೂರು ಬರೆದುಕೊಂಡು ಬಂದಿದ್ದರು. ಯಾಕೆ ಕೆಟ್ಟಭಾಷೆ ಬಳಸಿದ್ದೀರಿ ಎಂದು ಕೇಳಿದ್ದೆ. ಅದಕ್ಕೆ ಅವರು ಯಾರೋ ಬರೆದಿದ್ದನ್ನು ನಾನು ತಂದಿದ್ದೀನಿ ಅಂತ ಹೇಳಿದ್ದರು. ಇದು ಸತ್ಯ ಎಂದು ಹೇಳಿದರು.

Tap to resize

Latest Videos

BJP Rathayatre: ಮಾ.1ರಿಂದ ಬಿಜೆಪಿ ರಥಯಾತ್ರೆ ಆರಂಭ: ಯಾರ ನೇತೃತ್ವ- ಎಲ್ಲೆಲ್ಲಿ ರಥಯಾತ್ರೆ.?

ಕಾಂಗ್ರೆಸ್‌ನವರು ಸುಳ್ಳು ಹೇಳಿ ಈ ರೀತಿ ಜನರಿಗೆ ಮೋಸ ಮಾಡಿದ್ದಾರೆ. ಈಗ ದೊಂಬರಾಟ ಮಾಡಿ ಅಧಿಕಾರದ ಕನಸು ಕಾಣುತ್ತಿದ್ದಾರೆ. ಇದಕ್ಕೆ ಫಲ ಸಿಗಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ನಾವು ಹೆಚ್ಚು ಹಾಗೂ ಅದ್ಭುತ ಕೆಲಸ ಮಾಡಿದ್ದೇವೆ ಎಂದು ನುಡಿದರು.

25ಕ್ಕೆ ಮೋದಿ ರಣಕಹಳೆ:

ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯಿಂದ ಕಾರ್ಯಕರ್ತರಲ್ಲಿ ವಿಶ್ವಾಸ ಹಾಗೂ ಹುಮ್ಮಸ್ಸು ಹೆಚ್ಚಾಗಿದೆ. 224 ಕ್ಷೇತ್ರಗಳಲ್ಲೂ ಯಾತ್ರೆ ಮುಗಿಸುತ್ತೇವೆ. ಬಳಿಕ ಮಾ.25ರಂದು 15 ಲಕ್ಷ ಜನರನ್ನು ಸೇರಿಸಿ ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ ನಡೆಸುತ್ತೇವೆ ಎಂದರು. ಅಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಭಾಗವಹಿಸಿ ಚುನಾವಣೆ ರಣಕಹಳೆ ಮೊಳಗಿಸುವರು ಎಂದರು.

ಮೈಸೂರು-ಬೆಂಗಳೂರು(Mysuru-bengaluru expressway) ಟೋಲ್‌ ಸಂಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯ. ರಾಜ್ಯ ಸರ್ಕಾರದ ಕೈಯಲ್ಲಿ ಇಲ್ಲ. ಟೋಲ್‌ ಸಂಗ್ರಹದ ಕುರಿತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಚರ್ಚಿಸುತ್ತೇನೆ ಎಂದರು. ಉದ್ಘಾಟನೆಯಾದ ಮರುದಿನವೇ ರಸ್ತೆ ಕಿತ್ತಿದೆ ಅಂತ ಮಾಧ್ಯಮಗಳಲ್ಲಿ ಬಂದಿದೆ. ಆ ರೀತಿ ಆಗಿಲ್ಲ ಎಂದರು.

IAS vs IPS: ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ: ಫೋಟೋ ಯಾರಿಗೆ ಕಳಿಸಿದ್ದೇನೆ ಬಹಿರಂಗಪಡಿಸಲಿ

ಪಂಚಮಸಾಲಿ 2ಎ ಮೀಸಲಾತಿ(Panchamasali reservation) ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಕಾನೂನಾತ್ಮಕವಾಗಿ ಸಿಗುವ ಸೌಲಭ್ಯ ಕೇಳುತ್ತೇವೆ. ನಾನು ಆ ಸಮಾಜದವನೇ ಆಗಿರುವುದರಿಂದ ಒತ್ತಾಯ ಮಾಡಲು ಬರಲ್ಲ. ಮುಖ್ಯಮಂತ್ರಿ ಸಮಾಜವನ್ನು ಕೈಬಿಡಲ್ಲ. ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು. ಸಚಿವ ವಿ.ಸೋಮ್ಮಣ್ಣ ಆತ್ಮೀಯ ಸ್ನೇಹಿತ. ಭಿನ್ನಾಭಿಪ್ರಾಯ ಇರುವುದು ಸಹಜ. ಆದರೆ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದರು.

click me!