ಬಿ.ಕೆ.ಹರಿಪ್ರಸಾದ್ ಅವರು ಮತ್ತೆ ಗೋದ್ರಾ ತರಹದ ಗಲಭೆ ಮರುಕಳಿಸುತ್ತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲುಯತ್ನಿಸುತ್ತಿದ್ದಾರೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ(ಜ.09): ವೀರೇಂದ್ರ ಪಾಟೀಲ್ ಮಾದರಿಯಲ್ಲಿ ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹರಿಪ್ರಸಾದ್ ಸಂಚು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದು, ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಅವರು ಮತ್ತೆ ಗೋದ್ರಾ ತರಹದ ಗಲಭೆ ಮರುಕಳಿಸುತ್ತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಲುಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ
ಹಿಂದೆ ಪಾಟೀಲ್‌ರನ್ನು ಕೆಳಗಿಳಿಸಲು ಕಾಂಗ್ರೆಸ್ ನಾಯ ಕರು ರಾಮನಗರದಲ್ಲಿ ಹಿಂದೂ-ಮುಸ್ಲಿಂ ಗಲಾಟೆ ಮಾಡಿಸಿದ್ದರು. ಇದೇ ಮಾದರಿ ಯಲ್ಲಿ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಈಗ ಸಂಚು ರೂಪಿಸಿದ್ದಾರೆ. ಹರಿಪ್ರಸಾದ್‌ರನ್ನು ಬಂಧಿಸಿ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.