ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಉತ್ತರ ಕನ್ನಡ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ
ಬಳ್ಳಾರಿ(ಜ.09): 2024 ರ ಲೋಕಸಭೆ ಚುನಾವಣೆಯ ಟಿಕೆಟ್ ಕೈತಪ್ಪುವ ಭೀತಿ ಹಿನ್ನಲೆಯಲ್ಲಿ ಉತ್ತರ ಕನ್ನಡ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನ ಭೇಟಿ ಮಾಡಿದ್ದಾರೆ. ಹೌದು, ಅನಂತ್ ಕುಮಾರ್ ಹೆಗಡೆ ಅವರು ದೇವರಕೊಳ್ಳದ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರ ಜತೆ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಸಂಡೂರು ತಾಲೂಕಿನ ದೇವರ ಕೊಳ್ಳದ ನಾಗಸಾಧು ಭಾರೀ ಪ್ರಭಾವಿಯಾಗಿದ್ದಾರೆ. ಗುಡ್ಡದ ಮೇಲಿರೋ ಮರವೊಂದರ ಮೇಲೆ ನಾಗಸಾಧು ಶ್ರೀ ದಿಗಂಬರ ರಾಜ ಭಾರತಿ ಅವರು ವಾಸ ಮಾಡುತ್ತಾರೆ.
undefined
ಪ್ರಲ್ಹಾದ್ ಜೋಶಿಗೆ ಸರಿಸಾಟಿ ‘ಕೈ’ ಅಭ್ಯರ್ಥಿ ಯಾರು?: ಲಾಡ್, ಶೆಟ್ಟರ್ ಹೆಸರು ಮುಂಚೂಣಿಗೆ
ನಾಗಸಾಧು ಅವರು ಆರು ತಿಂಗಳು ಮಾತನಾಡ್ತಾರೆ ಇನ್ನಾರು ತಿಂಗಳು ಮೌನವೃತದಲ್ಲಿರುತ್ತಾರೆ. ಇಲ್ಲಿಗೆ ಬಂದು ಆಶೀರ್ವಾದ ಪಡೆದ್ರೇ ಗೆಲ್ತಾರೆ ಅನ್ನೋ ನಂಬಿಕೆ ಇದೆ. ಈ ಹಿನ್ನಲೆಯಲ್ಲಿ ಚುನಾವಣೆಗೆ ಮುನ್ನ ಹಲವು ನಾಯಕರು ಬರುತ್ತಾರೆ.
ಬಳ್ಳಾರಿ ಲೋಕಸಭೆಗೆ ಸ್ಪರ್ಧೆ ಮಾಡಲು ಯತ್ನಿಸುತ್ತಿರೋ ಬಿಜೆಪಿ ನಾಯಕ ಶ್ರೀರಾಮುಲು ಹಾಗೂ ಕಾಂಗ್ರೆಸ್ ನಾಯಕ ಉಗ್ರಪ್ಪ ಅವರೂ ಕೂಡ ಭೇಟಿ ನೀಡಿದ್ದರು.ಇದೀಗ ಅನಂತ್ ಕುಮಾರ್ ಹೆಗಡೆ ಭೇಟಿ ನೀಡಿದ್ದರಿಂದ, ನಾಗಸಾಧು ಆಶ್ರಮ ಕೇಂದ್ರ ಬಿಂದುವಾಗ್ತಿದೆ.
ಈ ಹಿಂದೆ ಡಿಕೆಶಿ, ಸಂತೋಷ ಲಾಡ್, ಅನಿಲ್ ಲಾಡ್, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ತುಕಾರಾಂ ಸೇರಿದಂತೆ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ನಾಯಕರು ಈ ಆಶ್ರಮಕ್ಕೆ ಭೇಟಿ ನೀಡಿದ್ದರು.