ಕಲಬುರಗಿ: ಇಂದು ಬಿಜೆಪಿ ವಿರಾಟ್‌ ಒಬಿಸಿ ಸಮಾವೇಶ

Published : Oct 30, 2022, 12:40 AM IST
ಕಲಬುರಗಿ: ಇಂದು ಬಿಜೆಪಿ ವಿರಾಟ್‌ ಒಬಿಸಿ ಸಮಾವೇಶ

ಸಾರಾಂಶ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಸಮಾಜದಲ್ಲಿರುವ ಇತರ ಹಿಂದುಳಿದ ವರ್ಗ (ಒಬಿಸಿ) ದವರನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಬಿಜೆಪಿ, ಕಲಬುರಗಿಯಲ್ಲಿ ಭಾನುವಾರ ಹಿಂದುಳಿದ ವರ್ಗಗಳ ವಿರಾಟ್‌ ಸಮಾವೇಶ ಆಯೋಜಿಸಿದೆ. 

ಕಲಬುರಗಿ (ಅ.30): ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಸಮಾಜದಲ್ಲಿರುವ ಇತರ ಹಿಂದುಳಿದ ವರ್ಗ (ಒಬಿಸಿ) ದವರನ್ನು ತನ್ನತ್ತ ಸೆಳೆಯಲು ಮುಂದಾಗಿರುವ ಬಿಜೆಪಿ, ಕಲಬುರಗಿಯಲ್ಲಿ ಭಾನುವಾರ ಹಿಂದುಳಿದ ವರ್ಗಗಳ ವಿರಾಟ್‌ ಸಮಾವೇಶ ಆಯೋಜಿಸಿದೆ. ಸಮಾವೇಶದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದು, ನಗರ ಕೇಸರಿಮಯವಾಗಿದೆ. ಸಮಾವೇಶಕ್ಕೆ 5 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಕಲಬುರಗಿ ಜಿಲ್ಲೆಯೊಂದರಿಂದಲೇ ಸುಮಾರು ಎರಡೂವರೆ ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. 

ನಗರದ ಹೊರವಲಯದ ನಾಗನಹಳ್ಳಿ ಸಮೀಪದ ರದ್ದೇವಾಡಗಿ ಲೇಔಟ್‌ನಲ್ಲಿ 100 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದ್ದು, ಈ ಸ್ಥಳಕ್ಕೆ ಹೋಗುವ ದಾರಿಯ ಇಕ್ಕೆಲಗಳನ್ನು ಶೃಂಗರಿಸಲಾಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಭಾಗದಲ್ಲಿ ನಡೆಸುತ್ತಿರುವ ಮೊದಲ ಬೃಹತ್‌ ಸಮಾವೇಶ ಇದಾಗಿದೆ. 

ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲ್ಲುವ ಅವಕಾಶ: ನಳಿನ್‌ ಕುಮಾರ್‌ ಕಟೀಲ್‌

ಓಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್‌, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಗೋವಿಂದ ಕಾರಜೋಳ, ಆರ್‌.ಅಶೋಕ್‌, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಭಗವಂತ ಖೂಬಾ ಹಾಗೂ ಇತರ ಮುಖಂಡರು ಭಾಗವಹಿಸಲಿದ್ದಾರೆ.

ಎರಡೂವರೆ ಲಕ್ಷ ಆಸನಗಳ ವ್ಯವಸ್ಥೆ: 200 ಹಿಂದುಳಿದ ಜಾತಿಗಳಿಗೆ ಸೇರಿದ ಜನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಬೃಹತ್‌ ಪೆಂಡಾಲ್‌ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆಯ ಮುಂಭಾಗದಲ್ಲಿ ಎರಡೂವರೆ ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಬರಲು ರಾಜ್ಯಾದ್ಯಂತ 4 ಸಾವಿರ ಬಸ್ಸುಗಳು, 20 ಸಾವಿರ ನಾಲ್ಕುಚಕ್ರದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ ನಗರದ 50 ಕಲ್ಯಾಣ ಮಂಟಪಗಳಲ್ಲಿ ಜನರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ, ನಗರದ ಬಹುತೇಕ ಎಲ್ಲಾ ವಸತಿಗೃಹಗಳಲ್ಲಿ 1,000 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಹಿಂಬಾಗಿಲಿನಿಂದ ಬಂದವರನ್ನು ಮುಂಬಾಗಿಲಿನಿಂದ ಓಡಿಸಿ: ಸಿ​ದ್ದ​ರಾ​ಮಯ್ಯ

ಮುಂದಿನ ಎಲ್ಲಾ ಸಮಾವೇಶಗಳಿಗೆ ಚೈತನ್ಯ ಮತ್ತು ದಾರಿಯನ್ನು ಈ ಓಬಿಸಿ ಸಮಾವೇಶ ತೋರಿಸಲಿದೆ. ಹಿಂದುಳಿದ ವರ್ಗಕ್ಕೆ ಬಿಜೆಪಿಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ. ಕೇಂದ್ರದಲ್ಲಿ ಓಬಿಸಿಯ 27 ಸಚಿವರಿದ್ದಾರೆ. 12 ಮಂದಿ ಎಸ್ಸಿ, ಎಸ್ಟಿಸಚಿವರಿದ್ದಾರೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಲಾಗಿದೆ. ಇನ್ನು, ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕದ ವೇಳೆಯೂ ಎಸ್ಸಿ, ಎಸ್ಟಿ, ಹಿಂದುಳಿದವರಿಗೆ ಆದ್ಯತೆ ನೀಡಲಾಗಿದೆ.
- ಎನ್‌.ರವಿಕುಮಾರ್‌, ಎಂಎಲ್‌ಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
ಮೂರುವರೆ ದಶಕಗಳಿಂದ ಇದ್ದ ಒಳ ಮೀಸಲಾತಿಗಾಗಿ ಹೋರಾಟಕ್ಕೆ ಜಯ ಸಿಕ್ಕಿದೆ: ಸಚಿವ ಮುನಿಯಪ್ಪ