ಅಯೋಧ್ಯೆಯ ರಾಮನಿಗೆ ನ್ಯಾಯ ಕೊಡಿಸಿದ್ದೇವೆ. ಇದೀಗ ಶ್ರೀರಂಗಪಟ್ಟಣದ ಆಂಜನೇಯನಿಗೆ ನ್ಯಾಯ ಕೊಡಿಸಬೇಕಿದೆ. ಅದನ್ನು ಬಿಜೆಪಿಯೇ ಕೊಡಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಹುಬ್ಬಳ್ಳಿ (ಮಾ.18) : ಅಯೋಧ್ಯೆಯ ರಾಮನಿಗೆ ನ್ಯಾಯ ಕೊಡಿಸಿದ್ದೇವೆ. ಇದೀಗ ಶ್ರೀರಂಗಪಟ್ಟಣದ ಆಂಜನೇಯನಿಗೆ ನ್ಯಾಯ ಕೊಡಿಸಬೇಕಿದೆ. ಅದನ್ನು ಬಿಜೆಪಿಯೇ ಕೊಡಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು.
ಇಲ್ಲಿನ ಸೆಂಟ್ರಲ್ ಕ್ಷೇತ್ರದ ಬೆಂಗೇರಿ ಸಂತೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಹುಬ್ಬಳ್ಳಿ ರಾಷ್ಟ್ರಪ್ರೇಮಕ್ಕೆ ಪ್ರೇರಣೆ ನೀಡಿದಂತಹ ಜಾಗೆ. ಇಲ್ಲಿ ರಾಷ್ಟ್ರಧ್ವಜ ಹಾರಾಟದ ವಿಷಯವಾಗಿ ನಡೆದ ಹೋರಾಟದಲ್ಲಿ ನಾನೂ ಪಾಲ್ಗೊಂಡಿದ್ದೆ. ಸತ್ಯದ ಪರವಾಗಿಲ್ಲದ ಪಕ್ಷವೆಂದರೆ ಕಾಂಗ್ರೆಸ್. ಆದರೆ, ರಾಷ್ಟ್ರ, ಸತ್ಯದ ಪರವಾಗಿರುವ ಪಕ್ಷ. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ನ್ಯಾಯ ಕೊಡಿಸಿರುವ ಪಕ್ಷ ನಮ್ಮದು. ಇದೀಗ ಶ್ರೀರಂಗಪಟ್ಟಣದಲ್ಲಿ ರಾಮನ ಬಂಟ ಆಂಜನೇಯನಿಗೆ ನ್ಯಾಯ ಕೊಡಿಸಬೇಕಿದೆ. ಅದನ್ನು ನಾವೇ ಕೊಡಿಸುತ್ತೇವೆ ಎಂದರು.
KARNATAKA ELECTION 2023: ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು
ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜತೆ ಜತೆಗೆ ಅನ್ಯಾಯದ ಹೋರಾಟ ಮಾಡುವ ಪಕ್ಷ ನಮ್ಮದು. ಅಭಿವೃದ್ಧಿ ಬೇಕೋ, ಸುಳ್ಳು ಹೇಳುವವರು ಬೇಕೋ ಎಂಬುದನ್ನು ನೀವೇ ಯೋಚನೆ ಮಾಡಿ. ಹುಬ್ಬಳ್ಳಿಗರು ಯಾವಾಗಲೂ ಅಭಿವೃದ್ಧಿ ಪರವೇ ಇರುವವರು. ಹೀಗಾಗಿ, ಇಲ್ಲಿನ ಜನತೆ ಈ ಸಲವೂ ಬಿಜೆಪಿಗೆ ಮತ ಹಾಕುವ ಮೂಲಕ ಡಬಲ್ ಎಂಜಿನ ಸರ್ಕಾರಕ್ಕೆ ಬೆಂಬಲಿಸಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಮಾತನಾಡಿ, ಕಾಂಗ್ರೆಸ್ ಇದೀಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಆದರೆ, ಅವರಿಗೇನು ಗೊತ್ತು ಈ ಸಲ ಅವರು ಮನೆಹೋಗುವುದು ಗ್ಯಾರಂಟಿ. ಜನರು ಈ ಬಗ್ಗೆ ಈಗಾಗಲೇ ತೀರ್ಮಾನಿಸಿಯಾಗಿದೆ ಎಂದರು.
ರಾಮಮಂದಿರ ನಿರ್ಮಿಸುವವರು, ಕಾಶಿ ವಿಶ್ವನಾಥ ಮಂದಿರ ಅಭಿವೃದ್ಧಿ ಪಡಿಸುವವರು ಬೇಕೋ? ರಾಮ ಹಾಗೂ ವಿಶ್ವನಾಥನ ಅಸ್ತಿತ್ವವನ್ನು ಪ್ರಶ್ನಿಸುವವರು ಬೇಕೋ ಎಂಬುದನ್ನು ತೀರ್ಮಾನಿಸಿ ಎಂದ ಅವರು, ಐಎಸ್‌ಐ ಜತೆ ಸಂಪರ್ಕ ಇಟ್ಟುಕೊಳ್ಖುವಂತಹ ಪಿಎಫ್‌ಐ, ಎಸ್‌ಡಿಪಿಐ ಜತೆಗೆ ಹೊಂದಾಣಿಕೆ ಮಾಡಿಕೊಂಡು ದೇಶದ ಹಿತವನ್ನು ಬಲಿಕೊಡುವವರು ಬೇಕೋ? ದೇಶದ ಅಭಿವೃದ್ಧಿ ಮಾಡುವವರು ಬೇಕೋ ಎಂಬುದನ್ನು ನಿರ್ಧರಿಸಿ ಎಂದರು.
ರಾಹುಲ್ ಗಾಂಧಿ(Rahul gandhi) ಎಲ್ಲೆಲ್ಲಿ ಹೋಗುತ್ತಾರೋ ಅಲ್ಲೆಲ್ಲ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುತ್ತಿದೆ. ಇದೀಗ ಕರ್ನಾಟಕಕ್ಕೂ ರಾಹುಲ್ ಬರುತ್ತಿದ್ದಾರೆ. ಇಲ್ಲೂ ಅವರ ಪಕ್ಷ ಧೂಳಿಪಟವಾಗುತ್ತದೆ. ಇದು ಗ್ಯಾರಂಟಿ ಎಂದ ಅವರು, ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗದವರು ಇದೀಗ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಸಚಿವ ಸಿ.ಸಿ. ಪಾಟೀಲ(CC Patil) ಮಾತನಾಡಿ, ಬಿಜೆಪಿ ಸರ್ಕಾರದ ಸಾಧನೆಗಳೇ ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀರಕ್ಷೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ಆಗಿರುವಂತಹ ಅಭಿವೃದ್ಧಿಗಳನ್ನೇ ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಈ ಸಲ 150 ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂದು ನುಡಿದರು.
Karnataka Politics: ಈಗಿರುವ ಕಾಂಗ್ರೆಸ್ ತಾಯಿ-ಮಕ್ಕಳ ಪಕ್ಷ: ಗೋವಿಂದ ಕಾರಜೋಳ ವ್ಯಂಗ್ಯ
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ, ವಿಪ ಸದಸ್ಯರಾದ ಅರುಣ ಶಹಾಪುರ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ವೀರಣ್ಣ ಸವಡಿ, ಸಂತೋಷ ಚವ್ಹಾಣ ಸೇರಿದಂತೆ ಹಲವರಿದ್ದರು.