ಗದಗ ಕ್ಷೇತ್ರವು ಲಿಂಗಾಯತರ ಪ್ರಾಬಲ್ಯದ ಕ್ಷೇತ್ರ. ಇಲ್ಲಿ ಲಿಂಗಾಯತರ ಮತಗಳೇ ಕ್ಷೇತ್ರದ ಫಲಿತಾಂಶ ನಿರ್ಧರಿಸುತ್ತವೆ. ಕ್ಷೇತ್ರದಲ್ಲಿ ಈವರೆಗೂ ನಡೆದ ಎಲ್ಲಾ ಚುನಾವಣೆಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಕಾಂಗ್ರೆಸ್ಸೇತರರು ಗೆಲುವು ಸಾಧಿಸಿದ್ದಾರೆ. 40 ವರ್ಷಗಳಿಗೂ ಅಧಿಕ ಕಾಲ ಗದಗ ಕ್ಷೇತ್ರ ಎಚ್.ಕೆ. ಪಾಟೀಲ ಕುಟುಂಬದ ಹಿಡಿತದಲ್ಲಿದೆ.
ಶಿವಕುಮಾರ ಕುಷ್ಟಗಿ
ಗದಗ(ಮಾ.18): ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಅವರು ಪ್ರತಿನಿಧಿಸುವ ಗದಗ ವಿಧಾನಸಭಾ ಕ್ಷೇತ್ರ ಜಿಲ್ಲೆಯಲ್ಲಿಯೇ ಹೈವೋಲ್ಟೇಜ್ ಕ್ಷೇತ್ರ ಎಂದು ಗುರುತಿಸಲ್ಟಟ್ಟಿದೆ. ದಶಕಗಳಿಂದ ಎಚ್.ಕೆ. ಪಾಟೀಲ್ ಅವರ ಕುಟುಂಬದ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ಯಾರು ಪ್ರಬಲ ಎದುರಾಳಿ? ಎನ್ನುವ ಪ್ರಶ್ನೆ ಇದೆ.
undefined
ಗದಗ ಕ್ಷೇತ್ರವು ಲಿಂಗಾಯತರ ಪ್ರಾಬಲ್ಯದ ಕ್ಷೇತ್ರ. ಇಲ್ಲಿ ಲಿಂಗಾಯತರ ಮತಗಳೇ ಕ್ಷೇತ್ರದ ಫಲಿತಾಂಶ ನಿರ್ಧರಿಸುತ್ತವೆ. ಕ್ಷೇತ್ರದಲ್ಲಿ ಈವರೆಗೂ ನಡೆದ ಎಲ್ಲಾ ಚುನಾವಣೆಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಕಾಂಗ್ರೆಸ್ಸೇತರರು ಗೆಲುವು ಸಾಧಿಸಿದ್ದಾರೆ. 40 ವರ್ಷಗಳಿಗೂ ಅಧಿಕ ಕಾಲ ಗದಗ ಕ್ಷೇತ್ರ ಎಚ್.ಕೆ. ಪಾಟೀಲ ಕುಟುಂಬದ ಹಿಡಿತದಲ್ಲಿದೆ.
ದಾವಣಗೆರೆ ಉತ್ತರ: ವಯೋಮಿತಿ ಪೊರೆ ಕಳಚಿದ ರವೀಂದ್ರನಾಥ್‌ಗೆ ಎಸ್ಸೆಸ್ಸೆಂ ಸವಾಲು
ಇಬ್ಬರಿಂದಷ್ಟೇ ಅರ್ಜಿ:
ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಎಚ್.ಕೆ.ಪಾಟೀಲ ಮತ್ತು ಬಲರಾಮ ಬಸವಾ ಎನ್ನುವವರು ಟಿಕೆಟ್ ನೀಡುವಂತೆ ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಂತಿಮವಾಗಿ ಕಾಂಗ್ರೆಸ್ ಟಿಕೆಟ್ ಸಿಗುವುದು ಎಚ್.ಕೆ.ಪಾಟೀಲರಿಗೆ ಎನ್ನುವುದು ಜಗಜ್ಜಾಹೀರು. ಹಾಗಾಗಿ ಇನ್ನು ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಈ ಬಾರಿ ಫಲಿತಾಂಶ ನಿರ್ಧಾರವಾಗಲಿದೆ.
ಬಿಜೆಪಿಯಲ್ಲಿ ಪೈಪೋಟಿ:
ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಅಲ್ಪಮಟ್ಟಿನ ಪೈಪೋಟಿ ಇದೆಯಾದರೂ 2018ರ ಚುನಾವಣೆಯಲ್ಲಿ ಎಚ್.ಕೆ.ಪಾಟೀಲರ ವಿರುದ್ಧ ಕೇವಲ 1,800 ಮತಗಳಿಂದ ಸೋಲು ಕಂಡಿರುವ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಬಹುತೇಕ ಟಿಕೆಟ್ ಅಂತಿಮವಾಗುವ ಎಲ್ಲಾ ಲಕ್ಷಣಗಳಿವೆ. ಇವರೊಂದಿಗೆ ರಾಜು ಕುರುಡಗಿ ಕೂಡಾ ಆಕಾಂಕ್ಷಿ. ಈ ಬಾರಿ ಜೆಡಿಎಸ್, ಆಮ್ ಆದ್ಮಿ ಹಾಗೂ ಹೆಚ್ಚಿನ ಸಂಖ್ಯೆಯ ಪಕ್ಷೇತರರು ಸ್ಪರ್ಧಾಕಣಕ್ಕಿಳಿಯುವ ನಿರೀಕ್ಷೆ ಇದೆ.
ಮತ ವಿಭಜನೆ ಸಮಸ್ಯೆ:
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕೊನೇ ಕ್ಷಣದಲ್ಲಿ ಶ್ರೀಶೈಲಪ್ಪ ಬಿದರೂರ ಅವರಿಗೆ ಟಿಕೆಟ್ ಕೈ ತಪ್ಪಿದ ನಂತರ ಲಿಂಗಾಯತ ಒಳಪಂಗಡದ ಮತಗಳು ಬೇರ್ಪಟ್ಟಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಅಲ್ಪಮತಗಳ ಅಂತರದ ಗೆಲುವು ದಕ್ಕಿತ್ತು. ಈ ಬಾರಿ ಹಾಗಾಗದಂತೆ ಬಿಜೆಪಿ ನಾಯಕರು ಬಹಳ ಎಚ್ಚರಿಕೆ ವಹಿಸುತ್ತಿದ್ದಾರೆ. ಆದರೆ ಲಿಂಗಾಯತ ಮತಗಳ ವಿಭಜನೆಯನ್ನೇ ಕಾಂಗ್ರೆಸ್ ಮತ್ತೊಮ್ಮೆ ಎದುರು ನೋಡುತ್ತಿದೆ.
ಉತ್ತರ ಕನ್ನಡ: ಹಳಿಯಾಳ ಅಖಾಡದಲ್ಲಿ ಯಾರಾಗಲಿದ್ದಾರೆ ಪೈಲ್ವಾನ್?
ಜಾತಿ ಲೆಕ್ಕಾಚಾರ
ಗದಗ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ಅತ್ಯಂತ ನಿರ್ಣಾಯಕ. ಸುಮಾರು 80 ಸಾವಿರ ಲಿಂಗಾಯತ ಮತದಾರರಿದ್ದಾರೆ. ಮುಸ್ಲಿಂ 25 ಸಾವಿರ, ದಲಿತ 27 ಸಾವಿರ, ಮರಾಠಾ ಮತ್ತು ಎಸ್‌ಎಸ್‌ಕೆ 16 ಸಾವಿರ, ನೇಕಾರ 12 ಸಾವಿರ, 22 ಸಾವಿರದಷ್ಟು ಕುರುಬ ಹಾಗೂ 11 ಸಾವಿರದಷ್ಟು ಲಿಂಗಾಯತ ರೆಡ್ಡಿ ಸಮುದಾಯದ ಮತಗಳಿವೆ. 27 ಸಾವಿರ ಮತಗಳು ಸಣ್ಣ ಸಣ್ಣ ಸಮುದಾಯಗಳನ್ನು ಒಳಗೊಂಡಿದ್ದು, ಎಲ್ಲಾ ಲಿಂಗಾಯತ ಮತಗಳು ಒಂದೆಡೆ ಕ್ರೋಢೀಕರಣವಾದಲ್ಲಿ ಆ ಪಕ್ಷದ ಗೆಲುವು ನಿಶ್ಚಿತ. ಕ್ಷೇತ್ರದಲ್ಲಿ ಒಟ್ಟು 2,18,431 ಮತದಾರರಿದ್ದು, ಅವರಲ್ಲಿ 1,08,518 ಪುರುಷರು, 1,09,897 ಮಹಿಳಾ ಮತದಾರರಿದ್ದಾರೆ. ಇವರಲ್ಲಿ 16 ಸಾವಿರಕ್ಕೂ ಅಧಿಕ ಮಂದಿ ಯುವ ಮತದಾರರಿದ್ದು, ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಹಿನ್ನೆಲೆಯಲ್ಲಿ ಈ ಮತಗಳಲ್ಲಿ ಬಹುತೇಕವು ಮೋದಿ ಹೆಸರಲ್ಲಿ ಬಿಜೆಪಿಗೆ ಬೀಳುವ ನಿರೀಕ್ಷೆಗಳಿವೆ.
ಕ್ಷೇತ್ರದ ಹಿನ್ನೆಲೆ
ಗದಗ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿನೆಲೆ ಹೊಂದಿದೆ. 1957ರಿಂದ ಈವರೆಗೆ ನಡೆದ ಚುನಾವಣೆಗಳಲ್ಲಿ ಎರಡು ಬಾರಿ ಮಾತ್ರ ಕಾಂಗ್ರೆಸ್ಸೇತರರು ಆಯ್ಕೆಯಾಗಿದ್ದಾರೆ. ಒಂದು ಬಾರಿ ಬಿಜೆಪಿ ಅಭ್ಯರ್ಥಿ ಶ್ರೀಶೈಲಪ್ಪ ಬಿದರೂರ ಹಾಗೂ ಒಂದು ಬಾರಿ ಜನತಾ ಪಕ್ಷದ ಅಭ್ಯರ್ಥಿ ಸಿ.ಎಸ್. ಮುತ್ತಿನಪೆಂಡಿನಮಠ ಆಯ್ಕೆಯಾಗಿರುವುದು ವಿಶೇಷ. ಎಚ್.ಕೆ. ಪಾಟೀಲರ ತಂದೆ ಕೆ.ಎಚ್. ಪಾಟೀಲರು ಹಾಗೂ ಅವರ ನಿಧನಾನಂತರ ಡಿ.ಆರ್.ಪಾಟೀಲ್ ಹಾಗೂ ಎಚ್.ಕೆ.ಪಾಟೀಲರು ಎರಡು ಬಾರಿ ಆಯ್ಕೆಯಾಗಿದ್ದು, ಕ್ಷೇತ್ರ ಹುಲಕೋಟಿ ಪಾಟೀಲರ ಕುಟುಂಬದ ಹಿಡಿತದಲ್ಲಿದೆ.