ರಾಮಲಿಂಗಾರೆಡ್ಡಿ ಮನೆಗೆ ಬಿಜೆಪಿ ಶಾಸಕ: ಗುಪ್ತ್-ಗುಪ್ತ್ ಮೀಟಿಂಗ್

By Web DeskFirst Published Dec 25, 2018, 12:38 PM IST
Highlights

ರಮೇಶ್ ಜಾರಕಿಹೊಳಿ ಎಂಬ ಜ್ವಾಲಾಮುಖಿ ನಿಧಾನಕ್ಕೆ ಕೆಂಡ ಉಗುಳಲು ಅಣಿಯಾಗಿದೆ. ರಾಮಲಿಂಗಾರೆಡ್ಡಿ ಈಗಾಗಲೇ ಆಕ್ರೋಶದ ಕಿಡಿ ಹೊತ್ತಿಸಿ, ಹೈಕಮಾಂಡ್ ಗೆ ಬಿಸಿ ಮುಟ್ಟಿಸಿದ್ದಾರೆ. ಇದರ ಮಧ್ಯೆ ಬಿಜೆಪಿ ಶಾಸಕರೊಬ್ಬರು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿರುವುದು ರಾಜ್ಯ ರಾಜಕಾರಣ ಗರಿಗೆದರಿದೆ.

ಬೆಂಗಳೂರು, (ಡಿ.25): ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ.

"

ರಮೇಶ್ ಜಾರಕಿಹೊಳಿ ಎಂಬ ಜ್ವಾಲಾಮುಖಿ ನಿಧಾನಕ್ಕೆ ಕೆಂಡ ಉಗುಳಲು ಅಣಿಯಾಗಿದೆ. ಮತ್ತೊಂದೆಡೆ ರಾಮಲಿಂಗಾರೆಡ್ಡಿ ಈಗಾಗಲೇ ಆಕ್ರೋಶದ ಕಿಡಿ ಹೊತ್ತಿಸಿ, ಹೈಕಮಾಂಡ್ ಗೆ ಕೊಂಚ ಮಟ್ಟಿಗೆ ಬಿಸಿ ಮುಟ್ಟಿಸಿದ್ದಾರೆ. 

ರಾಮಲಿಂಗಾ ರೆಡ್ಡಿ ಆಪ್ತರ ಸಾಮೂಹಿಕ ರಾಜೀನಾಮೆ?

ಇದರ ನಡುವೆ ರಾಮಲಿಂಗಾರೆಡ್ಡಿ ಅವರ ಮನೆಗೆ ಬಿಜೆಪಿ ಶಾಸಕ ಎಸ್‌ಆರ್‌ ವಿಶ್ವನಾಥ್ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಶಾಸಕರಾದ ಸತೀಶ್ ಕೃಷ್ಣ, ಕೃಷ್ಣಪ್ಪ ರಾಮಲಿಂಗಾರೆಡ್ಡಿ ಅವರನ್ನು ರಹಸ್ಯ ಭೇಟಿಯಾದ ಬೆನ್ನಲ್ಲೇ ಎಸ್‌ಆರ್‌ ವಿಶ್ವನಾಥ್ ಅವರು ಭೇಟಿ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ.

ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?

ಬಿಜೆಪಿಗೆ ಅವರನ್ನು ಸೆಳೆಯುವ ಪ್ರಯತ್ನ ಮುಂದುವರೆದಿದೆ ಎನ್ನಲಾಗುತ್ತಿದ್ದು, ರಾಮಲಿಂಗಾ ರೆಡ್ಡಿ ಅವರನ್ನ ಬಿಎಸ್ ವೈಗೆ ಭೇಟಿ ಮಾಡಿಸಲು ಎಸ್.ಆರ್ ವಿಶ್ವನಾಥ್ ಮಿಡಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

click me!