ಸಚಿವ ಸ್ಥಾನ ತಪ್ಪಲು ಇಬ್ಬರು ಕಾರಣ: ರಾಮಲಿಂಗಾ ರೆಡ್ಡಿ ಬಾಂಬ್..!

By Web DeskFirst Published Dec 23, 2018, 8:00 PM IST
Highlights

ಸಚಿವ ಸ್ಥಾನ ಕೈತಪ್ಪಲು ಒಂದಿಬ್ಬರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ್ದರ ಬಗ್ಗೆ ಆ ನಾಲ್ಕು ಜನರೇ ಉತ್ತರಿಸಬೇಕು-  ಮಾಜಿ ಸಚಿವ ರಾಮಲಿಂಗರೆಡ್ಡಿ ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು, [ಡಿ.23] ಸಂಪುಟ ಸರ್ಜರಿ ಬೆನ್ನಲ್ಲೆ ರಾಜ್ಯ ಕೈ ಪಾಳಯದಲ್ಲಿ ಅಸಮಾಧಾನ ಕೊತ ಕೊತ ಅಂತ ಕುದಿಯುತ್ತಿದೆ. ಒಂದೆಡೆ ಅತೃಪ್ತರನ್ನ ಸಮಾಧಾನ ಪಡಿಸಲು ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. 

ಅದರಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಆಸ್ತಿ ಅಂತಾನೇ ಕರೆಸಿಕೊಳ್ಳೋ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಸಹ ಮೌನ ಮುರಿದಿದ್ದು, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ 

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಸಿದ್ದರಾಮಯ್ಯ, ವೇಣುಗೋಪಾಲ್ ಪರಮೇಶ್ವರ್, ದಿನೇಶ್ ಗುಂಡುರಾವ್ ಉತ್ತರಸಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರು ಈ ಬಾರಿ ದೆಹಲಿಯಲ್ಲಿ ನನ್ನ ಬಗ್ಗೆ ಮಾತಾಡಲಿಲ್ಲ.

ಸಚಿವ ಸ್ಥಾನ ಸಿಗದಿರೋದಕ್ಕೆ ಬೇಸರ ಆಗಿಲ್ಲ. ಆದ್ರೆ ಬೆಂಗಳೂರಲ್ಲಿ ಹಿರಿಯ ನಾಯಕನಾದ ನನ್ನನ್ನ ಪಕ್ಷದಲ್ಲಿ ಕಡೆಗಣಿಸುತ್ತಿದ್ದಾರೆ ಅನ್ನೋ ಬೇಸರ ಇದೆ. ಸಂಪುಟದಲ್ಲಿ ಜಾರ್ಜ್, ಆರ್.ವಿ ದೇಶಪಾಂಡೆಯಂತ ಹಿರಿಯ ಸಚಿವರಿದ್ದಾರೆ.

ಅವರಿಗೊಂದು ನ್ಯಾಯ. ನಂಗೊಂದು ನ್ಯಾಯನಾ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು. ತಮಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ರಾಜ್ಯದ ಪ್ರಭಾವಿ ನಾಯಕರುಗಳೇ ಎಂದು ಹೇಳಿರುವ ರಾಮಲಿಂಗಾ ರೆಡ್ಡಿ ಅವರು ಆ ಲೀಡರ್ ಗಳ ಹೆಸರಗಳನ್ನು ಬಹಿರಂಗಪಡಿಸಿಲ್ಲ.

click me!