ಲೋಕಸಭೆ ಚುನಾವಣೆ ಸಿ ವೋಟರ್ಸ್ ಸಮೀಕ್ಷೆ: ಯಾರಿಗೆ ಎಷ್ಟು ಸ್ಥಾನ?

Published : Dec 24, 2018, 10:49 PM ISTUpdated : Dec 24, 2018, 10:51 PM IST
ಲೋಕಸಭೆ ಚುನಾವಣೆ ಸಿ ವೋಟರ್ಸ್ ಸಮೀಕ್ಷೆ: ಯಾರಿಗೆ ಎಷ್ಟು ಸ್ಥಾನ?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 4 ವರ್ಷಗಳನ್ನು ಪೂರೈಸಿದೆ. ಈಗ ಚುನಾವಣೆ ನಡೆದರೆ ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಬಹುದು? ಇಲ್ಲಿದೆ ರಿಪಬ್ಲಿಕ್ ಟಿವಿ-ಸಿ ವೋಟರ್ ಮಹಾ ಸಮೀಕ್ಷೆ.   

ನವದೆಹಲಿ, [ಡಿ.24]: ಮೂರು ರಾಜ್ಯಗಳಲ್ಲಿ ಸೋಲಿನ ಆಘಾತ ಅನುಭವಿಸಿದ ಬಿಜೆಪಿ ಕೂಡಲೇ ಚೇತರಿಸಿಕೊಂಡು 2019ರ ಲೋಕಸಭೆ ಚುನಾವಣೆಗೆ ತಯಾರಿ ನಡೆಸಲು ಸಿದ್ಧವಾಗುತ್ತಿದೆ.

ಮತ್ತೊಂದೆಡೆ ಮೂರು ರಾಜ್ಯಗಳಲ್ಲಿ ಅಭೂತ ಪೂರ್ವ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ , ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿದೆ.

ಮೈತ್ರಿ ಮುರಿದ ಶಿವಸೇನೆ: 2019ಕ್ಕೆ ಮೋದಿ ಜೊತೆಗಿರಲ್ಲ ಎಂದ ಉದ್ಧವ್!

ಇನ್ನು ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಯಾರು ಅಧಿಕಾರದ ಗದ್ದುಗೆಗೇರಲಿದ್ದಾರೆ ಎನ್ನುವ ಲೆಕ್ಕಾಚಾರಗಳ ಸಮೀಕ್ಷೆಗಳು ಹೊರ ಬೀಳುತ್ತಿದ್ದು, 2019ರ ಲೋಕಸಭೆ ಚುನಾವಣೆಗೆ ರಿಪಬ್ಲಿಕ್ ಟಿವಿ-ಸಿ ವೋಟರ್ ಮಹಾ ಸಮೀಕ್ಷೆ ನಡೆಸಿದೆ.

ಬಿಜೆಪಿ ವಿರೋಧಿ ಪಕ್ಷಗಳು ಮಹಾಮೈತ್ರಿ ಮಾಡಿಕೊಂಡರೇ, ಒಟ್ಟು  543 ಸ್ಥಾನಗಳಲ್ಲಿ ಬಿಜೆಪಿ  247, ಕಾಂಗ್ರೆಸ್ 171, ಇತರೆ 126 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಒಂದು ವೇಳೆ ಮಹಾಮೈತ್ರಿಯಾಗದಿದ್ದರೆ  ಬಿಜೆಪಿ 291 ಸ್ಥಾನಗಳಲ್ಲಿ ಜಯಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

  ಕಾಂಗ್ರೆಸ್ ಮೇಲೆ ಹೇಳಿರುವ ರೀತಿಯಲ್ಲಿ 171 ಸ್ಥಾನಗಳನ್ನ ಬಾಚಿಕೊಳ್ಳಲಿದೆ.  ಇನ್ನು ಇತರೆ 81 ಸ್ಥಾನಗಳಲ್ಲಿ ಜಯಬೇರಿ ಬಾರಿಸಲಿದ್ದಾರೆ ಎಂದು ರಿಪಬ್ಲಿಕ್ ಟಿವಿ-ಸಿ ವೋಟರ್ ಸಮೀಕ್ಷೆ ಹೇಳಿದೆ.

 ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟ ಸ್ಥಾನ?

ಕರ್ನಾಟಕ ಲೋಕಸಭಾ ಚುನಾವಣೆ ಸಮೀಕ್ಷೆ ನೋಡುವುದಾದರೆ ಒಟ್ಟು 28ರಲ್ಲಿ ಬಿಜೆಪಿ 15, ಕಾಂಗ್ರೆಸ್ 10, ಜೆಡಿಎಸ್ 3 ಸ್ಥಾನಗಳಲ್ಲಿ ಗೆಲ್ಲಲಿದೆ. 
ಆಂಧ್ರಪ್ರದೇಶ - ಬಿಜೆಪಿ 0, YSRP 14, NDA 14
ಮಿಜೋರಾಂ - ಬಿಜೆಪಿ 0, MNF 1, NDA 1
ಒಡಿಶಾ - ಬಿಜೆಪಿ 15, ಬಿಜೆಡಿ 6, NDA 21
ತೆಲಂಗಾಣ - ಬಿಜೆಪಿ 0, TRS 16, NDA 16
ಹಿಮಾಚಲ ಪ್ರದೇಶ (4)-UPA 0, NDA 4.
ಪುದುಚೆರೆ [1]- UPA  1.
ಸಿಕ್ಕಿಂ [1]- NDA 1
ಛಂಡೀಗಡ್  [1]-NDA 1
ಮಿಜೋರಾಮ್ [1]- MNF 1
ಮಣಿಪುರ 2- NDA 2
ಅಂಡಮಾನ ನಿಕೋಬಾರ್ 1- NDA 1
ಮೇಘಾಲಯ 2- NDA 2
ಜಮ್ಮು ಮತ್ತು ಕಾಶ್ಮೀರ 6- NDA 2, UPA 4.
ಅರುಣಾಚಲ ಪ್ರದೇಶ 2- NDA 2.
ತ್ರಿಪುರ 2- NDA 2
ಗೋವಾ 2- NDA 2
ಉತ್ತರಖಂಡ್ 5- NDA 5
ದೆಹಲಿ 7- NDA 7
ಹರಿಯಾಣ 10- NDA 7, UPA 3
ಛತ್ತೀಸ್ ಗಡ 11- NDA 5, UPA 6
ಜಾರ್ಖಂಡ್ 14- NDA 5, UPA 8
ಪಂಜಾಬ್ 13- NDA 1, UPA 13
ಅಸ್ಸಾಂ 14- NDA 9, UPA 4
ಕೇರಳ 20- NDA 0, UPA 17, LDF 3
ರಾಜಸ್ಥಾನ 25- NDA 19, UPA 6
ಗುಜರಾತ್ 26- NDA 24, UPA 2
ಮಧ್ಯಪ್ರದೇಶ 29- NDA 23, UPA 6
ತಮಿಳುನಾಡು 39- NDA 0, UPA 39
ಬಿಹಾರ 40- NDA 35, UPA 5
ಪಶ್ಚಿಮ ಬಂಗಾಳ 42- NDA 9, UPA 1, TMC 32
ಮಹಾರಾಷ್ಟ್ರ  48- NDA 16, UPA 30
ಉತ್ತರಪ್ರದೇಶ 80-  NDA 28, UPA 2, MGB 50, 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್