Tumakuru: ಸಂಸದ ಜಿ.ಎಸ್.ಬಸವರಾಜು ದೊಡ್ಡ ಲೂಟಿಕೋರ: ಶಾಸಕ ಎಸ್.ಆರ್.ಶ್ರೀನಿವಾಸ್

By Govindaraj S  |  First Published Jan 11, 2023, 7:42 PM IST

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕ ಆರೋಪ ಪ್ರತ್ಯಾರೋಪ ಜೋರಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ಶುರುವಾದ ಭೂಹಗರ ಹಾಗೂ ಬಗರ್ ಹುಕ್ಕುಂ ಜಮೀನು ಹಂಚಿಕೆ ವಿವಾದ ಭುಗಿಲು ಮಟ್ಟಿದೆ. 


ತುಮಕೂರು (ಜ.11): ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕ ಆರೋಪ ಪ್ರತ್ಯಾರೋಪ ಜೋರಾಗಿದೆ. ಗುಬ್ಬಿ ಕ್ಷೇತ್ರದಲ್ಲಿ ಶುರುವಾದ ಭೂಹಗರ ಹಾಗೂ ಬಗರ್ ಹುಕ್ಕುಂ ಜಮೀನು ಹಂಚಿಕೆ ವಿವಾದ ಭುಗಿಲು ಮಟ್ಟಿದೆ. ಈ ವಿಚಾರದಲ್ಲಿ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್ ಹಾಗೂ ಬಿಜೆಪಿ ನಾಯಕರ ನಡುವಿನ ಮುಸುಗಿನ ಗುದ್ದಾಟ ಬಹಿರಂಗವಾಗಿದೆ. ನಿನ್ನೆಯ (ಮಂಗಳವಾರ) ಬಗರ್ ಹುಕ್ಕುಂ ಕಮಿಟಿ ಸಭೆ ಮುಂದೂಡಿದ ಬೆನ್ನಲ್ಲೆ, ಇಂದು ಶಾಸಕ ಎಸ್. ಆರ್ ಶ್ರೀನಿವಾಸ್ ಸಂಸದ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. 

ಬಗರ್ ಹುಕುಂ ಕಮಿಟಿಯಿಂದ ನಾನು ನನ್ನ ಸಂಬಂಧಿಕರಿಗೆ, ಕಾರ್ಯಕರ್ತರಿಗೆ ಒಬ್ಬರಿಗೂ ಜಮೀನು ಮಾಡಿಕೊಟ್ಟಿಲ್ಲ, ಮಾಡಿಕೊಟ್ಟಿರೋದು ಏನಾದ್ರು ಇದ್ರೆ ಬಿಜೆಪಿ ಅವ್ರು ತಂದು ತೊರಿಸಲಿ ಅಂತ ಸವಾಲ್ ಹಾಕಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಒಂದು ಗುಂಟೆ ಜಮೀನು ತಗೊಂಡಿಲ್ಲ, ಆದರೆ ಸಂಸದ ಜಿ.ಎಸ್ ಬಸವರಾಜು, ಈ ಬಾರಿ ಗೆದ್ದ ನಂತರ ಚೇಳೂರಿನ ದೊಡ್ಡ ಬಿದರೆ ಗೇಟ್ ಬಳಿ, ಒಂದೇ ಜಾಗದಲ್ಲಿ 80 ಎಕರೆ ಜಮೀನು ತಗೊಂಡಿದ್ದಾರೆ. ಸಂಸದ ಬಸವರಾಜ್ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

Latest Videos

undefined

ಮೋದಿ ಆಗಮನಕ್ಕೆ ಸ್ವಾಗತ: ಗುಬ್ಬಿಯಲ್ಲಿರುವ ಹೆಚ್ಎಎಲ್ ಉದ್ಘಾಟನೆಗೆ ಮೋದಿ ಆಗಮಿಸುತ್ತಿರುವುದು ಸಂಸದ ವಿಚಾರ, ಅವರು ಬರುವುದರಿಂದ ನನಗೆ ಯಾರು ಬಂದ್ರು ಭಯ ಇಲ್ಲ, ನಾನು ಸೋತ್ರು ಖುಷಿ ಪಡ್ತಿನಿ, ಗೆದ್ರು ಖುಷಿ ಪಡ್ತಿನಿ ಎಂದಿದ್ದಾರೆ

Chamarajanagar: ಬೆಳೆ ರಕ್ಷಣೆಗಾಗಿ ರೈತನಿಂದ ನಾಯಿಗೆ ಹುಲಿ ಬಣ್ಣ!

ಮೂರ್ನಾಲ್ಕು ಜನ ಜೆಡಿಎಸ್‌ಗೆ ರಾಜೀನಾಮೆ ಕೊಡ್ತಾರೆ: ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿರುವ ಎಸ್.ಆರ್ ಶ್ರೀನಿವಾಸ್ ಶಾಸಕ ಸ್ಥಾನಕ್ಕೆ ರಾಜಿನಾಮೆ ವಿಚಾರವನ್ನು ಕೈ ಬಿಡುವುದಿಲ್ಲ, ಜೆಡಿಎಸ್‌ನವರು  ಪಕ್ಷದಿಂದ ಆಚೆ ಹಾಕಿದಾಗ ನಾನು ರಾಜಿನಾಮೆ ಕೊಡಲೇಬೇಕು, ಫೆಬ್ರವರಿಯಲ್ಲಿ ಬಜೆಟ್ ಸೆಷನ್ ಮುಗಿಸಿ ರಾಜಿನಾಮೆ ಕೊಡ್ತಿನಿ ಎಂದು ಹೇಳಿದರು. ಗುಬ್ಬಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರು ಜೆಡಿಎಸ್‌ಗೆ ರಾಜಿನಾಮೆ ಕೊಡ್ತಿದ್ದಾರೆ, ಹಾಗಾಗಿ ಮುಂದೆ ನಾನು ರಾಜಿನಾಮೆ ಕೊಟ್ಟು ಯಾವುದಾದ್ರು ಪಕ್ಷ ಸೇರುತ್ತೇನೆ.  

ಅಲ್ಲದೆ ಒಟ್ಟು ಮೂರ್ನಾಲ್ಕು ಶಾಸಕರು ಜೆಡಿಎಸ್ ಗೆ ರಾಜಿನಾಮೆ ಕೊಡ್ಬಹುದು, ಈ ಬಗ್ಗೆ  ರಾಜಿನಾಮೆ ಬಗ್ಗೆ ಆತಂರಿಕವಾಗಿ ಚರ್ಚೆ ನಡೆತಿದೆ ಎಂದು ರಾಜೀನಾಮೆ ಸುಳಿವು ನೀಡಿದರು. ಕೆಪಿಸಿಸಿಗೆ ನಾನು ಟಿಕೆಟ್ ಬಯಸಿ ಅರ್ಜಿ ಹಾಕಿಲ್ಲ‌, ಹಾಗಾಗಿ ಪಟ್ಟಿಯಲ್ಲಿ ನನ್ನ ಹೆಸರಿಲ್ಲ, ನಾನು ಕಾಂಗ್ರೆಸ್ ಗೆ ಹೋಗ್ತಿನಿ ಅಂತ ಎಲ್ಲೂ ಹೇಳಿಲ್ಲ. ಯಾವ್ದೋ ಒಂದು ಪಕ್ಷಕ್ಕೆ ಹೋಗಲು ಪ್ರಯತ್ನ ಮಾಡ್ತಿನಿ. ಆ ಪಕ್ಷದಲ್ಲಿ ನಮಗೆ ಸರಿಯಾಗಿ ಮಾನ್ಯತೆ ಕೊಟ್ಟು ಕರೆದುಕೊಂಡ್ರೆ ಹೋಗ್ತಿನಿ. ಇಲ್ಲಾಂದ್ರೆ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತಿನಿ ಎಂದರು. 

ಕಾಂಗ್ರೆಸ್ ಸೇರ್ಪಡೆಗೆ ಗುಬ್ಬಿ ಕಾಂಗ್ರೆಸ್ ಮೂಲ ಮುಖಂಡರ ವಿರೋಧ ವಿಚಾರ, ನಾನು‌ ಅರ್ಜಿನೆ ಹಾಕಿಲ್ಲ, ಕಾಂಗ್ರೆಸ್‌ಗೆ ಬರ್ತಿನಿ ಅಂತ ಅವರು ಯಾಕೆ ವಿರೋಧ ಮಾಡ್ತಾರೆ. ಭಾರತ್ ಜೋಡೋದಲ್ಲಿ, ದೇಶದ ಅಭಿಮಾನದಿಂದ ಭಾಗಿಯಾಗಿದ್ದೆ ಅಷ್ಟೇ. ನನಗೆ ಜೆಡಿಎಸ್ ಶಾಶ್ವತವಾಗಿ ಮುಚ್ಚಿದ ಬಾಗಿಲು,  ಮತ್ತೆ ಜೆಡಿಎಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.  ಮತ್ತೆ ಯಾವ್ದೆ ರಾಜಿ ಸಂಧಾನ ನಡೆಯುವ ಪ್ರಶ್ನೆ ಇಲ್ಲ ಅಂತ ಖಡಾಖಂಡಿತವಾಗಿ ತಿಳಿಸಿದರು.  ಹೆಚ್‌ಎಎಲ್ ನಲ್ಲಿ ಉದ್ಘಾಟನೆ ಗೆ ಮೋದಿ ಬರ್ತಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕೊಡುವಂತೆ ಮನವಿ ಮಾಡಲಾಗುತ್ತೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೇ ಹೆಚ್‌ಎಎಲ್ ಮುಂದೆ ಪ್ರತಿಭಟನೆ ನಡೆಸಲಾಗುತ್ತೆ ಎಚ್ಚರಿಕೆ ನೀಡಿದರು.

ಬಿಜೆಪಿ ಸೇರಲು ಮುಂದಾ​ಗಿ​ದ್ದ ಶಾಸಕ ಮಂಜು​ನಾಥ್‌: ಬಾಲಕೃಷ್ಣ ಆರೋಪ

ಜೆಡಿಎಸ್ ಪಂಚರತ್ನ ಯಾತ್ರೆ ವಿಚಾರ: ಪಂಚರತ್ನ ಯಾತ್ರೆ ಗುಬ್ಬಿಯಲ್ಲಿ ಸಂಚಾರ ನಡೆಸಿದ್ದರಿಂದ ನನಗೆ ಯಾವುದೇ ತೊಂದರೆ ಆಗಿಲ್ಲ, ನಾನು ಅದಕ್ಕೆ ಹೆದರುವುದು ಇಲ್ಲ, ಬೇರೆ ತಾಲ್ಲೂಕಿನಲ್ಲಿ ನಡೆದಿದ್ದಕೂ ನಮ್ಮ ತಾಲೂಕಿನಲ್ಲಿ ನಡೆದಿದ್ದಕ್ಕೂ ಹೆಚ್ಚಿನ ವ್ಯತ್ಯಾಸ ಇದೆ. ಯಾವ ರತ್ನನೂ ನಡಿಲಿ ಜನ ತಿರ್ಮಾನ ಮಾಡ್ತಾರೆ. ಪ್ರೀತಿಯಿಂದ ಜನ ಪಂಚರತ್ನ ಯಾತ್ರೆಗೆ ಬಂದ್ರೆ ಅದಕ್ಕೆ ಮಾನ್ಯತೆ ಇದೆ. ಸೇರಿಸಿ ಬಂದ ಜನರಿಂದ ಯಾವುದೇ ಮಾನ್ಯತೆ ಇಲ್ಲ, ನಾನು ಬಿಜೆಪಿಗೆ ಹೋಗುವ ಮನಸ್ಥಿತಿಯಲ್ಲಿಲ್ಲ. ಬಿಜೆಪಿಗೆ ಹೋಗುವ ಆಗಿದ್ರೆ ಯಾವೊತ್ತೋ ಹೋಗ್ಬಹುದಿತ್ತು ಎಂದರು.

click me!