ಬಿಜೆಪಿ ಮಂಡಲ ಅಧ್ಯಕ್ಷನ ಕಾರಿನ ಮೇಲೆ ಕಲ್ಲೆಸೆತ, ಕಾಂಗ್ರೆಸ್ ಗೂಂಡಾಗಳನ್ನು ಬಂದಿಸುವಂತೆ ಪ್ರತಿಭಟನೆ

By Kannadaprabha News  |  First Published May 8, 2023, 8:59 PM IST

ಚಳ್ಳಕೆರೆ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಭಾನುವಾರ ರಾತ್ರಿ ಚಿತ್ರದುರ್ಗ ತಾಲೂಕಿನ ಬೆಳಗಟ್ಟಗ್ರಾಮದ ಬಳಿ ನಡೆದಿದೆ. ತುರುವನೂರು ಗ್ರಾಮದಲ್ಲಿ ಪ್ರಚಾರ ಮುಗಿಸಿ ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ.


ಚಿತ್ರದುರ್ಗ (ಮೇ.8) : ಚಳ್ಳಕೆರೆ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಭಾನುವಾರ ರಾತ್ರಿ ಚಿತ್ರದುರ್ಗ ತಾಲೂಕಿನ ಬೆಳಗಟ್ಟಗ್ರಾಮದ ಬಳಿ ನಡೆದಿದೆ. ತುರುವನೂರು ಗ್ರಾಮದಲ್ಲಿ ಪ್ರಚಾರ ಮುಗಿಸಿ ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ.

ರಾತ್ರಿ 9-30ರ ವೇಳೆಗೆ ಕಾರು ಅಡ್ಡಗಟ್ಟಿದ ಅಪರಿಚಿತರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾದರು. ಜಾತಿ ನಿಂದನೆ ಮಾಡಿದರು. ಕಲ್ಲು ತೂರಾಟದಿಂದ ಕಾರಿನÜ ಗಾಜು ಜಖಂ ಗೊಂಡಿದೆ. ನಂತರ ಬೆಳಗಟ್ಟಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದು ವಾಪಾಸ್ಸಾದುದಾಗಿ ತುರುವನೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Latest Videos

undefined

ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲ; ಯಾವುದೇ ಪಕ್ಷ ನನ್ನ ಟಾರ್ಗೆಟ್‌ ಅಲ್ಲ: ಸುಮಲತಾ

ಕಾಂಗ್ರೆಸ್‌ ಗೂಂಡಾಗಳಿಂದ ಕೃತ್ಯ ನಡೆದಿದೆ ಎಂದು ಕಿಡಿಕಾರಿರುವ ಬಿಜೆಪಿ ಕಾರ್ಯಕರ್ತರು(BJP workers chitradurga) ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರಾತ್ರಿ ತುರುವನೂರು ಠಾಣೆ (Turuvanur police station )ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅನಿಲ್‌ಕುಮಾರ್‌(BJP Candidate anilkumar) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಹಲ್ಲೆಗೆ ಖಂಡನೆ:

ಚಳ್ಳಕೆರೆ ಮಂಡಲ ಅಧ್ಯಕ್ಷ ಶ್ರೀನಿವಾಸ್‌(Srinivas suranahlly) ಮೇಲೆ ನಡೆ​ಸಿದ ಹಲ್ಲೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ನವೀನ್‌, ಸೋಲಿನ ಹತಾಶೆಯಿಂದ ಕಾಂಗ್ರೆಸ್‌ ಅವರ ಗೂಂಡಾ ಸಂಸ್ಕೃತಿ ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಬಿಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ಈ ಕೃತ್ಯಗಳಿಗೆ ಇಳಿಯಲಾಗುತ್ತಿದೆ ಎಂದರು.

 

ಕಾಂಗ್ರೆಸ್ ಗೂಂಡಾಗಿರಿಗೆ ಬಿಜೆಪಿ ಸರ್ಕಾರ ಅವಕಾಶ ನೀಡಲ್ಲ : ವಿಜಯೇಂದ್ರ ವಾರ್ನಿಂಗ್

ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ನಡೆದ ಗೊಲ್ಲ ಹಾಗೂ ಮಾದಿಗ ಸಮಾವೇಶದಲ್ಲಿ ಕಂಡುಬಂದ ಜನ ಬೆಂಬಲ ನೋಡಿ ಹತಾಶರಾಗಿದ್ದಾರೆ. ಶ್ರೀನಿವಾಸ್‌ ಯುವ ಮೋರ್ಚಾ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ನಿಷ್ಟೆಯಿಂದ ಕೆಲಸ ಮಾಡಿಕೊಂಡಿದ್ದರು. ತುರುವನೂರು ಭಾಗದಲ್ಲಿ ಪ್ರಚಾರ ಮಾಡಿ ವಾಪಾಸಾಗುವಾಗ ಹಲ್ಲೆ ನಡೆದಿದೆ. ತಲೆ ಮತ್ತು ಕಣ್ಣಿನ ಭಾಗಕ್ಕೆ ಗಾಯವಾಗಿದೆ.

ಬಿಜೆಪಿ ಕಾರ್ಯಕರ್ತರು ಎದೆಗುಂದದೇ ಚುನಾವಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಶಾಂತಿ ಕದಡದಂತೆ ಚುನಾವಣೆ ನಡೆಯಬೇಕು. ಈ ನಿಟ್ಟಿನಲ್ಲಿ ಕುಕೃತ್ಯ ಮಾಡುವವರ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ನವೀನ್‌ ಆಗ್ರಹಿಸಿದರು. ನರೇಂದ್ರ ಹೊನ್ನಾಳ್‌, ಮಾಧ್ಯಮ ಉಸ್ತುವಾರಿ ಅಕ್ಷಯ… ರೈ, ದಗ್ಗೆ ಶಿವಪ್ರಕಾಶ್‌, ನಾಗರಾಜ ಬೇದ್ರೆ ಇದ್ದರು.

click me!