Karnataka elections 2023: ಮದುವೆಗೆ ಹರಸಲು ಬಂದವರಿಗೆ ನೂತನ ಜೋಡಿಗಳಿಂದ ಮತದಾನ ಜಾಗೃತಿ!

Published : May 08, 2023, 08:15 PM IST
Karnataka elections 2023: ಮದುವೆಗೆ ಹರಸಲು ಬಂದವರಿಗೆ ನೂತನ ಜೋಡಿಗಳಿಂದ ಮತದಾನ ಜಾಗೃತಿ!

ಸಾರಾಂಶ

ಮದುವೆ ಮನೆಯಲ್ಲಿ ನೂತನ ವಧುವರರು ಮತದಾನ ಜಾಗೃತಿ  ಮೂಡಿಸಿದ ಅಪರೂಪದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.‌  ಇವರ ಜಾಗೃತಿ ಎಲ್ಲರ ಮನ ಸೆಳೆದಿದೆ.

ಕೊಪ್ಪಳ (ಮೇ.8): ಮದುವೆ ಮನೆಯಲ್ಲಿ ನೂತನ ವಧುವರರು ಮತದಾನ ಜಾಗೃತಿ  ಮೂಡಿಸಿದ ಅಪರೂಪದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.‌ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ .‌ಜಿಗೇರಿ ಕುಟುಂಬದ ನಿಂಗಪ್ಪ, ರೇಖಾ ಹಾಗೂ ರಾಚಪ್ಪ ನಿವೇದಿತಾ ದಂಪತಿಗಳು ಪೋಸ್ಟರ್ ಹಿಡಿಯುವ ಮೂಲಕ ಮತದಾನದ ಜಾಗೃತಿ  ಮೂಡಿಸಿದ್ದಾರೆ. ಇನ್ನು ತಮಗೆ ಹಾರೈಸಲು  ಬಂದವರಿಗೆ ನೂತನ ವಧು ವರರು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಮೂಲಕ ಮನವಿ ಮಾಡಿದ್ದಾರೆ.‌ ಇನ್ನು‌ ಮತದಾನದ ಕುರಿತು ಜಾಗೃತಿ ಮೂಡಿಸಿದ ನೂತನ ದಂಪತಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮತದಾನವನ್ನಾಗಲಿ ಮಗಳನ್ನಾಗಲಿ ಆಯೋಗ್ಯರಿಗೆ ಕೊಡಬಾರ್ದು! ಇನ್ನೊಂದು ಕಡೆ ಮದುವೆ ಆಮಂತ್ರಣ ಪತ್ರಿಕೆ ರೀತಿಯಲ್ಲಿಯೇ ಚುನಾವಣಾ ಜಾಗೃತಿ ನಡೆಸಿರುವ ಕರೆಯೋಲೆಯೊಂದು ವೈರಲ್ ಆಗುತ್ತಿದೆ. ಭಾರತದ ಕೇಂದ್ರ ಚುನಾವಣಾ ಆಯೋಗ ಎಂಬ ಹೆಸರಿನಲ್ಲಿ ಈ ಕರೆಯೋಲೆ ವೈರಲ್ ಆಗಿದೆ. ಮತದಾನವನ್ನಾಗಲಿ ಮಗಳನ್ನಾಗಲಿ ಆಯೋಗ್ಯರಿಗೆ ಕೊಡಬಾರ್ದು ಎಂಬ ಬೀChi ಅವರ ಸಾಲನ್ನು ಉಲ್ಲೇಖಿಸಿ ಈ ಪೋಸ್ಟರ್ ವೈರಲ್ ಆಗಿದೆ.

ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1945 ಶ್ರೀ ಶೋಭಕೃನ್ನಾಮ ಸಂವತ್ಸರೇ ಉತ್ತರಾಯಣೇ ವಸಂತಯತ್ ವೈಶಾಖ ಮಾಸ ಕೃಷ್ಣಪಕ್ಷ: ಪಂಚಮಿ ತಿಫ್ ಆಂಗ್ಲ ದಿನಾಂಕ 10- 05-2023 ರ ಬುಧವಾರ ಬೆಳಿಗ್ಗೆ 7.00 ರಿಂದ ಸಂಜೆ 6.00 ರವರೆಗೆ ಸಲ್ಲುವ ಶುಭ ಸಮಯದಲ್ಲಿ ಮತದಾನ ಕಾರ್ಯದಲ್ಲಿ ಭಾಗವಹಿಸಿ ಈ ಚುನಾವಣೋತ್ಸವ ವನ್ನು ಯಶಸ್ವಿಯಾಗಿ ನೆರವೇರುವಂತೆ ಭಾರತದ ಸಂವಿಧಾನ ನೀಡಿರುವ ಅಧಿಕಾರದನ್ವಯ ಚುನಾವಣಾ ಆಯೋಗ ನಿಶ್ಚಯಿಸಿರುವುದರಿಂದ ತಾವು ತಮ್ಮ ಕುಟುಂಬದ ಅರ್ಹ ಸದಸ್ಯರೆಲ್ಲರೂ ಆಗಮಿಸಿ ತಮ್ಮ ಸ್ವಚ್ಛೆಯಂತೆ ನಿರ್ಭೀತರಾಗಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಕರ್ಕಾಟಕದ ಭವಿಷ್ಯವನ್ನು ರೂಪಿಸಬೇಕೆಂದು ಕೋರುತ್ತೇವೆ.

Kanakapura Constituency: ನನಗೆ ಸಿಎಂ ಆಗೋ ಅರ್ಹತೆ ಇದೆಯೆಂದು ಹೇಳಿಕೊಂಡ ಡಿಕೆಶಿ!

ವಿಶೇಷ ಸೂಚನೆ : ಹಣ ಕೇಳದೆ ನಿಮ್ಮ ಹಕ್ಕು ಚಲಾಯಿಸಿ ಮತ ನೀಡಿ ಆಶೀರ್ವದಿಸಿ ಸುಖಾಗಮನ ಬಯಸುವರು : ಬೂತ್‌ ಮಟ್ಟದ ಎಲ್ಲಾ ಪಕ್ಷಗಳ ಕಾರ್ಯಕರ್ತರು  ಎಂದು ಕರೆಯೋಲೆಯಲ್ಲಿ ಬರೆಯಲಾಗಿದೆ.

KARNATAKA DRY DAYS: ಇಂದಿನಿಂದ 4 ದಿನ ಮದ್ಯ ಮಾರಾಟವಿಲ್ಲ, ಬಹಿರಂಗ ಪ್ರಚಾರವೂ ಇರಲ್ಲ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ.  ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ