ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲ; ಯಾವುದೇ ಪಕ್ಷ ನನ್ನ ಟಾರ್ಗೆಟ್‌ ಅಲ್ಲ: ಸುಮಲತಾ

By Kannadaprabha NewsFirst Published May 8, 2023, 8:32 PM IST
Highlights

ಪ್ರ​ಧಾನಮಂತ್ರಿ ನ​ರೇಂದ್ರ ​ಮೋ​ದಿ ಆ​ಡ​ಳಿತ ಮೆಚ್ಚಿ ಚುನಾವಣೆಯಲ್ಲಿ ಬಿ​ಜೆಪಿ ಬೆಂಬ​ಲಿ​ಸು​ತ್ತಿ​ದ್ದೇ​ನೆಯೇ ಹೊ​ರತು ಯಾ​ವುದೋ ಒಂದು ಪ​ಕ್ಷ​ವನ್ನು ಟಾರ್ಗೆಟ್‌ ಮಾಡಿಕೊಂಡು ಮುಗಿಸಲು ನಾನು ಬಂದಿಲ್ಲ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌ ಸ್ಪಷ್ಟಪಡಿಸಿದರು.

ಮಂಡ್ಯ (ಮೇ.8) : ಪ್ರ​ಧಾನಮಂತ್ರಿ ನ​ರೇಂದ್ರ ​ಮೋ​ದಿ ಆ​ಡ​ಳಿತ ಮೆಚ್ಚಿ ಚುನಾವಣೆಯಲ್ಲಿ ಬಿ​ಜೆಪಿ ಬೆಂಬ​ಲಿ​ಸು​ತ್ತಿ​ದ್ದೇ​ನೆಯೇ ಹೊ​ರತು ಯಾ​ವುದೋ ಒಂದು ಪ​ಕ್ಷ​ವನ್ನು ಟಾರ್ಗೆಟ್‌ ಮಾಡಿಕೊಂಡು ಮುಗಿಸಲು ನಾನು ಬಂದಿಲ್ಲ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌(Sumalata ambarish) ಸ್ಪಷ್ಟಪಡಿಸಿದರು.

ಜಿಲ್ಲಾ ಬಿ​ಜೆಪಿ ವಿ​ಕಾಸ ಭ​ವ​ನ​ದ​ಲ್ಲಿ ನ​ಡೆದ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತನಾಡಿ, ಪ​ಕ್ಷದ ಶಿಸ್ತು, ಬ​ದ್ಧತೆ, ಕಾರ್ಯವೈಖರಿ ಮೆಚ್ಚಿ ಬಿ​ಜೆಪಿ ಬೆಂಬ​ಲಿ​ಸು​ತ್ತಿ​ದ್ದೇನೆ. ಯಾವುದೇ ಪಕ್ಷವನ್ನು ಗುರಿಯಾಗಿಸಿಕೊಂಡು ದ್ವೇಷ ರಾಜಕಾರಣ ನಾನೆಂದಿಗೂ ಮಾಡುವುದಿಲ್ಲ ಎಂದು ಪ್ರ​ಶ್ನೆ​ಯೊಂದಕ್ಕೆ ಉ​ತ್ತ​ರಿ​ಸಿ​ದರು.

Latest Videos

ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಇರಲಿಲ್ಲ: ಸುಮಲತಾ ಅಂಬರೀಶ್‌ 

ವಿ​ಪ​ಕ್ಷ​ಗಳು ಕಂಗಾಲು:

ಪ್ರ​ಧಾನಿ ಮೋ​ದಿ​(PM Narendra Modi) ಬೆಂಗ​ಳೂರು ಸೇ​ರಿ​ದಂತೆ ರಾ​ಜ್ಯದ ವಿ​ವಿ​ಧೆ​ಡೆ​ಗ​ಳಲ್ಲಿ ನ​ಡೆ​ಸು​ತ್ತಿ​ರುವ ರೋಡ್‌ ಶೋ (Narendra Modi roadshow) ಹಾಗೂ ಪ್ರ​ಚಾ​ರ​ದಿಂದ ವಿ​ರೋಧ ಪಕ್ಷ​ಗಳು ಕಂಗಾ​ಲಾ​ಗಿವೆ. ಈ ಕಾರಣದಿಂದ ಅ​ವರ ಪ್ರ​ಚಾರ ಕಾ​ರ‍್ಯ​ವನ್ನು ಟೀ​ಕಿ​ಸು​ತ್ತಿವೆ ಎಂದು ವಾ​ಗ್ದಾಳಿ ನ​ಡೆ​ಸಿ​ದರು.

ರಾಕ್‌ಸ್ಟಾರ್‌, ಸಿ​ನಿಮಾ ನ​ಟರು ಬಂದರೂ ಸ್ವ ಇ​ಚ್ಚೆಯಿಂದ ಇಷ್ಟುಪ್ರ​ಮಾ​ಣದ ಜನ ಬ​ರು​ವು​ದಿಲ್ಲ. ಆ​ದರೆ, ವಿಶ್ವ ಮೆ​ಚ್ಚಿದ ಒಬ್ಬ ಮೋ​ದಿ​ಯ​ವ​ರಿಗೆ ಇ​ಷ್ಟೊಂದು ಜ​ನ​ಸಾ​ಗರ ಹ​ರಿ​ದು​ಬ​ರು​ತ್ತಿ​ರು​ವು​ದ​ರಿಂದ ವಿ​ರೋಧ ಪ​ಕ್ಷ​ಗ​ಳಿಗೆ ನ​ಡುಕ ಉಂಟಾ​ಗಿದೆ ಎಂ​ದರು.

ಕ​ಳೆದ ಆರು ತಿಂಗಳ ಹಿಂದಿನ ಸ​ಮೀ​ಕ್ಷೆಗೂ ನಿನ್ನೆ ಮೊನ್ನೆ ನ​ಡೆದ ಸ​ಮೀ​ಕ್ಷೆಗೂ ಭಾರೀ ವ್ಯ​ತ್ಯಾ​ಸ​ ಕಾ​ಣು​ತ್ತಿ​ದ್ದೇವೆ. ಮೋ​ದಿ ಪ್ರ​ಚಾರ ಕಾ​ರ‍್ಯ​ದಿಂದಾಗಿ 18 ಸ್ಥಾ​ನ​ಗಳು ರಾಜ್ಯದಲ್ಲಿ ಹೆ​ಚ್ಚಾ​ಗ​ಲಿವೆ ಎಂದು ಸ​ಮೀ​ಕ್ಷೆ​ಗಳು ತಿ​ಳಿ​ಸಿವೆ. ಇದು ಸ​ಹ​ಜ​ವಾಗಿ ವಿ​ಪ​ಕ್ಷ​ಗ​ಳಿಗೆ ಆ​ತಂಕ ತಂದೊ​ಡ್ಡಿದೆ ಎಂದರು.

ನೊಂದವರ ಸಮಸ್ಯೆಗಳಿಗೆ ಸ್ಪಂದನೆ ಮುಖ್ಯ:

ಅ​ತಿ​ವೃಷ್ಟಿವೇಳೆ ಪ್ರ​ಧಾ​ನಿ​ಯಂತಹ ಹು​ದ್ದೆ​ಯ​ಲ್ಲಿ​ರು​ವ​ವರು ಸ್ಥ​ಳಕ್ಕೆ ಬ​ರ​ಬೇ​ಕೆಂದೇನೂ ಇಲ್ಲ. ಆಡಳಿತ ನಡೆಸುವವರು ನೊಂದ​ವ​ರ ಸ​ಮ​ಸ್ಯೆ​ಗ​ಳಿಗೆ ಸ್ಪಂದಿ​ಸು​ವುದು ಅ​ಗತ್ಯ. ಮನೆ ಕ​ಳೆ​ದು​ಕೊಂಡ​ವ​ರಿಗೆ, ಹಾ​ನಿ​ಗೊ​ಳ​ಗಾ​ದ​ವ​ರಿಗೆ 1 ಲಕ್ಷ ರು. ನಿಂದ 5 ಲ​ಕ್ಷ​ ರು.​ವ​ರೆಗೂ ಪ​ರಿ​ಹಾರ ನೀ​ಡ​ಲಾ​ಗಿದೆ. ಇಂತಹ ಕಾ​ರ‍್ಯ​ಗಳು ಸ​ಮ​ರೋ​ಪಾ​ದಿ​ಯಲ್ಲಿ ನ​ಡೆ​ಯ​ಬೇಕೋ ಅ​ಥವಾ ಅ​ವರು ಖುದ್ದು ಭೇಟಿ ನೀಡಿ ಭ​ರ​ವಸೆ ನೀಡಿ ಹೋ​ಗು​ವುದು ಮು​ಖ್ಯವೋ ಎಂದು ಪ್ರ​ಶ್ನಿ​ಸಿದರು.

ಅಂಬರೀಶ್‌ಗೊಂದು ಸ್ಮಾರಕ ನಿರ್ಮಿಸಲಿಲ್ಲ: ಎಚ್‌ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

ಡ​ಬಲ್‌ ಎಂಜಿನ್‌ ಸರ್ಕಾರ​ಗಳ ಜ​ನ​ಪರ ಕಾ​ರ‍್ಯ​ಗ​ಳಿಂದಾಗಿ ಜನ ಬಿ​ಜೆ​ಪಿ​ಯತ್ತ ಮುಖ ಮಾ​ಡಿ​ದ್ದಾರೆ. ಈ ಬಾರಿ ಜಿ​ಲ್ಲೆ​ಯಲ್ಲೂ ಸಹ ನಿ​ರೀ​ಕ್ಷೆಗೂ ಮೀ​ರಿದ ಫ​ಲಿ​ತಾಂಶ ಬ​ರುವ ಸಾ​ಧ್ಯ​ತೆ​ಗ​ಳಿ​ವೆ. ಈ ಚು​ನಾ​ವಣೆ ಮುಂದಿನ ಲೋ​ಕ​ಸಭಾ ಚು​ನಾ​ವ​ಣೆಗೆ ದಿ​ಕ್ಸೂ​ಚಿ​ಯಾ​ಗ​ಲಿದೆ ಎಂ​ದ​ರು.

ಜಿಲ್ಲಾ ಉ​ಸ್ತು​ವಾರಿ ಜ​ಗ​ದೀಶ್‌ ಹಿ​ರೇ​ಮನಿ, ಅ​ಭ್ಯರ್ಥಿ ಅ​ಶೋಕ್‌ ಜ​ಯರಾಂ, ಬಿ​ಜೆಪಿ ರಾಜ್ಯ ಕಾ​ರ‍್ಯ​ಕಾ​ರಿಣಿ ಸ​ದಸ್ಯ ಡಾ.ಸಿ​ದ್ದ​ರಾ​ಮಯ್ಯ, ಮಂಡ್ಯ ಉ​ಸ್ತು​ವಾರಿ ಈ.​ಸಿ.​ನಿಂಗ​ರಾಜ್‌​ಗೌಡ, ಪ.ನಾ. ಸು​ರೇಶ್‌, ನಾ​ಗಾ​ನಂದ್‌ ಗೋ​ಷ್ಠಿ​ಯ​ಲ್ಲಿ​ದ್ದರು.

click me!