ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ಗಡ್ಡದ ಬಗ್ಗೆ ಮಾತಾಡಿ 130ರಿಂದ 67 ಸ್ಥಾನಕ್ಕೆ ಬಿದ್ದರು. ಈಗ ನನ್ನ ಕೂದಲಿನ ಬಗ್ಗೆ ಮಾತಾಡಿ 26 ರಿಂದ 6 ಸ್ಥಾನಕ್ಕೆ ಕುಸಿಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮೈಸೂರು (ಮೇ 28): ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚನಾವಣೆಗೂ ಮೊದಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಡ್ಡದ ಬಗ್ಗೆ ಮಾತನಾಡಿ 130 ಸ್ಥಾನಗಳಿಂದ 67 ಸ್ಥಾನಕ್ಕೆ ಕುಸಿದಿದ್ದೀರಿ. ಈಗ ಲೋಕಸಭಾ ಚುನಾವಣೆಯ ವೇಳೆ ನನ್ನ ಕೂದಲಿನ ಬಗ್ಗೆ ಮಾತನಾಡಿ 26 ಲೋಕಸಭಾ ಸ್ಥಾನದಿಂದ 6 ಸ್ಥಾನಕ್ಕೆ ಕುಸಿಯುತ್ತೀರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರಿಗೆ ಟೀಕೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿ, ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಡಿಸಿಎಂ ಡಿ.ಕೆ. ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ 130 ರಿಂದ 67ಕ್ಕೆ ಬಂದರು. ಈಗ ಲೋಕಸಭಾ ಚುನಾವಣೆಯಲ್ಲಿ ನನ್ನ ಕೂದಲಿನ ಬಗ್ಗೆ ಮಾತಾಡಿ 26 ಸಂಸದ ಸ್ಥಾನದಿಂದ 6 ಸ್ಥಾಕಕ್ಕೆ ಕುಸಿಯುತ್ತಾರೆ ನೋಡಿ. ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಬಿಜೆಪಿ ಅವರು ಮಾತಾಡಿದ್ರಾ? ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ? ಎಂದು ಕಿಡಿಕಾರಿದ್ದಾರೆ.
undefined
ನಂಗೆ ಹೇರ್ ಕಟ್ ಮಾಡೋರು ಫ್ರೀಯಿಲ್ಲ, ವಿಜಯೇಂದ್ರ ಬಂದು ಕಟಿಂಗ್ ಮಾಡಲಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ
ಕೆಲ ಮಕ್ಕಳು ನಮ್ಮ ಶಿಕ್ಷಣ ಸಚಿವರು ಒಳ್ಳೇ ಸ್ಟೈಲ್ ಹೇರ್ ಸ್ಟೈಲ್ ನಲ್ಲಿದ್ದಾರೆ ನಮಗ್ಯಾಕೆ ಆ ಥರ ಸ್ಟೈಲ್ ನಲ್ಲಿ ಬಿಡೋಕೆ ಅವಕಾಶ ಇಲ್ಲ ಅಂತಾ ಕೇಳುತ್ತಾರೆ ಏನೂ ಮಾಡಲಿ ಹೇಳಿ? ರಾಜ್ಯದಲ್ಲಿ ಶೇ.40% ಕಮಿಷನ್ ಪಡೆದಿರುವ ಅವರಿಗೆ ಹೇರ್ ಕಟ್ ಮಾಡುವ ಸ್ಥಿತಿ ಏನೂ ಬಂದಿಲ್ಲ. ಹೇರ್ ಕಟ್ ಮಾಡಲು ಅದು ಯಾರು ಬರುತ್ತಾರೋ ಅವರು ನಾನು ಟೈಂ ಕೊಟ್ಟಾಗ ಬರಲಿ. ಅವರ ತಜ್ಞತೆ ನೋಡಿ ಆ ಕೆಲಸ ಕೊಡುತ್ತೇನೆ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿ ಇಲ್ಲ.
ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಹೇರ್ ಕಟ್ ಮಾಡಿಸಿ ಸಂಸ್ಕಾರ ಕಲಿಸಿ: ರವಿಕುಮಾರ್
ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ. ನನ್ನ ತಂದೆ ನನಗೆ ಒಳ್ಳೆ ಬುದ್ದಿ ಕಲಿಸಿದ್ದಾರೆ. ನನ್ನ ಹೇರ್ ಸ್ಟೈಲ್ ಬಗ್ಗೆ ನನ್ನ ತಂದೆಗೆ ಬಹಳ ಪ್ರೀತಿ ಇತ್ತು. ನನಗೆ ಅವರೇ ಸ್ಪೂರ್ತಿ. ಇವರು ಯಾರೋ ಮಾತು ನಾನು ಕೇಳಲ್ಲ. ಜೂನ್ 4ರ ನಂತರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ವಿಜಯೇಂದ್ರ ಅವರಿಗೆ ಬೇರೆಯದೆ ಕೆಲಸ ಕೊಡ್ತೀನಿ. ನನ್ನ ತಂದೆ ನಾನು ಹೇರ್ ಕಟ್ ಮಾಡಿಸಿದಾಗ ಎರೆಡು ವಾರ ನನ್ನ ಜೊತೆ ಮಾತನಾಡರಿಲಿಲ್ಲ ಎಂದು ತನ್ನ ಕೇಶ ವಿನ್ಯಾಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.