ಜೂನ್ 4ಕ್ಕೆ ಕಾಂಗ್ರೆಸ್‌ನ ಹಣೆಬರಹ ಗೊತ್ತಾಗಲಿದೆ ಎಂಬ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಅವರ ಹಣೆಬರಹವನ್ನು ನೋಡಿಕೊಳ್ಳಲಿ. ಹಣೆಬರಹವನ್ನು ಅವರು ನಮ್ಮ ನಾವು ನೋಡಿಕೊಳ್ಳುತ್ತೇವೆ. ಇಷ್ಟು ವರ್ಷ ಬಿಜೆಪಿ ಮಾಡಿದ ಹೊಲಸನ್ನು ನಾವು ಸರಿ ಮಾಡುತ್ತಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಬಿಜೆಪಿಯ ಹಣೆಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲಾಗಿಲ್ಲ, ನಾವು ಬಂದ ನಂತರ ನೇಮಕಾತಿ ನಡೆದಿದೆ. ಮೊದಲಿನಿಂದಲೂ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡುತ್ತಿದೆ ಎಂದ ಮಧು ಬಂಗಾರಪ್ಪ
ಚಿತ್ರದುರ್ಗ(ಮೇ.28): 'ನನಗೆ ಹೇರ್ ಕಟಿಂಗ್ ಮಾಡುವವರು ಬಿಜಿ ಇದ್ದಾರೆ. ಹಾಗಾಗಿ, ವಿಜಯೇಂದ್ರ ಅವರು ಫ್ರೀ ಇದ್ದಲ್ಲಿ ಬಂದು ನನಗೆ ಹೆರ್ ಕಟಿಂಗ್ ಮಾಡಲಿ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವರಾಗಿರುವ ಶಿಕ್ಷಣ ಮಧು ಬಂಗಾರಪ್ಪ ಅವರು ಹೇರ್ ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು, ತಲೆ ಬಾಚಿಕೊಂಡು ಬರಲಿ ಎಂದು ವಿಜಯೇಂದ್ರ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಚಿತ್ರದುರ್ಗದಲ್ಲಿ ತಿರುಗೇಟು ನೀಡಿದ ಸಚಿವರು, ವಿಜಯೇಂದ್ರ ಅವರು ಫ್ರೀ ಇದ್ದಲ್ಲಿ ಬಂದು ನನಗೆ ಹೆರ್ ಕಟಿಂಗ್ ಮಾಡಲಿ ಎಂದು ಹೇಳಿದ್ದಾರೆ.
ಸಂಸದ ಪ್ರತಾಪ ಸಿಂಹಗೆ ಟಿಕೆಟ್ ಕೈತಪ್ಪಲು ಕಾರಣ ಯಾರು? ಕೊನೆಗೂ ಸತ್ಯ ಬಿಚ್ಚಿಟ್ಟ ವಿಜಯೇಂದ್ರ!
ಭ್ರಮೆಯಿಂದ ಅವರು ಹೊರ ಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನುಮಾಡಬೇಕೆಂಬ ಬಗ್ಗೆ ಅವರು ಯೋಚಿಸಲಿ ಎಂದರು. ಜೂನ್ 4ಕ್ಕೆ ಕಾಂಗ್ರೆಸ್‌ನ ಹಣೆಬರಹ ಗೊತ್ತಾಗಲಿದೆಎಂಬವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಅವರ ಹಣೆಬರಹವನ್ನು ನೋಡಿಕೊಳ್ಳಲಿ. ಹಣೆಬರಹವನ್ನು ಅವರು ನಮ್ಮ ನಾವು ನೋಡಿಕೊಳ್ಳುತ್ತೇವೆ. ಇಷ್ಟು ವರ್ಷ ಬಿಜೆಪಿ ಮಾಡಿದ ಹೊಲಸನ್ನು ನಾವು ಸರಿ ಮಾಡುತ್ತಿದ್ದೇವೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಬಿಜೆಪಿಯ ಹಣೆಬರಹಕ್ಕೆ ಶಿಕ್ಷಕರ ನೇಮಕಾತಿ ಮಾಡಲಾಗಿಲ್ಲ, ನಾವು ಬಂದ ನಂತರ ನೇಮಕಾತಿ ನಡೆದಿದೆ. ಮೊದಲಿನಿಂದಲೂ ಶಿಕ್ಷಣಕ್ಕೆ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.