Kalaburagi: ಬಿಜೆಪಿಯವರು ದಲಿತ ವಿರೋಧಿ: ಸಿದ್ದರಾಮಯ್ಯ ವಾಗ್ದಾಳಿ

By Girish Goudar  |  First Published May 21, 2022, 10:37 AM IST

*   ನಾನು ಸಿಎಂ ಆಗಿದ್ದಾಗ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗೆ ನೀಡಿದ ಹಣ 30 ಸಾವಿರ ಕೋಟಿ
*  ಬಿಜೆಪಿಯ ಬಿಎಸ್‌ವೈ, ಶೆಟ್ಟರ್‌, ಸದಾನಂದಗೌಡ ಕಾಲದಲ್ಲಿ ಕೊಟ್ಟಿದ್ದು 28,234 ಕೋಟಿ
*  ಈಗಿನ ಬಜೆಟ್‌ ಗಾತ್ರ ನೋಡಿದ್ರೆ 40 ಸಾವಿರ ಕೋಟಿ ರು. ಹಣ ಇದಕ್ಕೆ ಮೀಸಲಿರಬೇಕಿತ್ತು
 


ಕಲಬುರಗಿ(ಮೇ.21):  ತಮ್ಮನ್ನು ದಲಿತ ವಿರೋಧಿ ಎಂದು ಟೀಕಿಸಿರುವ ಬಿಜೆಪಿ ನಾಯಕರ ಹೇಳಿಕೆಗಳು ರಾಜಕೀಯ ಷಡ್ಯಂತ್ರದಿಂದ ಕೂಡಿವೆ ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ, ದಲಿತರ ಪರವಾದಂತಹ ಯೋಜನೆಗಳು ಯಾವ ನಾಯಕರ ಕಾಲದಲ್ಲಿ ಅದೆಷ್ಟು ಜಾರಿಗೊಂಡಿವೆ, ಅದೆಷ್ಟು ಅನುದಾನ ಬಿಡುಗಡೆಯಾಗಿದೆ ಎಂಬುದನ್ನು ಸಾರಿ ಹೇಳುವ ಶ್ವೇತಪತ್ರ ಬಿಜೆಪಿ ಹೊರಡಿಸಲಿ, ನಾನೂ ಹೊರಡಿಸುತ್ತೇನೆಂದು ಎಂದು ಸವಾಲು ಹಾಕಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುವಾಗ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಉಪಹಾರಕ್ಕೆಂದು ತಂಗಿದ್ದ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ತತ್ವಸಿದ್ಧಾಂತಗಳು, ಅಲ್ಲಿರುವ ನಾಯಕರುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

Belagavi: ಆರ್‌ಎಸ್ಎಸ್ ಮುಖ್ಯಸ್ಥ ಹೆಡ್ಗೆವಾರ್ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸೋರೆ': ಎಂಎಲ್‌ಸಿ ರವಿಕುಮಾರ್

ಎಸ್ಸಿಪಿ- ಟಿಎಸ್ಪಿ ಕಾನೂನು ಮಾಡಿದವ್ರು ಯಾರ್ರಿ? ಬಡ್ತಿ ಮೀಸಲಾತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬದಿಗೆ ಸರಿಸಿ ಮೀಸಲಾತಿ ನೀಡಿದವ್ರು ಯಾರ್ರಿ? ಗುತ್ತಿಗೆಯಲ್ಲೂ ಮೀಸಲಾತಿ ನೀತಿ ಜಾರಿಗೆ ತಂದವ್ರು ಯಾರ್ರಿ? ಇದೇ ಸಿದ್ದರಾಮಯ್ಯ ಇವನ್ನೆಲ್ಲ ಜಾರಿಗೆ ತಂದವನು. ಜನಸಂಖ್ಯೆಗನುಗುಣವಾಗಿ ಎಸ್ಸಿಪಿ-ಟಿಎಸ್ಪಿಗೆ ಹಣ ಮೀಸಲಿರಬೇಕು ಅಂತ ಕಾನೂನು ನಾನೇ ತಂದವನು. ಹೀಗಿದ್ದರೂ ರಾಜಕೀಯ ಕಾರಣಗಳಿಗಾಗಿ ನನ್ನನ್ನ ದಲಿತ ವರೋಧಿ ಅಂತ ಸಂಚು ಮಾಡುವ ಹೇಳಿಕೆ ಕೊಡುತ್ತಿದ್ದಾರೆಂದು ಬಿಜೆಪಿ ನಾಯಕರನ್ನು ಜರಿದರು.

ವಿಶೇಷ ಘಟಕ ಯೋಜನೆ (ಎಸ್‌ಸಿಪಿ), ಬುಡಕಟ್ಟು ಅಭಿವೃದ್ಧಿ ಯೋಜನೆ (ಟಿಎಸ್‌ಪಿ)ಗಳಿಗೆ ನಾನು ಸಿಎಂ ಆಗಿದ್ದಾಗ ಇದ್ದಂತಹ 2 ಲಕ್ಷ 2 ಸಾವಿರ ಕೋಟಿ ರು. ಬಜೆಟ್‌ ಗಾತ್ರದ ಮಿತಿಯಲ್ಲೇ ಅತೀ ಹೆಚ್ಚು 30 ಸಾವಿರ ಕೋಟಿ ರು. ಅನುದಾನ ಮೀಸಲಿಟ್ಟಿದ್ದೆ, ಬಿಜೆಪಿಯ ಶೆಟ್ಟರ್‌, ಸದಾನಂದಗೌಡ, ಯಡಿಯೂರಪ್ಪ ಸಿಎಂ ಆದಾಗ ಬಜೆಟ್‌ ಗಾತ್ರ 2,65,722 ಸಾವಿರ ಕೋಟಿ ರು. ಇದ್ದರೂ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಗಳಿಗೆ ಕೊಟ್ಟಿದ್ದು ಕೇವಲ 28,234 ಕೋಟಿ ರು. ಮಾತ್ರ, ಅವರು ಮಂಡಿಸಿದ ಬಜೆಟ್‌ ಗಾತ್ರಕ್ಕೆ ಅನುಗುವಾಗಿ ಅಂದಾಜು 40 ಸಾವಿರ ಕೋಟಿ ರು. ಆದರೂ ಈ ಯೋಜನೆಗಳಿಗೆ ಮೀಸಲಿಡಬೇಕಿತ್ತು, ಇಡಲಿಲ್ಲ ಯಾಕೆ? ಯಾರು ದಲಿತ ವಿರೋಧಿ ಎಂದು ನೀವೇ ಹೇಳಿ? ಎಂದು ಸುದ್ದಿಗಾರರಿಗೇ ಸಿದ್ದರಾಮಯ್ಯ ಪಾಟಿ ಸವಾಲು ಎಸೆದರು.

ಬಿಜೆಪಿಯವ್ರು ಎಸ್ಸಿಪಿ- ಟಿಎಸ್ಪಿಗೆ ಮೊದಲೇ ಕಡಿಮೆ ಹಣ ಇಟ್ಟಿದ್ದಾರೆ, ಅದರಲ್ಲೇ ಮತ್ತೆ ಅನ್ಯ ಯೋಜನೆಗಳಿಗೆ ಇದೇ ಹಣ ಮರು ಹೊಂದಾಣಿಕೆ ಮಾಡುತ್ತಿದ್ದಾರೆ. ಇದು ದಲಿತರಿಗೆ ಬಿಜೆಪಿ ಮಾಡುತ್ತಿರುವ ಅನ್ಯಾಯವಲ್ಲವೆ? 7,885 ಕೋಟಿ ರು. ಮರು ಹೊಂದಾಣಿಕೆ ಮಾಡಿ ಅನ್ಯ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಹೀಗೆ ಮಾಡಿದರೆ ಹೇಗೆ? ಹೀಗೆ ಮಾಡಿದವರು ದಲಿತ ವಿರೋಧಿಗಳೋ, ಹೆಚ್ಚಿಗೆ ಹಣ ಮೀಸಲಿಟ್ಟು ಯೋಜನೆ ರೂಪಿಸಿದವರು ದಲಿತ ವಿರೋಧಿಗಳೋ? ಇದೆಲ್ಲ ಜನಕ್ಕೆ ಗೊತ್ತಿದೆ ಎಂದರು.

PSI Recruitment Scam: ಕಿಂಗ್‌ಪಿನ್‌ ಸರ್ಕಾರದ ಒಳಗೂ ಇರಬಹುದು: ಪ್ರಿಯಾಂಕ್‌ ಖರ್ಗೆ

ಭಗತ್‌ಸಿಂಗ್‌, ನಾರಾಯಣ ಗುರುಗಳ ಪಾಠ ಯಾಕೆ ಬೇಡ? ನಾವು ಹೋರಾಟ ಮಾಡಿದ ಮೇಲೆ ಭಗತ್‌ಸಿಂಗ್‌ ಪಾಠ ಪುನಃ ಸೇರಿಸಿದ್ದಾರೆ. ಹೀಗೆಲ್ಲಾ ಪಠ್ಯದ ವಿಚಾರದಲ್ಲಿ ರಾಜಕೀಯ ಬೇಡ. ನಾವು ಎಡ- ಬಲ ಎಂದು ರಾಷ್ಟ್ರೀಯ ವಾದದ ವಿಚಾರದಲ್ಲಿ ವ್ಯತ್ಯಾಸ ಎಣಿಸೋಲ್ಲ, ಬಿಜೆಪಿ ಕೂಡಾ ಆ ಕೆಲಸಕ್ಕೆ ಮುಂದಾಗೋದು ಬೇಡ, ನಾವು ಅದಕ್ಕೆ ಅನುಮತಿಸೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸ್ವಾತಂತ್ರ್ಯ ಸಮರದಲ್ಲಿ ಹೆಡಗೇವಾರ್‌ ಪಾತ್ರ ಏನು?

ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಯಾಪೈಸೆಯಷ್ಟು ಕೊಡುಗೆ ನೀಡದ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆಯಲ್ಲ, 1930ರಲ್ಲಿ ಆರ್‌ಎಸ್‌ಎಸ್‌ ಹುಟ್ಟಿದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಸಂಘಟನೆಯ ಪಾತ್ರ ಏನಿದೆ? ಹೆಡಗೇವಾರ್‌ ಆಗಿದ್ದರೂ ಯಾಕೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲಿಲ್ಲ? ಎಂದು ಸಿದ್ದು ಪ್ರಶ್ನಿಸಿದರು.

ನಾಥೂರಾಮ್‌ ಗೋಡ್ಸೆ, ಹೆಗಡೆವಾರ್‌ ಅವರ ಪೂಜೆ ಸಂಘ ಪರಿವಾರದಲ್ಲಿ ಮಾಡಲಿ. ಅದನ್ನೆಲ್ಲ ಶಾಲಾ ಮಕ್ಕಳಿಗೆ ಯಾಕೆ ಪಠ್ಯವಾಗಿ ಮಾಡಬೇಕು? ಇದ್ಯಾವ ಅನಿವಾರ್ಯತೆ? ಹೀಗಾಗಿ ನಾವು ಶಾಲಾ ಪಠ್ಯದಲ್ಲಿ ನಿಜವಾದ ಹೋರಾಟಗಾರು, ಅವರ ತ್ಯಾಗ- ಬಲಿದಾನದ ವಿವರ ಇರಲಿ, ಅದು ಮಕ್ಕಳಿಗೆ ಪಾಠವಾಗಬಾರದು. ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಭಗತ್‌ ಸಿಂಗ್‌, ಝಾನ್ಸಿ ರಾಣಿಯರಂತಹ ಹೋರಾಗಾರರ ಪಾಠ ಮಕ್ಕಳು ಓದುವಂತಾಗಲಿ ಎಂದರು. ಹೆಡಗೆವಾರ್‌ ಕೂಡಾ ಗೋಡ್ಸೆ ತರಹದ ವ್ಯಕ್ತಿ ಅಂತವರಾ? ಎಂಬ ಪ್ರಶ್ನೆಗೆ ಏನನ್ನೂ ಹೇಳದಿದ್ದರೂ ಗೋಡ್ಸೆ ಯಾರ್ರಿ? ಸಂಘ ಪರಿವಾರದವರಲ್ಲವೆ? ಸಂಘ ಪರಿವಾರ ಹೆಡಗೆವಾರ್‌ ಅವರಿಗೆ ಗೌರವ ತಮ್ಮ ಕಚೇರಿಗಳಲ್ಲಿ ಸಲ್ಲಿಸಲಿ, ನಾವು ಅದನ್ನ ವಿರೋಧಿಸಿಲ್ಲ, ಶಾಲಾ ಪಠ್ಯ ವಿಚಾರ ಬಂದಾಗ ನಾವು ಧ್ವನಿ ಎತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
 

click me!