Karnataka Cabinet Expansion: ಬೊಮ್ಮಾಯಿ ಸಂಪುಟ ಸರ್ಜರಿ ನಡೆಯೋದೆ ಡೌಟ್‌?

By Girish Goudar  |  First Published May 21, 2022, 7:47 AM IST

*   ಚುನಾವಣೆ ವೇಳೆ ಅನಗತ್ಯವಾಗಿ ಗೊಂದಲಗಳು ಸೃಷ್ಟಿಯಾಗುವ ಚಿಂತೆ
*   ಸಾಲು ಸಾಲು ಚುನಾವಣೆ ಹಿನ್ನೆಲೆಯಲ್ಲಿ ಕಸರತ್ತು ಕೈಬಿಡುವ ಸಾಧ್ಯತೆ
*   ಸುಪ್ರೀಂ ಆದೇಶ ಹಿನ್ನೆಲೆ: ಸೆಪ್ಟೆಂಬರ್‌ಗೆ ಬಿಬಿಎಂಪಿ ಚುನಾವಣೆ?
 


ಬೆಂಗಳೂರು(ಮೇ.21): ಸಾಲು ಸಾಲು ಚುನಾವಣೆಗಳು ಎದುರಾಗುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉದ್ದೇಶಿತ ಸಂಪುಟ ಸರ್ಜರಿ ನಡೆಯುವುದೇ ಎಂಬ ಅನುಮಾನ ಶುರುವಾಗಿದೆ.

ಈಗಾಗಲೇ ರಾಜ್ಯಸಭೆಯ 4 ಸ್ಥಾನ, ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನ ಹಾಗೂ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕ ಕ್ಷೇತ್ರಗಳ ಚುನಾವಣೆ ಈಗ ಘೋಷಣೆಯಾಗಿದೆ. ಇದೇ ವೇಳೆ ಮುಂದಿನ 8 ವಾರದಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಸುಪ್ರೀಂಕೋರ್ಚ್‌ ಸೂಚಿಸಿದೆ. ಇಷ್ಟರಲ್ಲೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಘೋಷಣೆ ಬಗ್ಗೆಯೂ ಸ್ಪಷ್ಟಚಿತ್ರಣ ಹೊರಬೀಳುವ ಸಂಭವವಿದೆ. ಹೀಗಿರುವಾಗ ಸಂಪುಟ ಸರ್ಜರಿ ಕೈಗೊಂಡು ಅದರಿಂದ ಉಂಟಾಗಬಹುದಾದ ಭಿನ್ನಮತವನ್ನು ಆಡಳಿತಾರೂಢ ಬಿಜೆಪಿ ಮೈಮೇಲೆ ಎಳೆದುಕೊಳ್ಳುತ್ತದೆಯೇ ಎಂಬುದು ಅನುಮಾನವಾಗಿದೆ.

Tap to resize

Latest Videos

Karnataka Politics: ಹಣ ಕೊಟ್ಟು ಸಚಿವರಾಗುವ ಸ್ಥಿತಿ ನಮ್ಮ ಪಕ್ಷದಲ್ಲಿಲ್ಲ: ಸಚಿವ ಸುನೀಲ್‌

ಶಾಸಕರಿಗೂ ಆತಂಕ:

ಮುಂಬರುವ ಸಾರ್ವತ್ರಿಕ ಚುನಾವಣೆಗೆ ಇನ್ನೂ ಹತ್ತು ತಿಂಗಳು ಬಾಕಿಯಿದೆ. ಈ ಎಲ್ಲ ಚುನಾವಣೆಗಳು ಮುಗಿದ ಬಳಿಕ ಸಂಪುಟ ಸರ್ಜರಿ ಕೈಗೊಂಡರೂ ಶಾಸಕರು ಹೆಚ್ಚು ಆಸಕ್ತಿಯನ್ನೇ ತೋರಲಿಕ್ಕಿಲ್ಲ. ಅವರ ಗಮನವೆಲ್ಲ ಮುಂದಿನ ಚುನಾವಣೆಯಲ್ಲಿ ತಮ್ಮ ಕ್ಷೇತ್ರವನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರತ್ತಲೇ ಇರುತ್ತದೆ. ಚುನಾವಣೆ ಸಮೀಪಿಸಿದ ವೇಳೆ ಸಚಿವರಾಗುವುದರಿಂದ ಅಂಥ ಉಪಯೋಗವೇನೂ ಆಗುವುದಿಲ್ಲ. ಮೇಲಾಗಿ ಈಗ ಸಚಿವರಾದರೆ ಮುಂದೆ ಪಕ್ಷ ಮತ್ತೊಮ್ಮೆ ಸರ್ಕಾರ ರಚಿಸುವ ಸನ್ನಿವೇಶ ನಿರ್ಮಾಣವಾದರೆ ಆಗ ಸಚಿವ ಸ್ಥಾನ ಕೇಳುವ ಅರ್ಹತೆಯೂ ಕಳೆದುಕೊಳ್ಳಬಹುದು ಎಂಬ ಆತಂಕ ಶಾಸಕರಲ್ಲಿದೆ.

ಬರೀ ವಿಸ್ತರಣೆ ಮಾತ್ರ ಮಾಡಲು ಚಿಂತನೆ:

ಈ ಮೊದಲಿನ ನಿಲವಿನ ಪ್ರಕಾರ ಸಂಪುಟದಲ್ಲಿರುವ ಕೆಲವು ಹಾಲಿ ಸಚಿವರವನ್ನು ಕೈಬಿಟ್ಟು ಈಗ ಖಾಲಿ ಇರುವ ಐದು ಸ್ಥಾನಗಳ ಜತೆಗೆ ಎಂಟರಿಂದ ಹತ್ತು ಮಂದಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಆದರೆ, ಸಾಲು ಸಾಲು ಚುನಾವಣೆಗಳನ್ನು ಇಟ್ಟುಕೊಂಡು ಹಾಲಿ ಸಚಿವರನ್ನು ಕೈಬಿಡುವಂಥ ಕ್ರಮ ಕೈಗೊಂಡಲ್ಲಿ ಅದರಿಂದ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ನಷ್ಟವೇ ಸಂಭವಿಸಬಹುದು. ಅದರ ಬದಲು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ಕೇವಲ ವಿಸ್ತರಣೆಯನ್ನಷ್ಟೇ ಮಾಡಿದರೆ ಸಾಕಾಗಬಹುದು ಎಂಬ ಚಿಂತನೆಯೂ ನಡೆಯುತ್ತಿದೆ ಎನ್ನಲಾಗಿದೆ.

Karnataka Cabinet Expansion: ಇನ್ನೂ 1 ತಿಂಗಳು ಸಚಿವ ಸಂಪುಟ ಕಸರತ್ತು ಇಲ್ಲ?

ನಾಳೆಯಿಂದ 5 ದಿನ ಸಿಎಂ ಮೊತ್ತ ಮೊದಲ ವಿದೇಶ ಪ್ರವಾಸ

ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟು ಐದು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಯಾಕೆ ಅನುಮಾನ?

- ರಾಜ್ಯಸಭೆ, ವಿಧಾನ ಪರಿಷತ್‌ ಚುನಾವಣೆ ಈಗಾಗಲೇ ಘೋಷಣೆ
- ಸುಪ್ರೀಂ ಆದೇಶ ಹಿನ್ನೆಲೆ: ಸೆಪ್ಟೆಂಬರ್‌ಗೆ ಬಿಬಿಎಂಪಿ ಚುನಾವಣೆ?
- ಸದ್ಯದಲ್ಲೇ ಜಿಪಂ, ತಾಪಂ ಚುನಾವಣೆಯ ಕುರಿತು ಸ್ಪಷ್ಟಚಿತ್ರಣ
- ಇದೆಲ್ಲ ಪ್ರಕ್ರಿಯೆ ಮುಗಿಯುವಾಗ ವರ್ಷಾಂತ್ಯ ಆಗುವ ಸಂಭವ
- ಮುಂದಿನ ವರ್ಷದ ಮಾರ್ಚ್‌, ಏಪ್ರಿಲಲ್ಲಿ ವಿಧಾನಸಭೆ ಚುನಾವಣೆ
- ಸಾಲು ಸಾಲು ಚುನಾವಣೆಗಳ ಕಾರಣಕ್ಕೆ ಸಂಪುಟ ಕಸರತ್ತು ಡೌಟು
 

click me!