ರೈತರ ಸಮಸ್ಯೆಗೆ ಬಿಜೆಪಿ ಸರ್ಕಾರ ಸ್ಪಂದಿಸುತಿಲ್ಲ: ಕುಮಾರಸ್ವಾಮಿ

Published : Dec 09, 2022, 10:00 PM IST
ರೈತರ ಸಮಸ್ಯೆಗೆ ಬಿಜೆಪಿ ಸರ್ಕಾರ ಸ್ಪಂದಿಸುತಿಲ್ಲ: ಕುಮಾರಸ್ವಾಮಿ

ಸಾರಾಂಶ

ದೇವೆಗೌಡರಿಗೆ ಶಕ್ತಿ ತುಂಬಿದ ಜಿಲ್ಲೆಗಳು ಹಾಸನ ಮತ್ತು ಕಲಬುರಗಿ ಈ ಜಿಲ್ಲೆಗಳ ರೈತರ ಕಲ್ಯಾಣಕ್ಕಾಗಿ ದೇವೆಗೌಡರು ನೀರಾವರಿ ಯೋಜನೆಗಳನ್ನು ತಂದಿದ್ದಾರೆ: ಎಚ್‌ಡಿಕೆ 

ಅಫಜಲ್ಪುರ(ಡಿ.09):  ಜನ ಸಾಮಾನ್ಯರ ನಾಡಿಮಿಡಿತವನ್ನು ಅರಿತ ಶಿವಕುಮಾರ ನಾಟೀಕಾರ ಅವರಿಗೆ ಬೆಂಬಲಿಸಿ. ವಿಠ್ಠಲ ಹೆರೂರ ನಂತರ ಅವರ ನಾಯಕತ್ವವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬಲ್ಲ ಶಿವಕುಮಾರಗೆ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಪಟ್ಟಣದ ಜಹಾಗೀರದಾರ ಮೈದಾನದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ದೇವೆಗೌಡರಿಗೆ ಶಕ್ತಿ ತುಂಬಿದ ಜಿಲ್ಲೆಗಳು ಹಾಸನ ಮತ್ತು ಕಲಬುರಗಿ ಈ ಜಿಲ್ಲೆಗಳ ರೈತರ ಕಲ್ಯಾಣಕ್ಕಾಗಿ ದೇವೆಗೌಡರು ನೀರಾವರಿ ಯೋಜನೆಗಳನ್ನು ತಂದಿದ್ದಾರೆ. ಮೈತ್ರಿ ಸರಕಾರವನ್ನು ವಾಮ ಮಾರ್ಗದಿಂದ ಅಧಿಕಾರದ ಹಪ ಹಪಿಗಾಗಿ ಕೆಡವಿದ ಬಿಜೆಪಿ, ಮೂರುವರೆ ವರ್ಷದಲ್ಲಿ ಯಾವುದೇ ರೀತಿಯಾಗಿ ರೈತರ ಕಲ್ಯಾಣಕ್ಕಾಗಿ ಮುಂದಾಗಿಲ್ಲ ಎಂದರು.

ಕಲಬುರಗಿ: ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಉಸ್ತುವಾರಿ ಸಚಿವ ನಿರಾಣಿ: ಬಿ.ಆರ್‌. ಪಾಟೀಲ್‌

ದಿನ ಬೆಳಗಾದರೆ ರೈತರ ಪ್ರತಿಭಟನೆ ನಡೆಯುತ್ತಿವೆ. ರೈತರ ಸಮಸ್ಯೆಗಳಿಗೆ ರಾಜ್ಯ ಬಿಜೆಪಿ ಸರಕಾರ ಸ್ಪಂದಿಸುತ್ತಿಲ್ಲ, ಇಂತಹವರಿಗೆ ನಿವು ಬೆಂಬಲ ನೀಡಬೇಡಿ. ಕರ್ನಾಟಕದಲ್ಲಿ ಅಪೌಷ್ಟಿಕತೆಯಿಂದಾಗಿ ಶಿಶು ಮರಣ ಹೆಚ್ಚಾಗಿದೆ. ಅದನ್ನು ಖುದ್ದು ಆರೋಗ್ಯ ಸಚಿವರೆ ಚರ್ಚಿಸಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗಗಳನ್ನು ನೀಡುವಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಹಿಂದುಳಿದ ರಾಜ್ಯವಾಗಿದೆ ಎಂದು ಕೇಂದ್ರ ಸರಕಾರದ ವರದಿ ನೀಡಿದೆ. ನಮ್ಮ ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲು ಜನತಾದಳಕ್ಕೆ ಬೆಂಬಲಿಸಬೇಕು. ಬಿಜೆಪಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದ್ದಾರೆ ಹೊರತು ಇಲ್ಲಿನ ಜನರಿಗೆ ಕಲ್ಯಾಣ ಮಾಡಿಲ್ಲ. ಎಂದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ ಬಿಜೆಪಿ, ಕಾಂಗ್ರೆಸ್‌ ಜೆಡಿಎಸ್‌ಗೆ ಇರುವ ವ್ಯತ್ಯಾಸವೆಂದರೆ ಅವರು ಹಣ ನೀಡಿ ಜನರನ್ನು ತರುತ್ತಾರೆ. ನಮಗೆ ಜನ ಬೆಂಬಲಿಸಿ ಬರುತ್ತಾರೆ ಅಷ್ಟೆ. ಕಾಂಗ್ರೆಸ್‌ ಹಾಗೂ ಬಿಜೆಪಿಯವರು ಗಳಿಸಿದ ಹಣವು ಜನರ ಒಳ್ಳೆಯದಕ್ಕಾಗಿ ಖರ್ಚಾಗಿಲ್ಲ. ಅದು ಕೋರ್ಚ್‌ಗಾಗಿ ಖರ್ಚಾಗಿದೆ. ಆದರೆ ಇಲ್ಲಿಯವರೆಗೆ ಜೆಡಿಎಸ್‌ ಪಕ್ಷದವರ ಮೇಲೆ ಒಂದು ಕೇಸ್‌ ಇಲ್ಲ ನಮ್ಮದು ಸೈದ್ದಾಂತಿಕ ರಾಜಕಾರಣ. ಪಂಚರತ್ನ ಯೋಜನೆಗಳ ಮುಖಾಂತರ ಜನರ ಕಷ್ಟಗಳನ್ನು ಕಳೆಯಲು ಮುಂದಾಗಿದ್ದೇವೆಂದರು.

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಮಾಜಿ ಸಚಿವ ಬಂಡೆಪ್ಪ ಕಾಶಂಪೂರೆ ಮಾತನಾಡಿ ನಮ್ಮ ಮಕ್ಕಳ ಮುಂದಿನ ಜೀವನಕ್ಕಾಗಿ ಜೆಡಿಎಸ್‌ಗೆ ಬೆಂಬಲಿಸಬೇಕು. ಮತಗಟ್ಟೆಗೆ ಹೋಗುವ ಮುನ್ನ ಕುಮಾರಸ್ವಾಮಿ ಮಾಡಿರುವ ಕಾರ್ಯಗಳು ಹಾಗೂ ಇನ್ನುಳಿದ ನಾಯಕರನ್ನು ನೋಡಿ ಮತ ಹಾಕಬೇಕು ಎಂದರು.

ಜೆಡಿಎಸ್‌ನ ಜಿಲ್ಲಾಧ್ಯಕ್ಷ ಸುರೇಶ ಮಹಾಗಾಂವಕರ್‌, ಜೆಡಿಎಸ್‌ ತಾಲೂಕಾಧ್ಯಕ್ಷ ಜಮೀಲ ಗೌಂಡಿ, ಶಿವಕುಮಾರ ನಾಟೀಕಾರ, ಕೇದಾರಲಿಂಗಯ್ಯ ಹಿರೇಮಠ, ನಾಸೀರ್‌ ಹುಸೇನ್‌ ಉಸ್ತಾದ, ಬಿ.ಡಿ.ಪಾಟೀಲ್‌ ಹಂಜಗಿ, ಶಿವಾನಂದ ಪಾಟೀಲ್‌, ಬಾಲರಾಜ ಗುತ್ತೇದಾರ, ಎನ್‌.ಎಂ.ರ್ನೂ ಅಹ್ಮದ, ಮಹೇಶ್ವರಿ ವಾಲೆ, ಸಂಜೀವನ ಯಾಕಾಪೂರ, ಕೃಷ್ಣಾ ರೆಡ್ಡಿ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ