ಎರಡೂ ರಾಜ್ಯಗಳ ಬಿಜೆಪಿ ನಾಯಕರು ವಿಷಯವನ್ನ ಡೈವರ್ಟ್ ಮಾಡ್ತಿದ್ದಾರೆ. ಕರ್ನಾಟಕ ಬಿಜೆಪಿ, ಮಾಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ: ಕುಮಾರಸ್ವಾಮಿ
ಹುಬ್ಬಳ್ಳಿ(ಡಿ.09): ಜೆಡಿಎಸ್ ಪಂಚರತ್ನ ಯಾತ್ರೆ ಹೋದ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಜನೆವರಿ 3 ರಿಂದ ಬೀದರ್ ಭಾಗದಿಂದ ಕಾರ್ಯಕ್ರಮ ಆರಂಭವಾಗುತ್ತದೆ. ನಾನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಭಾಗಿಯಾಗಲ್ಲ. ಫೆಬ್ರುವರಿ ತಿಂಗಳಲ್ಲಿ ಬೆಳಗಾವಿ ಭಾಗದಲ್ಲಿ ಪಂಚರತ್ನ ಕಾರ್ಯಕ್ರಮ ಆರಂಭವಾಗುತ್ತದೆ. ಪಂಚರತ್ನ ಯಾತ್ರೆಗೆ ಸಮಯ ನಿಗದಿಯಾಗಿದೆ. ಹಾಗಾಗಿ ಈ ಬಾರಿ ಅಧಿವೇಶನದಲ್ಲಿ ನಾನು ಭಾಗವಹಿಸುತ್ತಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ಬಂಡೆಪ್ಪ ಕಾಶಂಪೂರ ಅವರು ಸಮಸ್ಯೆ ಬಗ್ಗೆ ಮಾತನಾಡುತ್ತಾರೆ ಅಂತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು(ಶುಕ್ರವಾರ) ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಕೇವಲ ಘೋಷಣೆಗೆ ಸೀಮಿತವಾಗಿದೆ. ಬರೀ ಸಿಹಿ ಸುದ್ದಿ, ಹುಳಿ ಸುದ್ದಿ ಅಂತಾರೆ. ಕೇವಲ ಬರೀ ದೊಡ್ಡ ಘೋಷಣೆ ಮಾಡುವುದು ಇವರ ಕೆಲಸವಾಗಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಟಿಆರ್‌ಎಸ್ ಈಗ ಅಧಿಕೃತವಾಗಿ ಬಿಆರ್‌ಎಸ್, ರಾಜ್ಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ!
ಬೆಳಗಾವಿ ಗಡಿ ವಿವಾದ ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಎರಡೂ ರಾಜ್ಯಗಳ ಬಿಜೆಪಿ ನಾಯಕರು ವಿಷಯವನ್ನ ಡೈವರ್ಟ್ ಮಾಡ್ತಿದ್ದಾರೆ. ಕರ್ನಾಟಕ ಬಿಜೆಪಿ, ಮಾಹಾರಾಷ್ಟ್ರ ಬಿಜೆಪಿ ನಾಯಕರು ವಿಷಯ ಡೈವರ್ಟ್ ಮಾಡುತ್ತಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯವಾಗಿದೆ ಅಂತ ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಷಯ ಬೇಕಾಗಿಲ್ಲ, ಒಬ್ಬರು ಅತ್ತ ಹಾಗೆ ಮಾಡು, ಒಬ್ಬರು ಹೊಡದಂಗೆ ಮಾಡೋ ಹಾಗಿದೆ. ನಾವು ಈ ಬಾರಿ 123 ರಿಂದ 130 ಸೀಟ್ ಗೆಲ್ತೀವಿ. ರಾಜ್ಯದ ಯಾವ ಪಕ್ಷದ ನಾಯಕರು ನನ್ನ ಸಂಪರ್ಕದಲ್ಲಿ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
Pancharatna Rathayatra: ಶಿರಾದಲ್ಲಿ ಕೊತ್ತಂಬರಿ ಸೊಪ್ಪು ಹಾರ ಹಾಕಿ ಎಚ್‌ಡಿಕೆಗೆ ಸ್ವಾಗತ
ಸಿದ್ದರಾಮಯ್ಯ ಬಸ್ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲಿಂದಲೋ ಸ್ಟಾರ್ಟ್ ಮಾಡಲಿ. ಅದು ಅವರ ಅವರ ಪಕ್ಷದ ವಿಚಾರವಾಗಿದೆ. ನಾನು ಯಾಕೆ ಚರ್ಚೆ ಮಾಡಲಿ ಅಂತ ಗರಂ ಆಗಿ ಉತ್ತರಿಸಿದ್ದಾರೆ.
ಕೆಸಿಆರ್ ನಮಗೆ ಬೆಂಬಲ ಕೊಡ್ತಿದಾರೆ. ಕುಮಾರಸ್ವಾಮಿ ಸಿಎಂ ಆಗಲು ಗಡಿ ಭಾಗದಲ್ಲಿ ನಮಗೆ ಸಪೋರ್ಟ್ ಮಾಡ್ತಿದಾರೆ. ಅವರ ಪಕ್ಷದ ಶಾಸಕರು ನಮಗೆ ಬೆಂಬಲ ಕೊಡ್ತೀನಿ ಎಂದಿದ್ದಾರೆ ಅಂತ ತಿಳಿಸಿದ್ದಾರೆ.
ಜನಾದರ್ನ ರೆಡ್ಡಿ ಜತೆ ಮಾತುಕತೆ ಆಗಿಲ್ಲ. ಯಾರ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಅನ್ನೋ ಗುರಿ ಇದೆ. ಗುಜರಾತ್ ಮಾಡೆಲ್ಲ ಇಲ್ಲಿ ವರ್ಕೌಟ್ ಆಗಲ್ಲ ಎಂದು ಹೇಳಿದ್ದಾರೆ.