ರಾಜ್ಯ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ಕೊಡಗಿನಲ್ಲಿ ಮತದಾರರನ್ನು ಸೆಳೆಯಲು ಸಿದ್ಧತೆ ನಡೆಯುತ್ತಿದೆ. ಜೊತೆಗೆ ಹೇಗಾದರೂ ಮಾಡಿ ಮತ್ತೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದಲ್ಲಿ ಕೊಡಗಿನ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು (ಡಿ.9): ರಾಜ್ಯ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ಕೊಡಗಿನಲ್ಲಿ ಮತದಾರರನ್ನು ಸೆಳೆಯಲು ಸಿದ್ಧತೆ ನಡೆಯುತ್ತಿದೆ. ಜೊತೆಗೆ ಹೇಗಾದರೂ ಮಾಡಿ ಮತ್ತೆ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲದಲ್ಲಿ ಕೊಡಗಿನ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆಯಲು ಅನುಕೂಲವಾದ ಪೇಜ್ ಪ್ಲಾನ್ ಅನ್ನು ಕೊಡಗಿನಲ್ಲೂ ಬಿಜೆಪಿ ಮಾಡಿದೆ. ಹಾಗಾದರೆ ಏನದು ಬಿಜೆಪಿಯ ಪೇಜ್ ಪ್ಲಾನ್. ಆ ಪೇಜ್ ಪ್ಲಾನ್ ಬಗ್ಗೆ ಮಡಿಕೇರಿಯ ಬಿಜೆಪಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ಬಿಚ್ಚಿಟ್ಟಿದ್ದಾರೆ. ಪ್ರತಿ ಬೂತ್ ಮಟ್ಟದಿಂದಲೇ ವಾಟ್ಸಾಪ್ ಗಳ ಮೂಲಕ ಗ್ರೂಪುಗಳನ್ನು ಮಾಡಲಾಗಿದೆ. ಪ್ರತೀ ಬೂತ್ ಮಟ್ಟದಲ್ಲಿ ಸಾವಿರ ಮತಗಳಿದ್ದರೆ, ಅದರಲ್ಲಿ 80 ಜನರು ಗುಂಪಿನಲ್ಲಿ ಪಕ್ಷದ ಪ್ರಮುಖರು ಇರುತ್ತಾರೆ. ಅವರೆಲ್ಲರೂ ಪ್ರತೀ ಮತದರಾರರ ಮನೆಗಳನ್ನು ಸಂಪರ್ಕಿಸಿ ಮತದಾರರಿಗೆ ಪಕ್ಷದ ಬಗ್ಗೆ ಅರಿವು ಮೂಡಿಸಿ, ಸರ್ಕಾರದ ಸಾಧನೆ ವಿವರಿಸಲಿದ್ದಾರೆ. ಒಂದು ಗ್ರಾಮದಲ್ಲಿ 200 ಮನೆಗಳಿವೆ ಇವೆ ಎಂದರೆ ಅದರಲ್ಲಿ 80 ಪ್ರಮುಖರು ಪೇಜ್ ಗ್ರೂಪಿನಲ್ಲಿ ಇರಲಿದ್ದಾರೆ. ಇದೇ ರೀತಿಯ ವರ್ಕೌಟ್ ಜಿಲ್ಲೆಯ ಪ್ರತೀ ಬೂತ್‍ಮಟ್ಟದಲ್ಲೂ ನಡೆಯಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
undefined
ಇದಲ್ಲದೆ ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಮಂಡಲಗಳ ಸಭೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರನ್ನು ಸಿದ್ದಗೊಳಿಸುತ್ತಿದೆ. ಮಡಿಕೇರಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಮಡಿಕೇರಿ ಗ್ರಾಮಾಂತರ ಮಂಡಲದ ಸಭೆ ನಡೆಯಿತು. ಸಭೆಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಬ್ಬರು ಭಾಗವಹಿಸಿ ಸರ್ಕಾರದ ಸಾಧನೆಗಳು, ವಿವಿಧ ಕೆಲಸಗಳನ್ನು ಜನರಿಗೆ ಸಮರ್ಥವಾಗಿ ತಿಳಿಸಿ ಮನವರಿಕೆ ಮಾಡಿಕೊಡುವಂತೆ ಹೇಳಿದರು.
ಉಚ್ಚಾಟಿತ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಕಾಂಗ್ರೆಸ್ ಬಾಗಿಲು ಕೂಡಾ ಬಂದ್
ಇನ್ನು ಜಿಲ್ಲೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡುವ ಮುನ್ಸೂಚನೆಯನ್ನು ಶಾಸಕ ಅಪ್ಪಚ್ಚು ರಂಜನ್ ನೀಡಿದ್ದಾರೆ. ಪಕ್ಷದಲ್ಲಿ ಗೆಲ್ಲುವ ಶಾಸಕರ ಬಗ್ಗೆ ಈಗಾಗಲೇ ನಾಲ್ಕು ಹಂತದಲ್ಲಿ ಸರ್ವೆ ಮಾಡಲಾಗಿದೆ. ನಾಲ್ಕು ಸರ್ವೆಗಳಲ್ಲಿ ಗೆಲ್ಲುವ ವರದಿ ದೊರೆತ್ತಿರುವ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗಿದೆ. ಈ ದೃಷ್ಟಿಯಿಚಿದ ಕೊಡಗಿನ ಇಬ್ಬರು ಹಾಲಿ ಶಾಸಕರು ನಾಲ್ಕು ಸರ್ವೆ ಪರೀಕ್ಷೆಗಳಲ್ಲಿ ಪಾಸ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಮತ್ತೆ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದೆ. ಟಿಕೆಟ್‍ಗಾಗಿ ಮತ್ತೆ ನೀವು ಆಕಾಂಕ್ಷಿಗಳಾ ಎಂದು ಕೇಳಿದರೆ ಇಬ್ಬರು ಶಾಸಕರು ಈ ಬಗ್ಗೆ ಬಾಯಿಬಿಟ್ಟಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬೋಪಯ್ಯ, ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿ ಎಂಬ ಸಂಸ್ಕೃತಿ ಇಲ್ಲ. ಬದಲಾಗಿ ಪಕ್ಷದಲ್ಲಿ 21 ವರ್ಷ ಪೂರೈಸಿರುವ ಯಾವುದೇ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಸಿಗಬಹುದು. ಅದರಂತೆ ಪಕ್ಷದ ನಿರ್ಧಾರವೇ ಅಂತಿಮವಾಗಿರುತ್ತದೆ.
ಜನಾರ್ಧನ ರೆಡ್ಡಿ ಜತೆಗಿನ ಸ್ನೇಹ ರಾಜಕೀಯ ಹೊರತಾದದ್ದು: ಸಚಿವ ಶ್ರೀರಾಮುಲು
ಆದರೆ ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಪೂರ್ವಭಾವಿಯಾಗಿ ಸಿದ್ಧತೆ ನಡೆಸಿದ್ದೇವೆ. ಪಕ್ಷದ ಚುನಾವಣೆಗೆ ಸನ್ನದ್ಧವಾಗಿದೆ ಎಂದಿದ್ದಾರೆ. ಗುಜರಾತಿನಲ್ಲಿ ಹಿರಿಯ ಶಾಸಕರಿಗೆ ಟಿಕೆಟ್ ನೀಡದೆ, ಹೊಸಮುಖಗಳಿಗೆ ಮಣೆ ಹಾಕಿರುವ ರೀತಿಯಲ್ಲಿಯೇ ರಾಜ್ಯದಲ್ಲೂ ಆಗುವ ಸಾಧ್ಯತೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ ಅವರು ಹಿರಿಯರನ್ನು ಕೈಬಿಡಬೇಕು, ಟಿಕೆಟ್ ಕೊಡಬೇಕು ಎನ್ನುವ ವಿಷಯಗಳಿಗೆ ಪ್ರತಿಕ್ರಿಯಿಸಿದ ಅವರು ಅದೆಲ್ಲವನ್ನು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಪಕ್ಷವು ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ ಎಚಿದು ಹೇಳಿದ್ದಾರೆ. ಒಟ್ಟಿನಲ್ಲಿ ಕೊಡಗು ಬಿಜೆಪಿ ಪಾಳಯವು ಗುಜರಾತ್ ಮಾದರಿಯಲ್ಲಿ ಚುನಾವಣೆ ಗೆಲುವಿಗೆ ಕಾರ್ಯಸೂಚಿ ಸಿದ್ದಮಾಡಿಕೊಂಡಿದ್ದು, ಅದರಂತೆ ಕೆಲಸ ಮಾಡುತ್ತಿದ್ದು, ಚುನಾವಣಾ ಕಾವು ರಂಗೇರುತ್ತಿರುವ್ಯದಂತು ಸತ್ಯ.