ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಸಹಿ ಮಾಡಿ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ಕೊಟ್ಟಿದ್ದಾರೆ. ಹಳ್ಳಿಗಳಲ್ಲಿ ಇವತ್ತು ಹೆಣ್ಣುಮಕ್ಕಳು ಗ್ಯಾರಂಟಿ ಕಾರ್ಡ್‌ಗಳನ್ನು ಟ್ರಂಕ್‌ಗಳಲ್ಲಿ, ಬ್ಯಾಗ್‌ಗಳಲ್ಲಿ ಇಟ್ಟುಕೊಂಡು ಸೌಲಭ್ಯಕ್ಕೆ ಕಾಯುತ್ತಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿ 2 ತಿಂಗಳಾದರೂ ಯಾವುದೇ ಭರವಸೆಗಳನ್ನು ಪೂರ್ತಿಯಾಗಿ ಈಡೇರಿಸಿಲ್ಲ. ಷರತ್ತುಗಳನ್ನು ವಿಧಿಸಿರುವ ಕಾಂಗ್ರೆಸ್‌ನವರು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದ ಎ.ಎಸ್.ಪಾಟೀಲ ನಡಹಳ್ಳಿ
ಮುದ್ದೇಬಿಹಾಳ(ಜು.05): ರಾಜ್ಯದ ಆರೂವರೆ ಕೋಟಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನ್ಮುಂದೆ ಸುಳ್ಳರಾಮಯ್ಯ ಎಂದು ಕರೆಯೋಣ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವವರೆಗೂ ಹೋರಾಟ ನಡೆಸೋಣ. ಈ ಕುರಿತು ನಡೆಯಲಿರುವ ಜನಪರ ಹೋರಾಟವನ್ನು ಹಳ್ಳಿಹಳ್ಳಿಗಳಿಗೆ, ಓಣಿ ಓಣಿಗಳಿಗೆ ತೆಗೆದುಕೊಂಡು ಹೋಗೋಣ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಸಹಿ ಮಾಡಿ ಗ್ಯಾರಂಟಿ ಕಾರ್ಡ್‌ಗಳನ್ನು ಮನೆ ಮನೆಗೆ ಕೊಟ್ಟಿದ್ದಾರೆ. ಹಳ್ಳಿಗಳಲ್ಲಿ ಇವತ್ತು ಹೆಣ್ಣುಮಕ್ಕಳು ಗ್ಯಾರಂಟಿ ಕಾರ್ಡ್‌ಗಳನ್ನು ಟ್ರಂಕ್‌ಗಳಲ್ಲಿ, ಬ್ಯಾಗ್‌ಗಳಲ್ಲಿ ಇಟ್ಟುಕೊಂಡು ಸೌಲಭ್ಯಕ್ಕೆ ಕಾಯುತ್ತಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿ 2 ತಿಂಗಳಾದರೂ ಯಾವುದೇ ಭರವಸೆಗಳನ್ನು ಪೂರ್ತಿಯಾಗಿ ಈಡೇರಿಸಿಲ್ಲ. ಷರತ್ತುಗಳನ್ನು ವಿಧಿಸಿರುವ ಕಾಂಗ್ರೆಸ್‌ನವರು ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದರು.
ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್: ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ ವಾಗ್ದಾಳಿ
200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದ್ದರು. ಈಗ ಉಲ್ಟಾ ಹೊಡೆದು ಕಂಡೀಷನ್ ಹಾಕಿದ್ದಾರೆ. ಜೊತೆಗೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಯುನಿಟ್‌ಗೆ .4.15 ಇದ್ದ ದರವನ್ನು .7ಕ್ಕೆ ಏರಿಸಿದ್ದಾರೆ. ಬಳಕೆಯ ಆಧಾರದ ಮೇಲೆ ನಿಗದಿಪಡಿಸಿದ ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಹೆಚ್ಚುವರಿ ಬಳಕೆಗೆ .7ರಂತೆ ಬಿಲ್ ವಸೂಲಿ ಮಾಡುತ್ತಾರೆ. ಇದು ಜನರಿಗೆ ಮಾಡಿದ ದ್ರೋಹ. ಉಚಿತ ಎಂದು ಹೇಳಿ ವಿದ್ಯುತ್ ಬಿಲ್ ಏರಿಸಿದ್ದಕ್ಕೆ ಜನರು ಮೂರು ಪಟ್ಟು ಬಿಲ್ ಕಟ್ಟಬೇಕಿದೆ ಎಂದರು.
ಮನೆಯ ಯಜಮಾನಿಗೆ ಮಾಸಿಕ .2000 ಕೊಡುವುದಾಗಿ ಹೇಳಿದ್ದರು. ಆದರೆ, ಈಗ ಅತ್ತೆಗೆ ಕೊಡಬೇಕಾ? ಸೊಸೆಗೆ ಕೊಡಬೇಕಾ? ಎಂದು ಮನೆಯಲ್ಲಿ ಜಗಳ ಹಚ್ಚುತ್ತಿದ್ದಾರೆ. ವಯಸ್ಸಾದ ಅತ್ತೆ-ಮಾವ ಹಾಗೂ ತಂದೆ-ತಾಯಿ ಬೇರೊಂದು ಮನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ. ಮನೆ ಒಡೆಯುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ಬೇಗ ಮನೆಗೆ ಕಳಿಸುವ ಕೆಲಸವನ್ನು ಈ ನಾಡಿನ ಜನತೆ ಮಾಡಲಿದ್ದಾರೆ ಎಂದರು.
ಭಗತ್ ಸಿಂಗ್ ಹೆಸರು ಹೇಳಿಕೊಂಡು ಬಂದವರನ್ನೇ ಜೈಲಿಗೆ ಹಾಕ್ತಿರಾ?: ಎಂ.ಬಿ.ಪಾಟೀಲ್‌ಗೆ ಸೂಲಿಬೆಲೆ ತಿರುಗೇಟು
ಎಲ್ಲ ಪದವೀಧರರಿಗೆ, ಡಿಪ್ಲೊಮಾ ಆದವರಿಗೆ ಮಾಸಾಶನ ಕೊಡುವುದಾಗಿ ಹೇಳಿದ ಕಾಂಗ್ರೆಸ್ ಈಗ ಉಲ್ಟಾಹೊಡೆದಿದ್ದು, 2022-23ನೇ ಸಾಲಿನಲ್ಲಿ ಪದವಿ ಪೂರೈಸಿ 6 ತಿಂಗಳು ಕೆಲಸ ಸಿಗದೇ ಇದ್ದವರಿಗೆ ಮಾತ್ರ ಮಾಸಾಶನ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ. ಇವರ ಸುಳ್ಳು ಭರವಸೆ ನಂಬಿ ಓಟ್ ಹಾಕಿರುವ ಪದವೀಧರರು ಈಗ ಪೇಚಾಡುತ್ತಿದ್ದಾರೆ ಎಂದರು.
ಕೇಂದ್ರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ಲಸಿಕೆ ನೀಡಿ ಜನರ ಜೀವ ಉಳಿಸಿದಾಗ ಹಾಗೂ ಉಚಿತ ಪಡಿತರ ನೀಡಿದಾಗ ಅದೇ ರೀತಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಯಾವುದೇ ಕೆಲಸಕ್ಕೂ ಈ ರೀತಿ ಢೋಂಗಿ ಗ್ಯಾರಂಟಿ ನೀಡದೇ ಸಮರ್ಪಣಾ ಭಾವದಿಂದ ಕೆಲಸ ಮಾಡಲಾಗಿದೆ ಎಂದರು.