ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಯಾರಿಗೇ ಟಿಕೆಟ್ ನೀಡಲಿ. ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ಋಣ ತೀರಿಸುತ್ತೇನೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದ್ದಾರೆ.
ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜು.5): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷ ಯಾರಿಗೇ ಟಿಕೆಟ್ ನೀಡಲಿ ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಒಂದು ವೇಳೆ ನನಗೆ ಟಿಕೆಟ್ ನೀಡಿದರೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಜನರ ಋಣ ತೀರಿಸುತ್ತೇನೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಭಾವುಕರಾದರು.
ನಗರದ ಪಿಬಿ ರಸ್ತೆಯ ವಾಣಿಹೋಂಡಾ ಶೋರೂಂ ಆವರಣದಲ್ಲಿ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡು ಮಾತನಾಡಿದ ಅವರು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಈ ಬಾರಿಯ ಲೋಕಸಭಾ ಚುಮಾವಣೆಯಲ್ಲಿ ಪಕ್ಷ ಯಾರಿಗೆ ಟಿಕೇಟ್ ನೀಡಲಿ ತನುಮನ ಅರ್ಪಿಸಿ ಕೆಲಸ ಮಾಡುತ್ತೇನೆ ಎಂದರು. 1999 ರಿಂದ 2024 ರವರೆಗೆ ಸುಧೀರ್ಘ 7 ಅವಧಿಗೆ ಪಕ್ಷ ನಮ್ಮ ಕುಟುಂಬಕ್ಕೆ ಟಿಕೇಟ್ ನೀಡಿದೆ.ನಮ್ಮ ತಂದೆಯವರಾದ ಜಿ.ಮಲ್ಲಿಕಾರ್ಜುನಪ್ಪ ಅವರು 2 ಬಾರಿ ಸಂಸದರಾಗಿದ್ದಾರೆ ಅವರ ಮಾರ್ಗದರ್ಶನದಂತೆ ಸಂಸದ ಹೇಗಿರಬೇಕು ಹಾಗೂ ಕ್ಷೇತ್ರದಲ್ಲಿ ಯಾವ ರೀತಿ ಪ್ರವಾಸ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಅದೇ ರೀತಿ ಜನರ ಜೊತೆಗೆ ಬೇರೆತಿದ್ದೇನೆ ಎಂದು ಭಾವುಕರಾಗಿ ಸಮಾರಂಭದಲ್ಲೇ ಜನತೆಗೆ ಕೈಮುಗಿದರು.
Transfer Mafia: ಕಾಂಗ್ರೆಸ್ ವಿರುದ್ಧ ಪೆನ್‌ಡೈವ್ ದಾಖಲೆ ತೋರಿಸಿದ ಕುಮಾರಸ್ವಾಮಿ!
ಸಂಸದರಿಗೆ ವರ್ಷಕ್ಕೆ ಬರುವ ಅನುದಾನದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ವಿಶ್ವಮಾನವರಾದ ನರೇಂದ್ರ ಮೋದಿಯವರು ಮೂರನೇ ಬಾರಿಗೂ ಪ್ರಧಾನಿಯಾಗಲು ಜನತೆ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು. ಕೋವಿಡ್ ಸಮಯದಲ್ಲಿ ಮೋದಿಯವರು ಜನರ ಜೀವ ಉಳಿಸಿದ್ದಾರೆ. 80 ರಾಷ್ಟ್ರಗಳಿಗೆ ಉಚಿತ ವ್ಯಾಕ್ಸಿನ್ ಕಳಿಸಿದ್ದಾರೆ. ಕೃಷಿ ಸಮ್ಮಾನ್,ಕೃಷಿ ಸಿಂಚನ್, ಮುದ್ರಾಯೋಜನೆ, ಜನ್ ಧನ್, ಸಾಹಿಲ್ ಹೆಲ್ತ್ ಕಾರ್ಡ್ ಮೂಲಕ ಬಡವರು ರೈತರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಮಾಜಿ ಸಿಎಂಗಳಾದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ.
ಅಧಿಕಾರವಿಲ್ಲದೆ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿರುವ ಎಚ್‌ಡಿಕೆ:
ಚುನಾವಣೆ ವೇಳೆ ಜಿಲ್ಲೆಯ 7 ಕ್ಷೇತ್ರದಲ್ಲಿ ನಮ್ಮವರು ಸೋತಿದ್ದಾರೆ ಚುನಾವಣೆ ಎಂದ ಮೇಲೆ ಸೋಲು ಗೆಲುವು ಇದ್ದದ್ದೇ. ಸೋಲು ಎಂದು ಹಿಂಜರಿಯಬಾರದು ಮತ್ತೆ ಚುನಾವಣೆ ಬರಲಿದೆ ಮತ್ತೆ ಎಂದರು. ಬಿಜೆಪಿ ಪಕ್ಷ ಬೆಳೆಯಲು ಕಾರ್ಯಕರ್ತರು ಕಾರಣ ಇದನ್ನು ಮರೆಯುವಂತಿಲ್ಲ. ಕಾರ್ಯಕರ್ತರ ಪಡೆ ಬಿಜೆಪಿ. ನೂರಾಹನ್ನೊಂದು ಕೋಟಿ ಸದಸ್ಯರನ್ನು ಹೊಂದಿದ ಪಕ್ಷ ಬಿಜೆಪಿ. ಮುಂದಿನ ತಾ.ಪಂ, ಜಿ.ಪಂ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.