ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!

ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!

Published : Jul 16, 2026, 10:26 PM IST

ಬಿಡದಿ ಅಖಾಡದಲ್ಲಿ ಮದ್ದಾನೆಗಳ ಗುದ್ದಾಟ.. ಸವಾಲಿಗೆ ಸವಾಲ್! ಜೈಲಿಗೆ ಕಳುಹಿಸೋ ಹುನ್ನಾರ ‘‘ಸಿದ್ಧನಿದ್ದೇನೆ ಸಹೋದರ’’..! 36 ಎಕರೆ ಜಮೀನು.. ನನ್ನ ಕೆಣಕಬೇಡಿ.. ಡಿಕೆವಾರ್ನಿಂಗ್..! ಬಿಗಡಾಯಿಸಿದ ಬಿಡದಿ..

ಬಿಡದಿ ಅಖಾಡದಲ್ಲಿ ಮದ್ದಾನೆಗಳ ಗುದ್ದಾಟ.. ಸವಾಲಿಗೆ ಸವಾಲ್! ಜೈಲಿಗೆ ಕಳುಹಿಸೋ ಹುನ್ನಾರ ‘‘ಸಿದ್ಧನಿದ್ದೇನೆ ಸಹೋದರ’’..! 36 ಎಕರೆ ಜಮೀನು.. ನನ್ನ ಕೆಣಕಬೇಡಿ.. ಡಿಕೆವಾರ್ನಿಂಗ್..! ಬಿಗಡಾಯಿಸಿದ ಬಿಡದಿ ಭೂ ಯುದ್ಧಕ್ಕೆ 2 ತಿಂಗಳ ಬಿಡುವು..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ.. ಬಿಡದಿ ಅಖಾಡದಲ್ಲಿ ರಾಜಕೀಯ ಯುದ್ಧ ಶುರುವಾಗಿದೆ.. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಮಾತಿನ ಮಲ್ಲಯುದ್ಧ ನಡೆದಿದೆ.. ದಿಢೀರ್ ಅಂತ ಮಾಧ್ಯಮಗೋಷ್ಠಿ ನಡೆಸಿದ್ದ ಡಿ.ಕೆ.ಶಿವಕಮಾರ್ ಅವರು  ಹೆಚ್​ಡಿಕೆ ವಿರುದ್ಧ ಆರೋಪಗಳ ಮಳೆಯನ್ನೇ ಸುರಿಸಿದ್ರು. ಇದಾಗಿ ಕೆಲವೇ ಗಂಟೆಗಳು ಕಳೆದಿದ್ದವಷ್ಟೇ ಕುಮಾರಸ್ವಾಮಿಯವರು ಸಹ ಪ್ರೆಸ್​ಮಿಟ್ ಮಾಡಿ ಸಿಎಂ ವಿರುದ್ಧ ಮುಗಿಬಿದ್ದಿದ್ದಾರೆ.

ಇಬ್ಬರ ಮಧ್ಯೆಯೂ ಆರೋಪ-ಪ್ರತ್ಯಾರಾಪಗಳು ಜೋರಾಗಿವೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಕೂಡ ಡಿಕೆ ವಿರುದ್ಧ ಮುಗಿ ಬಿದ್ದಿದ್ದು, ಸಿಎಂ ಕಡೆಯಿಂದಲೂ ಅದಕ್ಕೆ ಕೌಂಟರ್ ಬಂದಿದೆ. ಬಿಡದಿ ಟೌನ್​ಶಿಪ್ ವಿಚಾರವಾಗಿ ರೈತರ ಪರವಾಗಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸ್ಬೇಕಾಗುತ್ತೆ ಎನ್ನುವ ಎಚ್ಚರಿಕೆಯ ಸಂದೇಶವನ್ನ ದೇವೇಗೌಡರು ರವಾನಿಸಿದ್ದರು. ಮಾಜಿ ಪ್ರಧಾನಿಗಳ ಈ ಎಚ್ಚರಿಕೆಯ ಮಾತಿಗೆ ಸಿಎಂ ಡಿಕೆ ತಮ್ಮದೇ ಶೈಲಿಯಲ್ಲಿ ಕುಟುಕಿದ್ದಾರೆ. ಇಷ್ಟೆಲ್ಲದರ ಮಧ್ಯೆ ಮತ್ತೆ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಬಿಡದಿ ಟೌನ್​ಶಿಪ್ ವಿಚಾರವಾಗಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಇಷ್ಟೆಲ್ಲದರ ನಡುವೆಯೂ ಮತ್ತೆ ನಾಲ್ಕು ಗ್ರಾಮಗಳ ಭೂ ಸ್ವಾಧೀನಕ್ಕೆ ಸರ್ಕಾರವು ಅಂತಿಮ ಅಧಿಸೂಚನೆಯನ್ನ ಹೊರಡಿಸಿದೆ.

21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
Read more