ರಾಜಸ್ಥಾನ ಸಚಿವರೊಬ್ಬರು ಸಚಿನ್ ಪೈಲಟ್ ಪರ ಬ್ಯಾಟ್ ಬೀಸಿದ್ದು, ಬಡ್ತಿ ಸನ್ನಿಹಿತವಾಗಬೇಕಿದೆ. ಇದಕ್ಕೆ ಪಕ್ಷ ಕಾಯುವ ಯಾವುದೇ ಅಗತ್ಯವಿಲ್ಲ, ಪಕ್ಷದ ನಾಯಕತ್ವವು ಶೀಘ್ರದಲ್ಲೇ ಅದನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ರಾಜಸ್ಥಾನ (Rajasthan) ಕಾಂಗ್ರೆಸ್‌ನಲ್ಲಿ (Congress) ಅಶೋಕ್ ಗೆಹ್ಲೋಟ್ (Ashok Gehlot) ಹಾಗೂ ಸಚಿನ್ ಪೈಲಟ್ (Sachin Pilot) ನಡುವಿನ ಮುಸುಕಿನ ಗುದ್ದಾಟ ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ರಾಜಸ್ಥಾನ ಮುಖ್ಯಮಂತ್ರಿಯಾಗಲು (Chief Minister) ಸಚಿನ್ ಪೈಲಟ್ ನಾನಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಲೇ ಇದೆ. ಈಗ ಸಚಿನ್ ಪೈಲಟ್ ತಂಡ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಪೈಲಟ್‌ಗೆ ಆಪ್ತರಾಗಿರುವ ರಾಜಸ್ಥಾನ ಸರ್ಕಾರದ ಸಚಿವರೊಬ್ಬರು (Minister) ಇಂದು, "ಸಚಿನ್ ಪೈಲಟ್‌ನಿಂದಾಗಿ ಪಕ್ಷವು ಅಧಿಕಾರಕ್ಕೆ ಬಂದಿತು; ಅವರು ಮಾಡಿದ ಕಠಿಣ ಪರಿಶ್ರಮವನ್ನು ಪರಿಗಣಿಸಿ, ಅವರಿಗೆ ಜವಾಬ್ದಾರಿಯನ್ನು ನೀಡಬೇಕು" ಎಂದು ಹೇಳಿದ್ದು, ಈ ಮೂಲಕ ಗೆಹ್ಲೋಟ್‌ರನ್ನು ಕೆಳಕ್ಕಿಳಿಸಿ ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಸಿಎಂ ಮಾಡಬೇಕೆಂದು ಅವರ ಪರ ಬ್ಯಾಟ್ ಬೀಸಿದ್ದಾರೆ.
ರಾಜಸ್ಥಾನ ಸಚಿವ ಹೇಮಾರಾಮ್ ಚೌಧರಿ (Hemaram Chaudhary), ಬಡ್ತಿ ಸನ್ನಿಹಿತವಾಗಬೇಕಿದೆ ಎಂದು ಹೇಳಿದ್ದು, ಇದಕ್ಕೆ ಪಕ್ಷ ಕಾಯುವ ಯಾವುದೇ ಅಗತ್ಯವಿಲ್ಲ, ಪಕ್ಷದ ನಾಯಕತ್ವವು ಶೀಘ್ರದಲ್ಲೇ ಅದನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಇದನ್ನು ಓದಿ: Rajasthan Political Crisis: ಪೈಲಟ್ ವಿಮಾನ ಮತ್ತೆ ಕ್ರ್ಯಾಶ್, ಅಶಕ್ತ ಹೈಕಮಾಂಡ್ ವಿರುದ್ಧ ಗೆಹ್ಲೋಟ್ ಗೇಮ್
ಸೆಪ್ಟೆಂಬರ್ ತಿಂಗಳಲ್ಲಿ ಪಕ್ಷದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದವರನ್ನು ಕಾಂಗ್ರೆಸ್ ಶಿಕ್ಷಿಸಬೇಕು ಎಂದು ಸಚಿನ್ ಪೈಲಟ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ನಿರ್ಧರಿಸಲು ನಡೆದ ಅಧಿಕೃತ ಸಭೆಗೆ ಹಾಜರಾಗಲು ಪಕ್ಷದ ಆದೇಶವನ್ನು ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಧಿಕ್ಕರಿಸಿದ್ದರು. ಅಲ್ಲದೆ, ಗೆಹ್ಲೋಟ್‌ಗೆ ನಿಷ್ಠರಾಗಿದ್ದ 90 ಶಾಸಕರು ಮುಖ್ಯಮಂತ್ರಿಯನ್ನು ಬದಲಾಯಿಸುವ ನಿರ್ಧಾರವನ್ನು ವಿರೋಧಿಸಿ, ಗೆಹ್ಲೋಟ್‌ಗೆ ಹತ್ತಿರವಾದ ಶಾಸಕರ ಸಭೆ ಕರೆದಿದ್ದರು.
ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಶೋಕ್ ಗೆಹ್ಲೋಟ್ ಪ್ರಧಾನಿ ಮೋದಿಯನ್ನು ಹೊಗಳಿದ್ದರು. ಈ ಹಿನ್ನೆಲೆ ಗೆಹ್ಲೋಟ್ ಬಿಜೆಪಿ ಪರವಾಗಿ ಹಾಗೂ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತಾರೆ ಎಂದೂ ಸಚಿನ್ ಪೈಲಟ್ ರಾಜಸ್ಥಾನ ಸಿಎಂ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಮೋದಿ, ಗೆಹ್ಲೋಟ್ ಪರಸ್ಪರ ಹೊಗಳಿಕೆ: Modi ವಿದೇಶಕ್ಕೆ ಹೋದಲ್ಲೆಲ್ಲ ಗೌರವ ಲಭಿಸುತ್ತದೆ ಎಂದ ಗೆಹ್ಲೋಟ್
ವಾಸ್ತವವಾಗಿ, ಗೆಹ್ಲೋಟ್ ಪ್ರಧಾನಿ ಮೋದಿಯ ಬಗ್ಗೆ ನಿರ್ದಿಷ್ಟವಾಗಿ ಶ್ಲಾಘಿಸಿರಲಿಲ್ಲ.. ಅದರ ಬದಲು, ಮಹಾತ್ಮ ಗಾಂಧಿಯವರ ದೇಶದ ಮುಖ್ಯಸ್ಥರಾಗಿರುವುದರಿಂದ ಪ್ರಧಾನಿಯ ಸ್ಥಾನಮಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ ಎಂದು ಹೇಳಿದ್ದರು. ಆದರೂ, ಸಾರ್ವಜನಿಕವಾಗಿ ಸಚಿನ್ ಪೈಲಟ್ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿ ಬೀಳುತ್ತಿರುವುದು ಅವರ ಹೆಚ್ಚುತ್ತಿರುವ ಚಡಪಡಿಕೆಯನ್ನು ತೋರಿಸುತ್ತದೆ. ಇನ್ನು, ಕಾಂಗ್ರೆಸ್ ಪಕ್ಷವನ್ನೇ ಧಿಕ್ಕರಿಸಿದ ಗೆಹ್ಲೋಟ್ ಹಾಗೂ ಅವರ ಬೆಂಬಲಿಗರಿಗೆ ಕಾಂಗ್ರೆಸ್ ಶಿಸ್ತಿನ ಪಾಠ ಮಾಡಬೇಕಿದೆ. ಮತ್ತೊಂದೆಡೆ, ಸಂಖ್ಯೆಗಳ ಆಟದಲ್ಲಿ ಸಚಿನ್ ಪೈಲಟ್‌ಗಿಂತ ಮುಖ್ಯಮಂತ್ರಿ ಗೆಹ್ಲೋಟ್ ಹೆಚ್ಚು ಶಾಸಕರನ್ನು ಹೊಂದಿರುವಂತೆ ಕಾಣುತ್ತದೆ. ಇದು ಸಹ ಸಿಎಂ ರನ್ನು ಬದಲಾಯಿಸುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ.
ಅಶೋಕ್ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಕಾಂಗ್ರೆಸ್‌ನ ಕಾರ್ಯಸೂಚಿಯನ್ನು ಉಲ್ಲಂಘಿಸಿ ರಾಜಸ್ಥಾನದಲ್ಲಿ ತಮ್ಮ ಸಭೆಯನ್ನು ಕರೆದಾಗ, ಅವರ ಧ್ಯೇಯವು ಸ್ಪಷ್ಟವಾಗಿತ್ತು. ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಗಿನ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ಒತ್ತಡಕ್ಕೊಳಗಾದ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರಾದರೆ ಸಚಿನ್ ಪೈಲಟ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯನ್ನಾಗಿ ಬದಲಾಯಿಸಬಾರದು ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: Rajasthanದಲ್ಲಿ ಅದಾನಿ 65000 ಕೋಟಿ ರೂ. ಹೂಡಿಕೆ: ಕೈಗೆ ಬಿಜೆಪಿ ಟಾಂಗ್
ಅಂತಿಮವಾಗಿ ರಾಜಸ್ಥಾನ ಸಿಎಂ ತಮ್ಮ ಬೆಂಬಲಿಗರ ಆ ವರ್ತನೆಗೆ ಕ್ಷಮೆಯಾಚಿಸಿದರೂ ಸಹ ಸೋನಿಯಾ ಗಾಂಧಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ. ಪಕ್ಷದ ನಿಯಮಗಳನ್ನು ಮೀರಿದರೆ ದಂಡ ವಿಧಿಸುವುದಾಗಿ ಕಾಂಗ್ರೆಸ್ ಎಚ್ಚರಿಸಿದ್ದರೂ, ಆ ರೀತಿ ಯಾವ ಕ್ರಮವನ್ನೂ ಕೈ ಪಕ್ಷ ಈವರೆಗೆ ಕೈಗೊಂಡಿಲ್ಲ.
ಈ ಮಧ್ಯೆ, ಇಂದು ಸಚಿನ್ ಪೈಲಟ್‌ಗಾಗಿ ಲಾಬಿ ಮಾಡಿದ ಪರಿಸರ ಸಚಿವ ಚೌಧರಿ, 2020 ರಲ್ಲಿ ರಾಜಸ್ಥಾನ ಸರ್ಕಾರದ ನಿಯಂತ್ರಣದಲ್ಲಿ ಬದಲಾವಣೆಯನ್ನು ಒತ್ತಾಯಿಸಲು ಪ್ರಯತ್ನಿಸಿದ ಸಚಿನ್ ಪೈಲಟ್ ಅವರ ಜತೆಯಲ್ಲಿದ್ದ ಶಾಸಕರ ಸಣ್ಣ ಗುಂಪಿನಲ್ಲಿ ಇವರೂ ಒಬ್ಬರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rajasthan Politicsನಲ್ಲಿ ಗೆಹ್ಲೋಟ್ ಶಕ್ತಿ ಎಂಥದ್ದು? ರಬ್ಬರ್‌ಸ್ಟಾಂಪ್ ಅಂದ್ಕೊಂಡ್ರೆ ರೆಬೆಲ್‌ಸ್ಟಾರ್ ಆದ್ರಲ್ಲಾ?