ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ರಾಹುಲ್ ಗಾಂಧಿ ಭಾಷಣ ಅನುವಾದಕ ಎಸ್ಕೇಪ್!

By Suvarna News  |  First Published Nov 21, 2022, 8:58 PM IST

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಚುನಾವಣಾ ರಾಜ್ಯ ಗುಜರಾತ್‌ನಲ್ಲಿ ಸಂಚರಿಸುತ್ತಿದೆ. ರಾಹುಲ್ ಗಾಂಧಿ ಭಾಷಣವನ್ನು ಹಿಂದಿಯಿಂದ ಗುಜರಾತ್‌ಗೆ ಅನುವಾದ ಮಾಡಲಾಗುತ್ತಿತ್ತು. ಆದರೆ ಭಾಷಣದ ಮಧ್ಯೆ ಅನುವಾದಕ ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ಇಳಿದು ಹೋದ ಘಟನೆ ನಡೆದಿದೆ.


ಅಹಮ್ಮದಾಬಾದ್(ನ.21): ಚುನಾವಣಾ ರಾಜ್ಯ ಗುಜರಾತ್‌ನಲ್ಲಿ ಭಾರಿ ಪ್ರಚಾರ ನಡೆಯುತ್ತಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಬೃಹತ್ ರ್ಯಾಲಿ ನಡೆಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಗುಜರಾತ್‌ನಲ್ಲಿ ಸಂಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಗುಜರಾತಿ ರ್ಯಾಲಿಯಲ್ಲಿ ಎಲ್ಲಾ ಭಾಷಣಗಳನ್ನು ಗುಜರಾತಿ ಭಾಷೆಯಲ್ಲಿ ಮಾಡುತ್ತಿದ್ದಾರೆ. ಇತ್ತ ರಾಹುಲ್ ಗಾಂಧಿ ಕೂಡ ಗುಜರಾತ್ ಜನತೆ ಜೊತೆಗಿನ ಬಾಂಧವ್ಯ ಹೆಚ್ಚಿಸು ತಮ್ಮ ಭಾಷಣವನ್ನು ಗುಜರಾತಿ ಭಾಷಗೆ ಅನುವಾದ ಮಾಡಲು ನಾಯಕರಿಗೆ ಸೂಚಿಸಿದ್ದಾರೆ. ಇದರಂತೆ ರಾಹುಲ್ ಗಾಂಧಿ ಭಾಷಣವನ್ನು ಗುಜರಾತ್ ಭಾಷೆಯಲ್ಲಿ ಅನುವಾದ ಮಾಡಲಾಗುತ್ತಿತ್ತು. ಇದರ ನಡುವೆ ರಾಹುಲ್ ಭಾಷಣ ಮಾಡುತ್ತಿದ್ದಂತೆ ಅನುವಾದಕಾರ ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ಕೆಳಗಿಳಿದಿದ್ದಾರೆ. ಇತ್ತ ರಾಹುಲ್ ಗಾಂಧಿ ಗೊಂದಲಕ್ಕೀಡಾಗಿದ್ದಾರೆ. ಹಾಗಾದರೆ ನೀವು ಅನುವಾದ ಮಾಡುವುದಿಲ್ಲವೇ ಎಂದು ಕೇಳಿದಾಗ ಅನುವಾದಕಾರ ವೇದಿಕೆಯಿಂದ ಇಳಿದು ಕೆಲೆ ಸೆಕೆಂಡ್‌ಗಳೇ ಆಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತ್ ಜೋಡೋ ಯಾತ್ರೆಯ ಸೂರತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಜನರನ್ನುದ್ದೇಶಿ ಭಾಷಣ ಮಾಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಭಾಷಣ ಅನುವಾದ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕ ಭರತ್ ಸಿಂಗ್ ಸೋಲಂಕಿ ವಹಿಸಿಕೊಂಡಿದ್ದಾರೆ. ರಾಹುಲ್ ಭಾಷಣದ ನಡುವೆ ಅನುವಾದಕಾರ ಭರತ್ ಸಿಂಗ್ ಸೋಲಂಕಿ, ರಾಹುಲ್ ಗಾಂಧಿಗೆ ನೀವು ಹಿಂದಿಯಲ್ಲೇ ಮಾತನಾಡಿ ಎಂದು ಹೇಳಿ ನೇರವಾಗಿ ವೇದಿಕೆಯಿಂದ ಇಳಿದು ಹೋಗಿದ್ದಾರೆ.

Tap to resize

Latest Videos

ಜನ ಗಣ ಮನದ ಬದಲು ನೇಪಾಳದ ರಾಷ್ಟ್ರಗೀತೆ, ಭಾರತ್‌ ಜೋಡೋ ಯಾತ್ರೆಯಲ್ಲಿ ಪ್ರಮಾದ!

ಸೋಲಂಕಿ ಈ ಮಾತು ಹೇಳುತ್ತಿದ್ದಂತೆ ವೇದಿಕೆಯಲ್ಲಿದ್ದ ಇತರ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಕೈ ಸನ್ನೇ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೆ ಸೋಲಂಕಿ ಮಾತ್ರ ರಾಹುಲ್ ಗಾಂಧಿಗೆ ನೀವು ಹಿಂದಿಯಲ್ಲಿ ಮಾತನಾಡಿ, ಜನರಿಗೆ ಹಿಂದಿ ಅರ್ಥವಾಗುತ್ತದೆ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ. ಸೇರಿದ್ದ ಜನರು ಅನುವಾದ ಬೇಡ, ರಾಹುಲ್ ಹಿಂದಿಯಲ್ಲೇ ಭಾಷಣ ಮಾಡಲಿ ಎಂದು ಒತ್ತಾಯಿಸಿದ್ದಾರೆ.  ಇತ್ತ ರಾಹುಲ್ ಗಾಂಧಿ ಹಾಗಾದರೆ ನೀವು ಅನುವಾದ ಮಾಡುವುದು ಬೇಡವೆ ಎಂದು ಕೇಳಿದಾಗ ಸೋಲಂಕಿ ವೇದಿಕೆಯಲ್ಲೇ ಇರಲಿಲ್ಲ.

 

Ashok Gehlot : Congress is going to win 125 seats in Gujarat.

Rahul Gandhi : is it? How come? Let me go to Gujarat and check out…

In the meanwhile, the translator : तुम ख़ुद ही बोल लो, मैं चला 😂 pic.twitter.com/82b56PJ7HX

— Amit Malviya (@amitmalviya)

 

ರಾಹುಲ್‌ ಪಾದಯಾತ್ರೆ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್ಸಿಗ ರಾಹುಲ್‌ ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ ‘ಕೆಲವು ವ್ಯಕ್ತಿಗಳು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಇಲ್ಲಿ ಪಕ್ಷದ ಪರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕೆಲವು ವ್ಯಕ್ತಿಗಳು ಮರಳಿ ಅಧಿಕಾರ ಪಡೆಯುವುದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಜೊತೆಗೆ ಗುಜರಾತ್‌ನ ಅನ್ನು 40 ವರ್ಷಗಳ ಕಾಲ ಬಾಯಾರಿಕೆಯಿಂದ ಕಾಡುವಂತೆ ಮಾಡಿದ ಮತ್ತು ನರ್ಮದಾ ಯೋಜನೆ 40 ವರ್ಷ ವಿಳಂಬವಾಗುವಂತೆ ಮಾಡಿದವರನ್ನು ತಮ್ಮೊಂದಿಗೆ ಪಾದಯಾತ್ರೆಯಲ್ಲಿ ಕರೆದೊಯ್ಯುತ್ತಿದ್ದಾರೆ’ ಎನ್ನುವ ಮೂಲಕ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಜೊತೆ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದನ್ನು ಟೀಕಿಸಿದರು.

ಭಾರತ್ ಜೋಡೋ ಯಾತ್ರೆ, ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರು!

ರಾಹುಲ್‌ಗೆ ಗಾಂಧೀಜಿ ಮೊಮ್ಮಗ ತುಷಾರ್‌ ಸಾಥ್‌
ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆಯಲ್ಲಿ , ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ತುಷಾರ್‌ ಗಾಂಧಿ ಕೂಡಾ ಶುಕ್ರವಾರ ಭಾಗಿಯಾಗಿ ಹೆಜ್ಜೆ ಹಾಕಿದರು. ಬುಲ್ಡಾನಾ ಜಿಲ್ಲೆಯ ಶೆಗಾಂವ್‌ನಲ್ಲಿ ರಾಹುಲ್‌ ಜೊತೆ ತುಷಾರ್‌ ಗಾಂಧಿ ಹೆಜ್ಜೆ ಹಾಕಿದರು. ‘ಶೆಗಾವ್‌ ನನ್ನ ಜನ್ಮ ಸ್ಥಳ. ನಾನು ನ.18 ರಂದು ಭಾರತ್‌ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವೆ.’ ಎಂದು ಗುರುವಾರ ತುಷಾರ್‌ ಟ್ವೀಟ್‌ ಮಾಡಿದ್ದರು.

click me!