Karnataka Politics: 2023ರಲ್ಲಿ ಬಿಜೆಪಿಗೆ 130 ಸ್ಥಾನ, ಮತ್ತೆ ಅಧಿಕಾರಕ್ಕೆ: ಬಸನಗೌಡ ಪಾಟೀಲ್ ಯತ್ನಾಳ್ ವಿಶ್ವಾಸ

By Kannadaprabha News  |  First Published Nov 21, 2022, 9:56 PM IST
  • 2023ರಲ್ಲಿ ಬಿಜೆಪಿಗೆ 130 ಸ್ಥಾನ, ಮತ್ತೆ ಅಧಿಕಾರಕ್ಕೆ
  • ವಿಜಯಪುರದಲ್ಲಿ 6ರಿಂದ 7 ಸ್ಥಾನ ಬಿಜೆಪಿಗೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ

ವಿಜಯಪುರ (ನ.21) : 2023ರ ವಿಧಾನಸಭೆ ಚುನಾವಣೆಯಲ್ಲಿ 130 ಸ್ಥಾನಗಳನ್ನು ಗೆದ್ದು ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಮಾಡುತ್ತೇವೆ. ವಿಜಯಪುರದ 8 ವಿಧಾನಸಭೆಗಳಲ್ಲಿ 6ರಿಂದ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಿಸುತ್ತೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 23ರಿಂದ 24 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇತ್ತು. ಆದರೆ, ಕೆಲವರು ನನ್ನನ್ನು ರಾಜಕೀಯವಾಗಿ ಹಣೆಯಲು ಕೆಲವು ಬಿಜೆಪಿಯಲ್ಲಿರುವವರು ಹಾಗೂ ವಿಜಯಪುರದ ಕಾಂಗ್ರೆಸ್‌ ಶಾಸಕರೊಬ್ಬರು ಕುತಂತ್ರ ಮಾಡಿ ನಮ್ಮ ಕೆಲವು ಅಭ್ಯರ್ಥಿಗಳು ಸೋಲುವಂತೆ ಮಾಡಿದರು. ಕಾಂಗ್ರೆಸ್‌ ಶಾಸಕ ತಮ್ಮ ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Tap to resize

Latest Videos

ವಿಜಯಪುರ: ಐಪಿಎಸ್ ಅಧಿಕಾರಿ ಧ್ವನಿ ಬಳಿಸಿ ರೌಡಿಯ ರೀಲ್ಸ್‌ಗೆ ಪೊಲೀಸರೇ ಶಾಕ್..!

ಎಷ್ಟೇ ಕುತಂತ್ರ ಮಾಡಿದರೂ ನಾವು ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದ್ದೇವೆ. ಈ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಂದಿನ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರದ ನಾಯಕರು ವಿಜಯಪುರ ಪಾಲಿಕೆ ಚುನಾವಣೆ 2023ರ ವಿಧಾನಸಭೆ ಚುನಾವಣೆಗೆ ಮಾರ್ಗ ಸೂಚಿಯಾಗಿದೆ ಎಂದು ನಮ್ಮನ್ನು ಅಭಿನಂದಿಸಿದ್ದಾರೆ ಎಂದರು.

ಸಿಂದಗಿ ಉಪಚುನಾವಣೆಯಲ್ಲಿ ಶಾಸಕ ಭೂಸನೂರ ಮತ್ತು ನಾನು ತಳವಾರ ಸಮಾಜವನ್ನು ಎಸ್ಟಿಸೇರಿಸುತ್ತೇವೆ ಎಂದು ಹೇಳಿದ್ದೇವು. ಇಂದು ನಮ್ಮ ಸರ್ಕಾರ ಅದನ್ನು ಮಾಡಿದೆ. ಇನ್ನೂ ಕುರುಬ ಸಮಾಜಕ್ಕೆ ಎಸ್ಟಿಮೀಸಲಾತಿ ನೀಡುವುದು ಬಾಕಿ ಇದೆ. ಆದಷ್ಟುಬೇಗ ಹಿಂದುಳಿದ ಸಮಾಜಗಳಿಗೆ ಅವಶ್ಯವಿರುವ ಮೀಸಲಾತಿ ಒದಗಿಸುತ್ತೇವೆ ಎಂದರು.

ಆರ್ಥಿಕವಾಗಿ ಹಿಂದುಳಿದಿರುವ ಲಿಂಗಾಯತರು, ಬ್ರಾಹ್ಮಣರಿಗೆ ಶೇ.10ರಷ್ಟುಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಣಯ ತೆಗೆದುಕೊಂಡಿದೆ. ಬ್ರಾಹ್ಮಣ ಸಮಾಜದಲ್ಲಿ ಕಡುಬಡವರಿದ್ದಾರೆ. ಅತ್ಯಂತ ಕೆಳಮಟ್ಟದ ಜೀವನ ನಡೆಸುತ್ತಿದ್ದಾರೆ. ಅಂತವರಿಗೆ ಮೀಸಲಾತಿ ನೀಡಲೇಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಕೂಚಬಾಳ ಅವರು ವಿಜಯಪುರದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ 17 ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕಾದರೆ ಅವರು ಶ್ರಮ ಬಹಳಷ್ಟುಇದೆ. ಕೆಲವರು ಚುನಾವಣೆ ಸೋಲಿನಿಂದ ಹತಾಶರಾಗಿ ಜಿಲ್ಲಾಧ್ಯಕ್ಷರ ವಿರುದ್ಧ ಮಾತನಾಡುತ್ತಿದ್ದಾರೆ. ಕೂಚಬಾಳ ಅತ್ಯಂತ ಸಮರ್ಥ ಜಿಲ್ಲಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.

ಶಾಸಕ ರಮೇಶ ಭೂಸನೂರ ಮಾತನಾಡಿ, ಈವರೆಗೂ ಕಾಂಗ್ರೆಸ್‌ ಪಕ್ಷ ಪರಿಶಿಷ್ಟಜಾತಿ /ಪರಿಶಿಷ್ಟಪಂಗಡವನ್ನು ಕೇವಲ ಓಟ್‌ಬ್ಯಾಂಕ್‌ ಆಗಿ ಬಳಸಿಕೊಂಡಿತ್ತು. ಆದರೆ, ನಮ್ಮ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದೆ. ಸಿಂದಗಿ ಉಪಚುನಾವಣೆಯಲ್ಲಿ ನಾವು ಕೊಟ್ಟಂತಹ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ದಾಖಲಿಸುವ ನಿಟ್ಟಿನಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಬಿಜೆಪಿ ಅತ್ಯಂತ ಶಿಸ್ತುಬದ್ಧವಾಗಿರುವ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಯಾರೇ ಅಧ್ಯಕ್ಷರಾದರೂ ಕಿತ್ತು ಹಾಕುವವರು ಅಲ್ಲೇ ಇರುತ್ತಾರೆ. ಆದರೆ, ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾದರೂ 3 ವರ್ಷ ಮಾತ್ರ ಆಡಳಿತ ನಡೆಸಬೇಕು. ಹಾಗಾಗಿಯೇ ಬಿಜೆಪಿಯಲ್ಲಿ ಆಂತರಿಕ ಶಿಸ್ತು ಅತ್ಯಂತ ವ್ಯವಸ್ಥಿತವಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಉಪಾಧ್ಯಕ್ಷ ಉಮೇಶ ಕಾರಜೋಳ, ಬೀಜ ನಿಗಮದ ಅಧ್ಯಕ್ಷ ವಿಜೂಗೌಡ ಪಾಟೀಲ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಪ್ರಕಾಶ ಅಕ್ಕಲಕೋಟ, ಮಲ್ಲಮ್ಮ ಜೋಗೂರ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ರಾಜೇಶ ಉಪಸ್ಥಿತರಿದ್ದರು.

ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಎನ್‌ಕೌಂಟರ್‌ ಅಗತ್ಯ: ಯತ್ನಾಳ

ಭಯೋತ್ಪಾದಕರಿಗೆ ಬುದ್ಧಿ ಕಲಿಸಲು ಎನ್‌ಕೌಂಟರ್‌ ಅಗತ್ಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರು ಕುಕ್ಕರ್‌ನಲ್ಲಿ ಬಾಂಬ… ಬ್ಲಾಸ್ವ್‌ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅಧಿಕಾರ ಕೊಡಬೇಕು ಎಂದು ಗೃಹ ಸಚಿವರು, ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ಉತ್ತರಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಕೇವಲ ಬಾಯಿಂದ ಕಠಿಣ ಕ್ರಮ ಎಂದು ಹೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ನಾಲ್ಕಾರು ಎನ್‌ಕೌಂಟರ್‌ ಮಾಡಿ ಭಯೋತ್ಪಾದಕರಿಗೆ ಬುದ್ಧಿ ಕಲಿಸಬೇಕು. ಗೃಹಮಂತ್ರಿಗಳು ಒಳ್ಳೆಯವರು ಆದರೆ, ಅವರಿಂದ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಗೃಹಖಾತೆಯಲ್ಲಿ ಇರುವವರು ಕಠಿಣ ನಿಲುವು ತಳೆಯುವುದು ಅಗತ್ಯ ಎಂದರು.

ಸಿದ್ದರಾಮಯ್ಯ ಬಗ್ಗೆ ಏಕವಚನದಲ್ಲಿ ಯತ್ನಾಳ ವಾಗ್ದಾಳಿ:

ಇದೇ ಸಂದರ್ಭದಲ್ಲಿ ಮೀಸಲಾತಿ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ, ಸಿದ್ದರಾಮಯ್ಯ ಬಡವರಿಗೆ ಕೊಟ್ಟಮೀಸಲಾತಿಯನ್ನು ವಿರೋಧ ಮಾಡ್ತಾನೆ. ಎಲ್ಲವನ್ನೂ ಬರೀ ಮುಸ್ಲಿಂರಿಗೆ ಕೊಡಿ ಎಂದು ಹೇಳ್ತಾನೆ. ಆತ ಮೊದಲಿನಿಂದಲೂ ಮೇಲ್ಜಾತಿಯವರನ್ನು ದ್ವೇಷ ಮಾಡುತ್ತಾನೆ. ಒಬಿಸಿಗೆ ಶೇ 10ರಷ್ಟುಮೀಸಲಾತಿ ಕೊಟ್ಟರೆ ಸಿದ್ದರಾಮಯ್ಯಗೆ ಏನು ತೊಂದರೆ? ಸಿದ್ದರಾಮಯ್ಯಗೆ ಲಿಂಗಾಯತರು, ಬ್ರಾಹ್ಮಣರು ಓಟ್‌ ಹಾಕಿಲ್ಲವೇ? ಈ ದ್ವಿಮುಖ ನೀತಿಯಿಂದಲೇ ಸಿದ್ದರಾಮಯ್ಯ ಅಂತ್ಯವಾಗಲಿದೆ ಎಂದು ಗುಡುಗಿದರು.

ಬಸನಗೌಡ ಪಾಟೀಲ ಯತ್ನಾಳ್‌-ಅರುಣ್‌ ಸಿಂಗ್‌ ರಹಸ್ಯ ಮಾತುಕತೆ

ಪಂಚಮಸಾಲಿ ಮೀಸಲಾತಿ ಹೋರಾಟ ಮುಂದುವರಿಯಲಿದೆ. ಈ ನಿಟ್ಟಿನಲ್ಲಿ ಎಸ್ಸಿ, ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು ಮೊದಲ ಹೆಜ್ಜೆಯಾಗಿದೆ. ಯಾವುದೇ ಒಂದು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎಂದರೆ ಎಲ್ಲರೂ ಟಾಟಾ-ಬಿರ್ಲಾ ಇರಲ್ಲ. ಇದೇ ಕಾರಣಕ್ಕೆ ಎಲ್ಲ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಧಾನಿ ಮೋದಿ ಶೇ 10ರಷ್ಟುಮೀಸಲಾತಿ ಕೊಟ್ಟಿದ್ದಾರೆ. ಎಲ್ಲ ಸಮುದಾಯದಲ್ಲಿರುವ ಬಡವರಿಗೆ ಮೀಸಲಾತಿ ಕೊಟ್ಟಿದ್ದನ್ನು ಸುಪ್ರೀಂ ಕೋರ್ಚ್‌ ಎತ್ತಿ ಹಿಡಿದಿದೆ ಎಂದರು.

click me!