9 ವರ್ಷದಲ್ಲಿ ದೇಶದ ಅದ್ಭುತ ಪ್ರಗತಿ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Published : May 30, 2023, 11:06 AM IST
9 ವರ್ಷದಲ್ಲಿ ದೇಶದ ಅದ್ಭುತ ಪ್ರಗತಿ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ಸಾರಾಂಶ

ಮೋದಿ ಸರ್ಕಾರ ಬಡವರು, ರೈತರು, ವಂಚಿತರಿಗೆ ಸಮರ್ಪಿತ, ಸರ್ಕಾರದ ಕ್ರಮಗಳಿಂದ ದೇಶದ ಬಗ್ಗೆ ಅಭಿಪ್ರಾಯವೇ ಬದಲು: ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ

ಬೆಂಗಳೂರು(ಮೇ.30):  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಬಡವರು, ರೈತರು ಹಾಗೂ ಅವಕಾಶ ವಂಚಿತರಿಗೆ ಸಮರ್ಪಿತವಾದ ಸರ್ಕಾರವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಎಂದು ಹೇಳಿದ್ದಾರೆ.

ಮೋದಿ ಸರ್ಕಾರಕ್ಕೆ 9 ವರ್ಷ ಸಂದ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ 9 ವರ್ಷಗಳಲ್ಲಿ ದೇಶದ ಪ್ರಗತಿಗೆ ಅದ್ಭುತ ಕೊಡುಗೆಯನ್ನು ಮೋದಿ ನೀಡಿದ್ದಾರೆ ಎಂದರು.

ಜೂ.1ರಂದು ಗ್ಯಾರಂಟಿಗಳ ಕುರಿತು ಕ್ರಾಂತಿಕಾರಕ ನಿರ್ಣಯ: ಸಚಿವ ಎಚ್‌.ಕೆ. ಪಾಟೀಲ್‌

ಮೋದಿ ನೇತೃತ್ವದ ಸರ್ಕಾರವು ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತವಾಗಿದೆ. ಹೊಸ ಸಂಸತ್‌ ಭವನವು ನಮ್ಮ ಹೆಮ್ಮೆಯ ಕಟ್ಟಡವಾಗಿದೆ. ಹೊಸ ತಂತ್ರಜ್ಞಾನಕ್ಕೆ ಉದಾಹರಣೆ ಇದಾಗಿದೆ. ಭಾರತದ ಸಂಸ್ಕೃತಿಯ ಅತ್ಯುತ್ತಮ ವಿಚಾರಗಳನ್ನು ಅನಾವರಣಗೊಳಿಸಲಾಗಿದೆ. ರಾಜದಂಡದ (ಸೆಂಗೋಲ…) ಪ್ರತಿಷ್ಠಾಪನೆಯೂ ಆಗಿದೆ. ಸೆಂಗೋಲ… ಇದೆಯೆಂದು ಯಾರಿಗೂ ತಿಳಿದಿರಲಿಲ್ಲ. ಚಾರಿತ್ರಿಕ ಹಿನ್ನಲೆಯಲ್ಲಿ ಸೆಂಗೋಲ್‌ಗೆ ಗೌರವಯುತ ಸ್ಥಾನವನ್ನು ಪ್ರಧಾನ ಮಂತ್ರಿಗಳು ಕಲ್ಪಿಸಿದ್ದಾರೆ ಎಂದರು.

ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು. ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಲಸಿಕೆ ನೀಡಲು 20 ವರ್ಷ ಬೇಕೆಂದು ಕೆಲವರು ಆಡಿಕೊಂಡರು. ಆದರೆ, ಕೇವಲ ಒಂದೆರಡು ವರ್ಷಗಳಲ್ಲಿ ಕೊರೋನಾ ಲಸಿಕೆ ಜನರಿಗೆ ನೀಡಿ ಕೇಂದ್ರ ಸರ್ಕಾರವು ಸಾಹಸ ಮೆರೆದಿದೆ ಎಂದು ಶ್ಲಾಘಿಸಿದರು.

ಇಂದು ಬ್ಯಾಂಕಿಂಗ್‌ ವ್ಯವಹಾರ ವ್ಯಾಪ್ತಿಗೆ ಬಡವರು, ಬಡ ವ್ಯಾಪಾರಿಗಳು ಬರುವಂತಾಗಿದೆ. ಅವರ ಹಣವೂ ಬ್ಯಾಂಕಿಗೆ ಬರುವಂತಾಗಿದೆ. ಬಡವರಿಗೆ ವಿಮೆ, ಸ್ವಾಸ್ಥ್ಯದ ಯೋಜನೆಗಳು ತಲುಪಿದವು. ಇದು ಮೋದಿಯವರ ದೂರದೃಷ್ಟಿಯ ಪರಿಣಾಮ ಎಂದು ಕೇಂದ್ರ ಸಚಿವರು ಅರುಹಿದರು.

ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಸೋಲು: ಸುಮಲತಾ

ಈಶಾನ್ಯ ರಾಜ್ಯಗಳಲ್ಲಿ ಬಾಕಿ ಉಳಿದಿದ್ದ ಪ್ರಮುಖ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮಹಿಳೆಯರಿಗೆ ಎಲ್ಲ ಅವಕಾಶ ಕಲ್ಪಿಸಲಾಯಿತು. ಯೆಮನ್‌, ಸಿರಿಯಾ, ನೇಪಾಳ, ಸುಡಾನ್‌ ಹಾಗೂ ಅಪ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಸಂಘರ್ಷ ಉಂಟಾದಾಗ ಪ್ರಧಾನಿಯವರು ಭಾರತೀಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಜಿ 20 ಹಾಗೂ ವಿದೇಶಗಳಿಗೆ ಪ್ರಧಾನಿಯವರ ಭೇಟಿ ಮೊದಲಾದವು ಭಾರತದ ಬಗ್ಗೆ ಇದ್ದ ಅಭಿಪ್ರಾಯವನ್ನು ಬದಲಿಸಿವೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಕೋಟ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌
ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ