1989ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರೂ ಮಂತ್ರಿಯಾಗಿಲ್ಲ. ಆದರೂ ಮೋದಿಯವರು ಗಾಂಧಿ ಕುಟುಂಬದ ಬಗ್ಗೆಯೇ ಮಾತಾಡ್ತಾರೆ ತಾವೊಬ್ಬ ಪ್ರಧಾನಿಯಾಗಿ ಈ ರೀತಿ ಮಾತಾಡುವುದು ಸರಿಯಲ್ಲ ಎಂದು ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಕಲಬುರಗಿ (ಮೇ.24): ನಮ್ಮ ದೇಶದಲ್ಲಿ ಎಲ್ಲ ಧರ್ಮದವರಿಗೂ ಸಮಾನ ಗೌರವ ಇದೆ. ಎಲ್ಲರೂ ಅವರವರ ನಂಬಿಕೆಯಂತೆ ಅವರ ದೇವರ ಆರಾಧನೆ ಮಾಡ್ತಾರೆ. 'ರಾಮ ರಾಮ ಎಂದರೆ ಕಾಂಗ್ರೆಸ್ ಸರ್ಕಾರ ಜೈಲಿಗೆ ಹಾಕ್ತಾರೆ' ಅಂತಾ ಹೇಳಿದರೆ ಜನರು ಬಿಜೆಪಿ ವೋಟು ಹಾಕ್ತಾರೆ ಅಂತಾ ಮೋದಿ ಹೀಗೆ ಹೇಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.
ಒಂದು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಮ ಮಂದಿರಕ್ಕೆ ಬುಲ್ಡೋಜರ್ ನುಗ್ಗಿಸುತ್ತಾರೆ, ರಾಮ ರಾಮ ಅಂದವರನ್ನ ಜೈಲಿಗೆ ಹಾಕ್ತಾರೆ ಎಂದು ಆರೋಪಿಸಿದ್ದ ಪ್ರಧಾನಿಯವರ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ದೇಶದ ಪ್ರಧಾನಿಯಾಗಿ ಈ ರಿತಿ ಮಾತನಾಡುವುದು ಸರಿಯಲ್ಲ. ಇಂತಹ ಚಿಲ್ಲರೆ ಮಾತಾಡುವುದರಿಂದ ಅವರಿಗೂ ಗೌರವ ಸಿಗೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
undefined
ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಂಗಳಸೂತ್ರ ಇರೊಲ್ಲ, ನಿಮ್ಮ ಆಸ್ತಿ ಮುಸ್ಲಿಮರಿಗೆ ಹಂಚುತ್ತಾರೆ ಎಂದೂ ಹೆದರಿಸಿದ್ದಾರೆ. ಈ ರೀತಿ ಹೇಳೊದನ್ನ ಮೊದಲು ನಿಲ್ಲಿಸಬೇಕು. ಗಾಂಧಿ ಕುಟುಂಬ ಅಧಿಕಾರ ಬಿಟ್ಟು ಸುಮಾರು ವರ್ಷಗಳೇ ಕಳೆದಿವೆ. 1989ರ ಬಳಿಕ ಗಾಂಧಿ ಕುಟುಂಬದ ಯಾರೊಬ್ಬರೂ ಮಂತ್ರಿಯಾಗಿಲ್ಲ. ಆದರೂ ಮೋದಿಯವರು ಗಾಂಧಿ ಕುಟುಂಬದ ಬಗ್ಗೆಯೇ ಮಾತಾಡ್ತಾರೆ ಎಂದು ಕಿಡಿಕಾರಿದರು.
ಚುನಾವಣಾ ಅಖಾಡದಲ್ಲಿ ರತ್ನ ಭಂಡಾರ ಕೀಲಿ ಕೈ ವಿವಾದ: ಓಡಿಶಾದಲ್ಲಿ ಮೋದಿ ಭಾಷಣ..ತಮಿಳುನಾಡಿನಲ್ಲೂ ಸಂಚಲನ!
ಇದೇ ವೇಳೆ ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಖರ್ಗೆ, ಅದರ ಬಗ್ಗೆ ರಾಜ್ಯ ನಾಯಕರು ಮಾತಾಡ್ತಾರೆ. ತಪ್ಪಿಸ್ಥರು ಯಾರೇ ಆಗಲಿ ಕಾನೂನಿನ ಪ್ರಕಾರ ಕ್ರಮ ಆಗಬೇಕು. ಅದು ಪ್ರಜ್ವಲ್ ಆಗಿರಲಿ, ಕೇಜ್ರಿವಾಲ್ ಸೆಕ್ರೆಟರಿ ಆಗಿರಲಿ ಕಾನೂನು ಎಲ್ಲರಿಗೂ ಒಂದೇ ಎಂದರು.