ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಟ್ಸಾಪ್‌ ಯೂನಿವರ್ಸಿಟಿ ಪದವೀಧರೆಯಂತೆ! ಭಂಡಾರಿ ಆರೋಪ

By Sathish Kumar KH  |  First Published Jun 4, 2023, 6:06 PM IST

ದೇಶದಲ್ಲಿ ವಿದೇಶಿ ಫಂಡಿಂಗ್ ನಿಂದ ದೇಶ ಅಸ್ಥಿರಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂಬ ವಿಷಯಗಳನ್ನು ವಾಟ್ಸಪ್ ಯುನಿವರ್ಸಿಟಿಯವರು ಹಬ್ಬಿಸುತ್ತಾರೆ.


ಉಡುಪಿ (ಜೂ.04): ದೇಶದಲ್ಲಿ ವಿದೇಶಿ ಫಂಡಿಂಗ್ ನಿಂದ ದೇಶ ಅಸ್ಥಿರಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯಿಂದ ಆಘಾತವಾಗಿದೆ. ಕೇಂದ್ರದ ಎಲ್ಲ ತನಿಖಾ ಸಂಸ್ಥೆಗಳು ಕೈಯಲ್ಲಿದ್ದು, ದೇಶ ಅಸ್ಥಿರಗೊಳಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು. ಆದರೆ, ವಾಟ್ಸಪ್ ಯುನಿವರ್ಸಿಟಿಯವರು ಇಂತಹ ಅನೇಕ ವಿಷಯಗಳನ್ನು ಹಬ್ಬಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯರ ಮಾತು ಕೇಳಿ ದೇಶದ ಪ್ರಜೆಯಾಗಿ ನನಗೆ ಆಘಾತವಾಗಿದೆ. ಕೇಂದ್ರದ ಎಲ್ಲಾ ತನಿಖಾ ಸಂಸ್ಥೆಗಳು ನಿಮ್ಮ ಕೈಯಲ್ಲಿ, ಸರ್ಕಾರ ಅಧಿಕಾರ ನಿಮ್ಮ ಕೈಯಲ್ಲಿದೆ. ದೇಶವನ್ನು ಅಸ್ತಿರಗೊಳಿಸುವ ವ್ಯಕ್ತಿಗಳು ಯಾರೇ ಇರಬಹುದು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು. ಅಂತ ಹೇಳಿಕೆಯನ್ನ ನೀವು ಕೊಡ್ತೀರಾ? ಆ ರೀತಿಯ ಹೇಳಿಕೆ ಕೊಟ್ಟಿದ್ದಾರೆ ಕೇಂದ್ರ ಸಚಿವರಾಗಿ ಮುಂದುವರೆಯಲು ನಿಮಗೆ ನೈತಿಕ ಹಕ್ಕು ಇಲ್ಲ. ವಿದೇಶಿ ಕೈವಾಡ ಇದೆ ದೇಶ ಬುಡಮೇಲಾಗುತ್ತೆ ಎಂದರೆ ಯಾಕೆ ಸುಮ್ಮನಿದ್ದಿರಿ? ನೀವು ಹೇಳಿದ್ದು ಸುಳ್ಳಾದರೆ ಜನರ ಕ್ಷಮೆ ಕೇಳಿ ಹೇಳಿಕೆ  ವಾಪಸ್ ಪಡೆಯಿರಿ ಎಂದು ಸವಾಲು ಹಾಕಿದರು. 

Latest Videos

undefined

ಕುಸ್ತಿಪಟುಗಳ ಪ್ರತಿಭಟನೆಗೆ ವಿದೇಶದಿಂದ ಫಂಡಿಂಗ್‌: ಶೋಭಾ ಕರಂದ್ಲಾಜೆ ಆರೋಪ

ಇನ್ನು ದೇಶದಲ್ಲಿ ಕುಸ್ತಿಪಟುಗಳ ಹೋರಾಟಕ್ಕೆ ವಿದೇಶಿ ಫಂಡಿಂಗ್ ಆಗಿದೆ ಎನ್ನುತ್ತಿರಿ. ನಿಮ್ಮ ಹೇಳಿಕೆ ಅತ್ಯಂತ ಕನಿಷ್ಠವಾಗಿದೆ. ಒಲಂಪಿಕ್ಸ್ ನಲ್ಲಿ ಮೆಡಲು ಗೆದ್ದವರನ್ನು ಅವಮಾನಗೊಳಿಸಿದಿರಿ. ಮೆಡಲ್‌ ಗೆದ್ದಾಗ ಕರೆದು ಪ್ರಧಾನಿ ಚಹಾ ಕೂಟ ನಡೆಸುತ್ತೀರಿ. ಈಗ ಕ್ರೀಡಾಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎನ್ನುತ್ತಿದ್ದಾರೆ. ಇದಕ್ಕೂ ವಿದೇಶಿ ಹಣಕ್ಕೂ ಏನು ಸಂಬಂಧವಿದೆ. ಹಾಗೇನಾದರೂ ಇದ್ದರೆ ತನಿಖೆ ಮಾಡಿ ನಿಮ್ಮ ಮಂತ್ರಿಗಳನ್ನು ಕಳುಹಿಸುವುದು ಬೇಡ. ನೀವು ಒಬ್ಬ ಮಹಿಳಾ ಮಂತ್ರಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ. ನೀವು ಮುಂದೆ ಹೋಗಿ ಸಂಧಾನ ಮಾಡಿ ತಪ್ಪಾಗಿದ್ದರೆ ತಪ್ಪಾಗಿದೆ ಎಂದು ಹೇಳಿ. ಸರಿಯಾಗಿದ್ದರೆ ಸರಿಯಾಗಿದೆ ಎಂದು ಜನರ ಮುಂದೆ ಹೇಳಿ. ಸತ್ಯಾಗ್ರಹಿಗಳಿಗೂ ವಿದೇಶಿ ಹಣ ಬರುತ್ತೆ ಎನ್ನುತ್ತಿರಲಿಲ್ಲ? ಇಂತಹ ಬಾಲಿಷ ಹೇಳಿಕೆಗಳನ್ನು ಕೊಡಬೇಡಿ. ಒಲಂಪಿಕ್ಸ್ ನಲ್ಲಿ ಗೆದ್ದ ಪದಕಗಳನ್ನು ಗಂಗಾ ನದಿಗೆ ಎಸೆಯಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಭಾರತ್ ಜೋಡೋ, ಅಮೆರಿಕ ಕಾರ್ಯಕ್ರಮಗಳಿಗೆ ಎನ್‌ಜಿಒ ಹಣ ಕೊಡುತ್ತೆ ಎಂದು ಹೇಳಿದ್ದೀರಿ. ನಿಮಗೆ ಗೊತ್ತಿದೆಯಾ ಹಣ ಕೊಡುತ್ತಾರೆ ಎಂಬ ಬಗ್ಗೆ? ಕರ್ನಾಟಕದಲ್ಲಿ ಭಾರತ ಜೋಡೋ ಮಾಡಿದರು. ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಸೋಲುತ್ತೆ ಎಂದರಿ. ಇವತ್ತು 135 ಸ್ಥಾನ ಗೆದ್ದಿದ್ದೇವೆ. ಲೋಕಸಭಾ ಕ್ಷೇತ್ರಗಳಲ್ಲೂ 20 ಸ್ಥಾನಗಳಲ್ಲಿ ಕಾಂಗ್ರೆಸ್ ಮುಂದಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಎರಡರಲ್ಲಿ ಜೆಡಿಎಸ್ ಮುಂದಿದೆ ಎಂದು ಹೇಳಲಾಗುತ್ತಿದೆ. ಇದನ್ನು ನೋಡಿದಾಗ ತಮ್ಮ ದೌರ್ಬಲ್ಯ ಮರೆಮಾಚಲು ಈ ರೀತಿ ಹೇಳಿಕೆ ನೀಡುತ್ತಿದ್ದೀರಿ ಎನಿಸುತ್ತದೆ. ರಾಹುಲ್ ಗಾಂಧಿಯವರ ಜನಪ್ರಿಯತೆ ನಿಮಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.

ಕುಟುಂಬ ಸಮೇತ ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಪ್ರಾಣ ಉಳಿದಿದ್ದೇ ದೊಡ್ಡ ಪವಾಡ

ಮುದಿ ಹಸುಗಳ ಕೊಲ್ಲಬಾರದೇಕೆ ?: ರಾಜ್ಯದ ಪಶು ಸಂಗೋಪನಾ ಸಚಿವರ ಹೇಳಿಕೆಯನ್ನು ಸಮರ್ಥನೆ ಮಾಡುವುದು ಎಂದರ್ಥವಲ್ಲ. ಈ ರೀತಿ ಮಾಡಬೇಕು ಬೇಡವೋ ಎಂಬುದು ವಿಧಾನಸಭೆಯಲ್ಲಿ ಚರ್ಚೆ ಆಗುತ್ತದೆ. ವಿಧಾನಪರಿಷತ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ ಬಳಿಕ ನಿರ್ಧಾರ ಆಗುತ್ತದೆ. ಯಾರೋ ಒಬ್ಬರು ಹೇಳಿದ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ಪಠ್ಯಪುಸ್ತಕದಲ್ಲಿ ಹಿಂದಿನ ಸರ್ಕಾರ ಏನು ಬದಲಾವಣೆ ಮಾಡಿದೆ ಎಲ್ಲರಿಗೂ ಗೊತ್ತಿದೆ. ಎಂತೆಂಥವರು ಸಮಿತಿಯಲ್ಲಿ ಸದಸ್ಯರಾಗಿದ್ದರು ಅನ್ನೋದು ಗೊತ್ತಿದೆ. ಅಂಥವರನ್ನು ಇಟ್ಟುಕೊಂಡು ವಿಷದ ಬೀಜ ಬಿತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಶಿಕ್ಷಣ ಸಚಿವರು ಕೂಡ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ ಎಂದರು.

click me!