ದೇವದುರ್ಗ ಶಾಸಕಿಗೆ ನಿಂದನೆ, ಕೊಲೆ ಬೆದರಿಕೆ: ಮಾಜಿ ಶಾಸಕನ ಸಹೋದರ ಸೇರಿ 8 ಜನರ ವಿರುದ್ಧ ಕೇಸ್

Published : Jun 06, 2023, 11:17 AM IST
ದೇವದುರ್ಗ ಶಾಸಕಿಗೆ ನಿಂದನೆ, ಕೊಲೆ ಬೆದರಿಕೆ: ಮಾಜಿ ಶಾಸಕನ ಸಹೋದರ ಸೇರಿ 8 ಜನರ ವಿರುದ್ಧ ಕೇಸ್

ಸಾರಾಂಶ

ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ ನಾಯಕ್‌ಗೆ ಚಪ್ಪಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ ಆರೋಪದಡಿ ಮಾಜಿ ಶಾಸಕ ಶಿವನಗೌಡ ನಾಯಕರ ಸಹೋದರ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ರಾಯಚೂರು (ಜೂ.6) : ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ ನಾಯಕ್‌ಗೆ ಚಪ್ಪಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆಯೊಡ್ಡಿದ ಆರೋಪದಡಿ ಮಾಜಿ ಶಾಸಕ ಶಿವನಗೌಡ ನಾಯಕರ ಸಹೋದರ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ನಿನ್ನೆ ಜೂನ್ 4ರಂದು ವಿದ್ಯುತ್ ದುರಸ್ತಿ ವೇಳೆ ಆಲದ ಮರದ ತಾಂಡದಲ್ಲಿ ಲೈನ್​ಮ್ಯಾನ್ ವಿರೂಪಾಕ್ಷ ಎಂಬವರು ಶಾರ್ಟ್‌ ಸೆರ್ಕ್ಯೂಟ್‌ನಿಂದ ಸಾವನ್ನಪ್ಪಿದ್ದರು. ದುರ್ಘಟನೆ ತಿಳಿದು ಸ್ಥಳಕ್ಕೆ ಶಾಸಕಿ ಕರೆಮ್ಮ ನಾಯಕ(Karemma nayak MLA) ಭೇಟಿ ನೀಡಿದ್ದರು. 

ಕಲುಷಿತ ನೀರು ಸೇವನೆ ಪ್ರಕರಣ; ಅಸ್ವಸ್ಥ ರೋಗಿ​ಗಳ ಭೇಟಿ​ಯಾದ ಶಾಸಕಿ ಕರೆಮ್ಮ

ಈ ವೇಳೆ ಶಾಸಕಿ ಬಂದಿರುವುದು ತಿಳಿದು ಬಿಜೆಪಿ ಕಾರ್ಯಕರ್ತರು, ಮುಖಂಡರು ಶಾಸಕಿ ಮೇಲೆ ಚಪ್ಪಲಿ ಎಸೆದು ಅಶ್ಲೀಲವಾಗಿ ನಿಂದಿಸಿದ್ದರು  ಶಾಸಕಿಯ ಕೈ ಹಿಡಿದು ಎಳೆದಾಡಿರುವ ಮುಖಂಡರು. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಶಾಸಕಿ ಮೇಲೆ ದೌರ್ಜನ್ಯವೆಸಗಿರುವ ಬಗ್ಗೆ ವಿಡಿಯೋ ನೋಡಿದ ಬಳಿಕ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದೇವದುರ್ಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆಗೆ ಮಣಿದ ಪೊಲೀಸರು, ಭದ್ರಪ್ಪ, ಅಮರೇಶ ಭಗವಂತರಾಯ ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

 

ಕರೆಂಟ್‌ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್‌ಮ್ಯಾನ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್