ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ದಾಖಲೆಯ 7ನೇ ಚಿನ್ನದ ಪದಕದತ್ತ ಚಿತ್ತ ನೆಟ್ಟಿದ್ದಾರೆ. ಈಗಾಗಲೇ ಕೂಟದಲ್ಲಿ ಮೇರಿ ಸೇರಿದಂತೆ ನಾಲ್ವರು ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಷ್ಯಾ(ಅ.12): ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಭಾರತದ ಬಾಕ್ಸರ್‌ಗಳಿಗೆ ಮಹತ್ವದ ದಿನವಾಗಿದೆ. ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ ಮೇರಿ ಕೋಮ್ (51 ಕೆ.ಜಿ) ಸಹಿತ ನಾಲ್ವರು ಬಾಕ್ಸರ್‌ಗಳು ಈಗಾಗಲೇ ಪದಕ ಖಚಿತಪಡಿಸಿದ್ದು, ಸೆಮಿಫೈನಲ್ ಸೆಣಸಲಿದ್ದಾರೆ.
FANTASTIC FOUR! 🔱⚡️
🇮🇳’s 4️⃣ pugilists sealed their berth in the semifinals of and assured medals for the country 🇮🇳.
Well done champs!👏
Go for the GOLD!
Enjoy the match moments!👇 pic.twitter.com/dnzMXOYcXB
ಬಾಕ್ಸರ್ ಮೇರಿ ಕೋಮ್ ವಿಶ್ವ ದಾಖಲೆ
undefined
8ನೇ ವಿಶ್ವ ಬಾಕ್ಸಿಂಗ್ ಪದಕ ಖಚಿತಪಡಿಸಿದ ಮೇರಿ 7ನೇ ಚಿನ್ನದ ಪದಕ ಗೆದ್ದು ದಾಖಲೆಯ 7ನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಗುರಿ ಹೊಂದಿದ್ದಾರೆ. ಸೆಮಿಫೈನಲ್‌ನಲ್ಲಿ ಯುರೋಪಿಯನ್ ಚಾಂಪಿ ಯನ್ ಟರ್ಕಿಯ ಬ್ಯೂಸಿನಾಜ್ ಕಾಕಿರೋಗ್ಲು ವಿರುದ್ಧ ಮೇರಿ ಸೆಣಸಲಿದ್ದಾರೆ.
ದುಬೈನಲ್ಲಿ ಬಾಕ್ಸರ್ ವಿಜೇಂದರ್ ಕಾದಾಟಕ್ಕೆ ಡೇಟ್ ಫಿಕ್ಸ್..!
ಲೊವ್ಲಿನಾ ಬೊರ್ಗೈನ್ (69 ಕೆ.ಜಿ), ಮಂಜು ರಾಣಿ (48 ಕೆ.ಜಿ) ಹಾಗೂ ಜಮುನಾ ಬೊರೊ (54 ಕೆ.ಜಿ) ಚೊಚ್ಚಲ ಸ್ವರ್ಣ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.