ಪ್ರೊ ಕಬಡ್ಡಿ 2019: ನೇರ ಸೆಮೀಸ್‌ಗೆ ಡೆಲ್ಲಿ, ಬೆಂಗಾಲ್‌

By Kannadaprabha News  |  First Published Oct 12, 2019, 8:03 AM IST

7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಗ್ರೇಟರ್‌ ನೋಯ್ಡಾ[ಅ.12]: ಪ್ರೊ ಕಬಡ್ಡಿ 7ನೇ ಆವೃತ್ತಿ ಅತಿ ಹೆಚ್ಚು ಪೈಪೋಟಿಗೆ ಸಾಕ್ಷಿ​ಯಾಗಿದ್ದು, ಅ.14 ರಿಂದ 6 ತಂಡಗಳ ನಡುವೆ ಪ್ಲೇ ಆಫ್‌ ಹಂತ ಶುರುವಾಗಲಿದೆ. ಯಾವ ತಂಡ ಚಾಂಪಿ​ಯನ್‌ ಪಟ್ಟ​ಕ್ಕೇ​ರ​ಲಿದೆ ಅಥವಾ ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಬುಲ್ಸ್‌ ಪ್ರಶಸ್ತಿ ಉಳಿ​ಸಿ​ಕೊ​ಳ್ಳು​ವುದೇ ಎಂಬ ಕುತೂ​ಹಲ ಹೆಚ್ಚಾ​ಗು​ತ್ತಿದೆ. ಪಟ್ಟಿಯಲ್ಲಿ ಕ್ರಮವಾಗಿ ದಬಾಂಗ್‌ ಡೆಲ್ಲಿ, ಬೆಂಗಾಲ್‌ ವಾರಿ​ಯ​ರ್‍ಸ್, ಯುಪಿ ಯೋಧಾ, ಯು ಮುಂಬಾ, ಹರ್ಯಾಣ ಸ್ಟೀಲ​ರ್‍ಸ್ ಹಾಗೂ ಬೆಂಗ​ಳೂರು ಬುಲ್ಸ್‌ ಪ್ಲೇ ​ಆ​ಫ್‌​ನಲ್ಲಿ ಜಿದ್ದಾ​ಜಿ​ದ್ದಿನ ಸೆಣ​ಸಾ​ಟಕ್ಕೆ ಸಜ್ಜಾ​ಗಿವೆ.

ಪ್ರೊ ಕಬಡ್ಡಿ: ಅಗ್ರಸ್ಥಾನಕ್ಕೇರಿದ ಬೆಂಗಾಲ್ ವಾರಿಯರ್ಸ್

Tap to resize

Latest Videos

ಪ್ಲೇ ಆಫ್‌ ಲೆಕ್ಕಾಚಾರ ಹೀಗಿದೆ. ಪಟ್ಟಿಯಲ್ಲಿ ಮೊದಲ 2 ಸ್ಥಾನಗಳಿಸಿದ ದಬಾಂಗ್‌ ಡೆಲ್ಲಿ ಹಾಗೂ ಬೆಂಗಾಲ್‌ ವಾರಿಯರ್ಸ್‌ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿದವು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು ಬಗ್ಗು ಬಡಿದ ಯುಪಿ ಯೋಧಾ 3ನೇ ಸ್ಥಾನಿಯಾಗಿದ್ದು, ಅ. 14 ರಂದು ನಡೆಯಲಿರುವ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಎದುರಿಸಲಿದೆ. 4 ಮತ್ತು 5ನೇ ಸ್ಥಾನ ಪಡೆದ ಯು ಮುಂಬಾ ಹಾಗೂ ಹರಾರ‍ಯಣ ಸ್ಟೀಲರ್ಸ್‌ 2ನೇ ಎಲಿಮಿನೇಟರ್‌ನಲ್ಲಿ ಸೆಣಸಲಿವೆ. ಎಲಿಮಿನೇಟರ್‌ನಲ್ಲಿ ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿದ್ದು, ಗೆದ್ದ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ. ಅ. 16 ರಂದು 2 ಸೆಮೀಸ್‌ ಪಂದ್ಯಗಳು ನಡೆಯಲಿವೆ. 19ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ. ಪ್ಲೇ ಆಫ್‌ನ ಎಲ್ಲಾ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿವೆ.

2⃣ epic clashes like and are how you close out the league stage of Season 7! 😍

Relive tonight's clashes with these 📸📸, and watch live action from the :

⏳: October 14, 7 PM
📺: Star Sports and Hotstar pic.twitter.com/UH7CyBEsgp

— ProKabaddi (@ProKabaddi)

ಯೋಧಾಗೆ ಮಣಿದ ಬುಲ್ಸ್‌:

ಪ್ರೊ ಕಬಡ್ಡಿ 7ನೇ ಆವೃತ್ತಿಯ ಲೀಗ್‌ ಹಂತ ಶುಕ್ರವಾರ ಮುಕ್ತಾಯ ಕಂಡಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌, ಯುಪಿ ಯೋಧಾ ವಿರುದ್ಧ 33-45 ಅಂಕಗಳಲ್ಲಿ ಪರಾಭವ ಹೊಂದಿತು. ಮೊದಲಾರ್ಧದಲ್ಲಿ 22-20 ರಿಂದ ಮುನ್ನಡೆ ಸಾಧಿಸಿದ್ದ ಬೆಂಗಳೂರು ತಂಡ, ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿತು. ಈ ಪಂದ್ಯ ಗೆದ್ದಿದ್ದರೇ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಮೇಲಕ್ಕೇರುತ್ತಿತ್ತು.

ಇದಕ್ಕೂ ಮುನ್ನ ದಬಾಂಗ್‌ ಡೆಲ್ಲಿ ಹಾಗೂ ಯು ಮುಂಬಾ ವಿರುದ್ಧದ ಪಂದ್ಯ 37-37 ಅಂಕಗಳಲ್ಲಿ ಟೈನಲ್ಲಿ ಅಂತ್ಯವಾಯಿತು. ಈ ಆವೃತ್ತಿಯ ಟೂರ್ನಿಯಲ್ಲಿ ಇದು 13ನೇ ಟೈ ಆಗಿದೆ. ಮೊದಲಾರ್ಧದಲ್ಲಿ ಡೆಲ್ಲಿ, ಮುಂಬಾ ವಿರುದ್ಧ 24-13ರಲ್ಲಿ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಹಿನ್ನಡೆ ಅನುಭವಿಸಿದ್ದರಿಂದ ಪಂದ್ಯ ಟೈ ಆಯಿತು.
 

click me!