ಟೋಕಿಯೋ(ಜು.24): ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಅಷ್ಟೇ ವೇಗವಾಗಿ ಪದಕ ಖಾತೆ ತೆರೆದಿದೆ. 49 ಕೆಜಿ ಮಹಿಳೆಯ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಮೀರಾಬಾಯಿಗೆ ಪ್ರಧಾನಿ ಮೋದಿ ಸೇರಿದಂತೆ ಇಡಿ ಭಾರತವೆ ಶುಭಾಶಯ ಸುರಿಮಳೆ ಸುರಿಸಿದೆ. ಮೀರಾಬಾಯಿ ಪರಿಶ್ರಮದಿಂದ ಭಾರತ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಟೋಕಿಯೋ ಒಲಿಂಪಿಕ್ಸ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್ ಮೀರಾಬಾಯಿ ಚಾನುಒಲಿಂಪಿಕ್ಸ್ ಪದಕ ಭೇಟೆ ಆರಂಭವಾಗಿ 2 ದಿನಗಳಾಗಿವೆ. ಅದೆಷ್ಟೆ ರಾಷ್ಟ್ರಗಳು ಪದಕ ಪಟ್ಟಿಯಲ್ಲಿ ಇನ್ನೂ ಸ್ಥಾನಪಡೆದಿಲ್ಲ. ಆದರೆ ಭಾರತ ಮೀರಾ ಬಾಯಿ ಬೆಳ್ಳಿ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸದ್ಯ ಭಾರತ ಒಂದು ಬೆಳ್ಳಿ ಪದಕದೊಂದಿಗೆ 12ನೇ ಸ್ಥಾನದಲ್ಲಿದೆ.
undefined
ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಚೀನಾ 3 ಚಿನ್ನ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 4 ಪದಕ ಗೆದ್ದುಕೊಂಡಿದೆ. ಇಟಲಿ, ಜಪಾನ್, ಕೊರಿಯಾ ತಲಾ ಒಂದೊಂದು ಚಿನ್ನದ ಪದಕ ಗೆದ್ದು ನಂತರದ ಸ್ಥಾನದಲ್ಲಿದೆ.
ಟೋಕಿಯೋ ಒಲಿಂಪಿಕ್ಸ್ ಪದಕದವರೆಗೆ ಮಿರಾಬಾಯಿ ಚಾನು ಪಯಣ; ಚಿತ್ರಪಟಗಳಲ್ಲಿನಾಳೆ(ಜು.25) ಭಾರತದ ಪದಕ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಕಾರಣ ಶೂಟಿಂಗ್, ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧೂ, ಟೆನಿಸ್‌ನಲ್ಲಿ ಸಾನಿಯಾ ಮಿರ್ಜಾ, ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್, ಸ್ವಿಮ್ಮಿಂಗ್ ಸೇರಿದಂತೆ ಪ್ರಮುಖ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.